ಆಸ್ಪತ್ರೆಯಲ್ಲಿ ತ್ರಿಕೋನ ಪ್ರೇಮಕ್ಕೆ ನರ್ಸ್ ಬಲಿ: ಹೈಕೋರ್ಟ್ ತೀರ್ಪಿನಿಂದ ಅನಸ್ತೇಶಿಯಾ ವೈದ್ಯೆಗೆ ಬಿಗ್ ರಿಲೀಫ್!

ಆಸ್ಪತ್ರೆಯಲ್ಲಿ ತ್ರಿಕೋನ ಪ್ರೇಮಕ್ಕೆ ನರ್ಸ್ ಬಲಿ: ಹೈಕೋರ್ಟ್ ತೀರ್ಪಿನಿಂದ ಅನಸ್ತೇಶಿಯಾ ವೈದ್ಯೆಗೆ ಬಿಗ್ ರಿಲೀಫ್!

ಬೆಂಗಳೂರು, ಏ.7: ಖಾಸಗಿ ಆಸ್ಪತ್ರೆಯೊಂದರ ನರ್ಸ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದೇ ಆಸ್ಪತ್ರೆಯ ಅನಸ್ತೇಶಿಯಾಲಜಿಸ್ಟ್ (Anesthesiologist) ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಆದರೆ, ಮುಖ್ಯ ಆರೋಪಿಯಾಗಿರುವ ವೈದ್ಯನ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯ ಸೂಚಿಸಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸರಿತಾ ಎಂಬ ನರ್ಸ್, ಆಸ್ಪತ್ರೆಯ ವೈದ್ಯ ಪೃಥ್ವಿ ಮತ್ತು ಅನಸ್ತೇಶಿಯಾಲಜಿಸ್ಟ್ ವೈದ್ಯೆಯ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಸರಿತಾ ಅವರ ತಾಯಿ ನೀಡಿದ ದೂರಿನ ಮೇರೆಗೆ ಇಬ್ಬರೂ ವೈದ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಮೂಲಗಳ ಪ್ರಕಾರ, ವೈದ್ಯ ಪೃಥ್ವಿ ಮತ್ತು ನರ್ಸ್ ಸರಿತಾ ನಡುವೆ ಪ್ರೇಮ ಸಂಬಂಧವಿತ್ತು. ಅದೇ ಸಮಯದಲ್ಲಿ ವೈದ್ಯ ಪೃಥ್ವಿ ಅವರಿಗೆ ಅನಸ್ತೇಶಿಯಾಲಜಿಸ್ಟ್ ವೈದ್ಯೆಯ ಜೊತೆಯೂ ಅಫೇರ್ ಇತ್ತು ಎನ್ನಲಾಗಿದೆ. ಈ ತ್ರಿಕೋನ ಪ್ರೇಮ ಕಥೆಯಿಂದ ಬೇಸತ್ತ ಸರಿತಾ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಸ್ನ್ಯಾಪ್ ಚಾಟ್‌ನಲ್ಲಿ ಯುವತಿಗೆ ಗಾಳ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​​ ಮೇಲ್​; ಪೀಕಿದ್ದು 40 ಲಕ್ಷ ಹಣ, 2 ಕೆಜಿ ಚಿನ್ನ!

ಹಾಸ್ಟೆಲ್‌ನ 9ನೇ ಮಹಡಿಯಿಂದ ಜಿಗಿದು ಪಿಯು ವಿದ್ಯಾರ್ಥಿ ಆತ್ಮಹತ್ಯೆ!

ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಮೃತನನ್ನು 21 ವರ್ಷದ ಲಕ್ಷ್ಮ ಮಿಶ್ರಾ ಎಂದು ಗುರುತಿಸಲಾಗಿದೆ. ಮೂಲತಃ ಜಾರ್ಖಂಡ್‌ನ ರಾಂಚಿ ನಿವಾಸಿಯಾಗಿದ್ದ ಲಕ್ಷ್ಮ ಮಿಶ್ರಾ, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಯಲಹಂಕದ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ (2nd PUC) ಓದುತ್ತಿದ್ದ ಇವರು, ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇಂದು ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಹಾಸ್ಟೆಲ್ ಕಟ್ಟಡದ 9ನೇ ಮಹಡಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಬಿಟ್ಟಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಯಲಹಂಕ ನ್ಯೂ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಯ ಈ ಕಠಿಣ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪರೀಕ್ಷಾ ಒತ್ತಡವೇ ಅಥವಾ ವೈಯಕ್ತಿಕ ಕಾರಣಗಳೇ ಎಂಬ ಬಗ್ಗೆ ಪೊಲೀಸರು ಸಹಪಾಠಿಗಳು ಮತ್ತು ಪೋಷಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಂಚಿಯಲ್ಲಿರುವ ಮೃತನ ಪೋಷಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *