ಆರ್​​ಎಸ್​​ಎಸ್ ಕಾರ್ಯಕ್ರಮದಲ್ಲಿ ಸಲ್ಮಾನ್, ರಣ್​​ಬೀರ್, ಕರಣ್ ಹಾಗೂ ಹಲವರು – Kannada News | Many Bollywood celebrities participated in RSS century program in Mumbai

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆಯ 100 ವರ್ಷಗಳನ್ನು 2025ರ ವಿಜಯದಶಮಿ ಸಂದರ್ಭದಲ್ಲಿ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಂಘವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ‘ಸಂಘ ಯಾತ್ರೆ: ಹೊಸ ದಿಗಂತ’ ಎಂಬ ಎರಡು ದಿನಗಳ ವಿಶೇಷ ಕಾರ್ಯಕ್ರಮವು ಮುಂಬೈನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವು ದಿಗ್ಗಜರು ಭಾಗವಹಿಸಿರುವುದು ಗಮನ ಸೆಳೆಯುತ್ತಿದೆ.

ಮುಂಬೈನ ಭವ್ಯ ಆಡಿಯಿಟೋರಿಯಂನಲ್ಲಿ ನಡೆಯುತ್ತಿರುವ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನ ಭಾಷಣಕಾರರಾಗಿದ್ದು, ಮೋಹನ್ ಭಾಗವತ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿತವಾಗಿದೆ. ಕಾರ್ಯಕ್ರಮದ ಮೊದಲ ದಿನವಾದ ಫೆಬ್ರವರಿ 7ರಂದು ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಕಾರ್ಯಕ್ರಮಕ್ಕೆ ಹಾಜರಾಗಿದ್ದು ಸಾಕಷ್ಟು ಗಮನ ಸೆಳೆದಿತ್ತು. ಕಾರ್ಯಕ್ರಮದಲ್ಲಿ ಆಸೀನರಾಗಿ ಭಾಷಣಗಳನ್ನು ಇಬ್ಬರು ಸೂಪರ್ ಸ್ಟಾರ್​​ಗಳು ಕೇಳಿದರು. ಅವರ ಜೊತೆಗೆ ನಿರ್ದೇಶಕ ಮೋಹಿತ್ ಸೂರಿ, ಸುಭಾಷ್ ಘೈ, ಮಹಾವೀರ್ ಜೈನ್, ಓಂ ರಾವತ್, ವಿಕ್ರಮ್ ಮಲ್ಹೋತ್ರಾ ಹಾಗೂ ಗೀತಕಾರ ಪ್ರಸೂನ್ ಜೋಶಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’

ಕಾರ್ಯಕ್ರಮದ ಎರಡನೇ ದಿನವಾದ ಇಂದು (ಫೆಬ್ರವರಿ 08) ಸಹ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ದಿಗ್ಗಜ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ನಟ ವಿಕ್ಕಿ ಕೌಶಲ್, ಬಾಲಿವುಡ್ ಸ್ಟಾರ್ ನಟಿ ನಟಿ ಅನನ್ಯಾ ಪಾಂಡೆ. ಹಿರಿಯ ನಟ ಜಾಕಿ ಶ್ರಾಫ್, ಪಾಕಿಸ್ತಾನಿ ಮೂಲದ ಗಾಯಕ ಅದ್ನಾನ್ ಸಮಿ, ಜನಪ್ರಿಯ ಟಿವಿ ನಟಿ ರೂಪಾಲಿ ಗಂಗೂಲಿ ಸೇರಿದಂತೆ ಹಲವರು ಭಾಗವಹಿಸಿದ್ದರು. 90ರ ದಶಕದ ಜನಪ್ರಿಯ ನಟಿಯರಾದ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಂಡರು. ಜೊತೆಗೆ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ, ವಿನೀತ್ ಕುಮಾರ್ ಸಿಂಗ್, ನಿರ್ದೇಶಕರು ನಿತೇಶ್ ತಿವಾರಿ, ಅಮರ್ ಕೌಶಿಕ್, ಅಮಿತ್ ಶರ್ಮಾ, ನಿರ್ಮಾಪಕ ರಮೇಶ್ ತೌರಾಣಿ, ಆನಂದ್ ಪಂಡಿತ್, ನಿರ್ದೇಶಕ ಮಧುರ್ ಭಂಡಾರ್ಕರ್, ನಟ ಮಹೇಶ್ ಮಾಂಜ್ರೆಕರ್, ನಿರ್ದೇಶಕ ಆನಂದ್ ಎಲ್ ರೈ ಮೊದಲಾದ ಚಿತ್ರರಂಗದ ಹಲವು ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಮತ್ತು ಅನನ್ಯಾ ಪಾಂಡೆ ಇಬ್ಬರೂ ಒಟ್ಟಿಗೆ ಕುಳಿತಿದ್ದರು. ಈ ಇಬ್ಬರು ‘ಚಾಂದ್ ಮೇರಾ ದಿಲ್’ ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿವೇಕ್ ಸೋನಿ ನಿರ್ದೇಶಿಸುತ್ತಿದ್ದು, ಅನನ್ಯಾಗೆ ಜೋಡಿಯಾಗಿ ‘ಕಿಲ್’ ಸಿನಿಮಾ ಹಾಗೂ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸೀರೀಸ್ ಮೂಲಕ ಗುರುತಿಸಿಕೊಂಡಿರುವ ನಟ ಲಕ್ಷ್ಯ ಲಾಲ್ವಾನಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *