ಬೆಂಗಳೂರು, ಫೆಬ್ರವರಿ 23: ಬೆಂಗಳೂರು (Bangalore) ನಗರದಲ್ಲಿ ಇತ್ತೀಚೆಗೆ ನಮ್ಮ ಮೆಟ್ರೋ ಸ್ಟೇಷನ್ಗಳಲ್ಲಿ ಟ್ರ್ಯಾಕ್ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 2 ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಮೆಟ್ರೋ ಸ್ಟೇಷನ್ಗಳಿಗೆ ಪಿಎಸ್ಡಿ ಅಳವಡಿಸುವಂತೆ ಪ್ರಯಾಣಿಕರಿಂದ ಒತ್ತಾಯ ಕೇಳಿಬಂದಿತ್ತು. ‘ಟಿವಿ9’ ಸಹ ಈ ಬಗ್ಗೆ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಿತ್ತು. ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ಬಿಎಂಆರ್ಸಿಎಲ್ (BMRCL), ಮೆಜಸ್ಟಿಕ್ ಮೆಟ್ರೋ ಸ್ಟೇಷನ್, ಆರ್.ವಿ ರೋಡ್, ಕೆ.ಆರ್.ಪುರ, ಇಂದಿರಾ ನಗರ, ಬೆನ್ನಿಗಾನಹಳ್ಳಿ ಮೆಟ್ರೋ ಸ್ಟೇಷನ್ಗಳಲ್ಲಿ ಸ್ಟೀಲ್ ಬ್ಯಾರಿಕೇಡ್ಗಳನ್ನು ಅಳವಡಿಸಲು ಮುಂದಾಗಿದೆ.
ಈ ಬಗ್ಗೆ ಮೆಟ್ರೋ ಪ್ರಯಾಣಿಕರು ಪ್ರತಿಕ್ರಿಯಿಸಿದ್ದು, ಪಿಎಸ್ಡಿ ಡೋರ್ಗಳನ್ನು ಅಳವಡಿಸಿದರೆ ಮಾತ್ರ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವವರನ್ನು ತಡೆಗಟ್ಟಬಹುದು. ಸ್ಟೀಲ್ ಬ್ಯಾರಿಕೇಡ್ಗಳಿಂದ ಹೆಚ್ಚಿನ ಪ್ರಯೋಜನವಾಗದು ಎಂದಿದ್ದಾರೆ.
ಒಟ್ಟು 83 ಮೆಟ್ರೋ ನಿಲ್ದಾಣಗಳ ಪೈಕಿ ಸದ್ಯ ನಾಲ್ಕರಲ್ಲಿ ಸ್ಟೀಲ್ ಗೇಟ್ಗಳನ್ನು ಅಳವಡಿಸಲಾಗಿದೆ. ಉಳಿದ ಮೆಟ್ರೋ ಸ್ಟೇಷನ್ಗಳಲ್ಲೂ ಪಿಎಸ್ಡಿ ಡೋರ್ ಅಥವಾ ಸ್ಟೀಲ್ ಗೇಟ್ಗಳನ್ನು ಅಳವಡಿಸಿ ಎಂದು ನಮ್ಮ ಮೆಟ್ರೋ ಪ್ರಯಾಣಿಕರು ಬಿಎಂಆರ್ಸಿಎಲ್ಗೆ ಒತ್ತಾಯಿಸುತ್ತಿದ್ದಾರೆ. ಆದರೆ ಬಿಎಂಆರ್ಸಿಎಲ್ ಮಾತ್ರ ಪಿಂಕ್ ಲೈನ್ ಕಾಳೇನ ಅಗ್ರಹಾರ – ನಾಗವಾರ ಮೆಟ್ರೋ ಮಾರ್ಗದ ಅಂಡರ್ ಗ್ರೌಂಡ್ ಮೆಟ್ರೋ ಮಾರ್ಗದಲ್ಲಿ ಪಿಎಸ್ಡಿ ಡೋರ್ ಅಳವಡಿಸಲು ಸಿದ್ದತೆ ಮಾಡಿಕೊಂಡಿದ್ದು, ಈಗಾಗಲೇ ಟೆಂಡರ್ ಕೂಡ ನೀಡಿದೆ.
ಇದನ್ನೂ ಓದಿ: ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL: ಸಿಡಿದೆದ್ದ ಪರಿಸರ ಪ್ರೇಮಿಗಳು
ಒಟ್ಟಿನಲ್ಲಿ ಈಗಾಗಲೇ ಬೇರೆಬೇರೆ ರಾಜ್ಯದಲ್ಲಿರುವ ಮೆಟ್ರೋ ಸ್ಟೇಷನ್ಗಳಲ್ಲಿ ಪಿಎಸ್ಡಿ ಅಳವಡಿಸಿದ್ದಾರೆ. ಆದರೆ ನಮ್ಮ ಮೆಟ್ರೋದಲ್ಲಿ ಇನ್ನೂ ಸ್ಟೀಲ್ ಗೇಟ್, ಬ್ಯಾರಿಕೇಡ್ಗಳನ್ನು ಅಳವಡಿಸಲು ಮುಂದಾಗಿದ್ದಾರೆ. ಅದ್ಯಾವಾಗ ನಮ್ಮಲ್ಲೂ ಪಿಎಸ್ಡಿ ಅಳವಡಿಕೆ ಶುರುವಾಗುತ್ತದೆಯೋ ಕಾದುನೋಡಬೇಕಿದೆ.
