ವೈಷ್ಣವಿ ಗೌಡ ಅವರು ಆಗಾಗ ಹೊಸ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಈಗ ಅವರು ಕೆಂಪು ಬಣ್ಣದ ಡ್ರೆಸ್ ಅಲ್ಲಿ ಮಿಂಚಿದ್ದಾರೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ವೈಷ್ಣವಿ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
ವೈಷ್ಣವಿ ಅವರು ವಿವಾಹ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅನುಕೂಲ್ ಮಿಶ್ರಾ ಅವರನ್ನು ವೈಷ್ಣವಿ ಮದುವೆ ಆದರು. ವೈಷ್ಣವಿ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ.
ವೈಷ್ಣವಿ ಗೌಡ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಹಾಕಿದ್ದಾರೆ. ಅವರನ್ನು ಅನೇಕರು ಗುಲಾಬಿ ಹೂವಿಗೆ ಹೋಲಿಕೆ ಮಾಡಿದ್ದಾರೆ. ಅವರಿಗೆ ಈ ಡ್ರೆಸ್ ಸರಿಯಾಗಿ ಹೊಂದಿಕೆ ಆಗುತ್ತದೆ ಎಂಬ ಅಭಿಪ್ರಾಯ ಅನೇಕರದ್ದು.
ವೈಷ್ಣವಿ ಗೌಡ ಅವರು ಧಾರಾವಾಹಿಗಳ ಮೂಲಕ ಮಿಂಚಿದವರು. ‘ಅಗ್ನಿ ಸಾಕ್ಷಿ’ ಧಾರಾವಾಹಿ ಮೂಲಕ ಅವರು ಭೇಷ್ ಎನಿಸಿಕೊಂಡರು. ಆ ಬಳಿಕ ಅವರು ಬಿಗ್ ಬಾಸ್ನಲ್ಲೂ ಕಾಣಿಸಿಕೊಂಡರು.
ವೈಷ್ಣವಿ ಗೌಡ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆಯಿತು. ಈ ಧಾರಾವಾಹಿ ಪೂರ್ಣಗೊಳ್ಳುತ್ತಿದ್ದಂತೆ ಅವರು ವಿವಾಹ ಮಾಡಿಕೊಂಡರು.




