
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಿದ್ಧವಾಗುತ್ತಿದೆ. ಈ ಪಂದ್ಯ ನೋಡಲು ಅಭಿಮಾನಿಗಳು ಕಾದಿದ್ದಾರೆ. ಧೋನಿ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಎರಡು ವಾರ ರೆಸ್ಟ್ ಸೂಚಿಸಲಾಗಿತ್ತು. ಆದರೆ, ಅವರು ಈಗ ಆರ್ಸಿಬಿ ವಿರುದ್ಧ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎನ್ನುವ ಕುತೂಹಲ ಮೂಡಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಹೀನಾಯವಾಗಿ ಸೋತಿತು. ಇಂದು (ಏಪ್ರಿಲ್ 3) ಚೆನ್ನೈ ತಂಡ ಪಂಜಾಬ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಲಯಕ್ಕೆ ಮರಳುವ ತವಕದಲ್ಲಿ ಸಿಎಸ್ಕೆ ಇದೆ. ಧೋನಿ ಇದ್ದಿದ್ದರೆ ಒಂದಷ್ಟು ಮಾರ್ಗದರ್ಶನ ಸಿಗುತ್ತಿತ್ತು ಎಂಬುದು ಪ್ರೇಕ್ಷಕರ ಆಲೋಚನೆ. ಆದರೆ, ಅವರು ಇಂದಿನ ಪಂದ್ಯಕ್ಕೆ ಲಭ್ಯವಾಗೋದು ಅನುಮಾನ.
MS Dhoni is practising in the nets
However, he is still not enough for a game.
— Muthuvel tweets (@Muthuvelpandiy) April 2, 2026
ಧೋನಿ ಅವರು ಇತ್ತೀಗೆ ಪ್ರ್ಯಾಕ್ಟಿಸ್ ಸೆಷನ್ ಅಲ್ಲಿ ಭಾಗಿ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಇಂದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಪರ್ಫಾರ್ಮೆನ್ಸ್ ಕಳಪೆ ಆಗಿದ್ದರೆ ತಂಡವನ್ನು ಉಳಿಸಲು ಧೋನಿ ಅವರು ಎಂಟ್ರಿ ಆಗಬಹುದು ಎಂದು ಹೇಳಲಾಗುತ್ತಾ ಇದೆ. ಹಾಗಾದಲ್ಲಿ ಬೆಂಗಳರಲ್ಲಿ ನಡೆಯುವ ಪಂದ್ಯಕ್ಕೆ ಧೋನಿ ಇರಲಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಮಾರಾಟದಿದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?
ಆರ್ಸಿಬಿ ಹಾಗೂ ಸಿಎಸ್ಕೆ ಮ್ಯಾಚ್ ಆದರೆ ಅಭಿಮಾನಿಗಳು ಇದನ್ನು ಬದ್ಧ ವೈರಿಗಳ ಮ್ಯಾಚ್ ಎಂಬ ರೀತಿಯಲ್ಲಿ ಪರಿಗಣಿಸುತ್ತಾರೆ. ಕಳೆದ ಸೀಸನ್ ಅಲ್ಲಿ ಚೆನ್ನೈ ಎರಡೂ ಪಂದ್ಯಗಳನ್ನು ಆರ್ಸಿಬಿ ವಿರುದ್ಧ ಚೆನ್ನೈ ಸೋತಿದೆ. ಈ ಬಾರಿಯೂ ಅದೇ ಫಾರ್ಮ್ ಉಳಿಸಿಕೊಳ್ಳುವ ಆಲೋಚನೆ ಚೆನ್ನೈಗೆ ಇದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.