
15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಅಬ್ಬರದ ಆಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಐಪಿಎಲ್ನಲ್ಲಿ ಆರ್ಆರ್ ಪರ ಆಡಿದ ಅವರು, ದಾಖಲೆಯ ಮೇಲೆ ದಾಖಲೆ ಬರೆದಿದ್ದಾರೆ. ಬಾಲಿವುಡ್‌ನ ನಟ ಅಮಿತಾಭ್ ಬಚ್ಚನ್ ಅವರು (Amitabh Bachchan) ವೈಭವ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ವೈಭವ್ ಅವರ ಖುಷಿಯನ್ನು ಹೆಚ್ಚಿಸಿದೆ.
ಅಮಿತಾಭ್ ಬಚ್ಚನ್ ಅವರು ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರಿಂದ ಆಶೀರ್ವಾದ ಸಿಕ್ಕರೆ ಸಾಕು ಎಂದು ಅನೇಕರು ಬಯಸುತ್ತಾ ಇರುತ್ತಾರೆ. ಈಗ ವೈಭವ್ಗೆ ಹೊಗಳಿಕೆ ಹಾಗೂ ಆಶೀರ್ವಾದ ಎರಡೂ ಒಂದರಲ್ಲೇ ಸಿಕ್ಕಿದೆ. ‘ನನಗೆ 15 ವರ್ಷವಿದ್ದಾಗ ಗೋಲಿ ಆಡಲು ಸಹ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಈ ಹುಡುಗ ಈ ವಯಸ್ಸಿಗೆ ಇಷ್ಟು ಅದ್ಭುತವಾಗಿ ಆಡುತ್ತಿದ್ದಾನೆ’ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅನಾರೋಗ್ಯದ ವದಂತಿಗೆ ತೆರೆ ಎಳೆದ ಅಮಿತಾಭ್ ಬಚ್ಚನ್; ಎಂದಿನಂತೆ ಫ್ಯಾನ್ಸ್ ದರ್ಶನ
ಅಮಿತಾಭ್ ಮಾತ್ರವಲ್ಲದೆ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್ ಕೂಡ ಇತ್ತೀಚೆಗೆ ಟ್ವಿಟರ್ ಖಾತೆಯಲ್ಲಿ ವೈಭವ್ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ್ದಾರೆ. ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ 15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಈ ವರ್ಷದ ಅಂಕಿ-ಅಂಶ ಅಚ್ಚರಿ ತರಿಸುವಂತಿದೆ.
T 5756(i) –
Sooryavanshi – १५ साल की उम्र का अद्भुत सूर्या ।
इस उम्र में तो हम बंटों और गुल्ली डंडा भी ठीक से नहीं खेल पा रहे थे !!— Amitabh Bachchan (@SrBachchan) May 29, 2026
- ಒಟ್ಟು ಪಂದ್ಯಗಳು: 16
- ಒಟ್ಟು ರನ್‌ಗಳು: 776
- ಬ್ಯಾಟಿಂಗ್ ಸರಾಸರಿ: 48.50
- ಸ್ಟ್ರೈಕ್ ರೇಟ್: 237.31
- ಅರ್ಧಶತಕಗಳು: 5
- ಶತಕಗಳು: 1
- ಒಟ್ಟು ಸಿಕ್ಸರ್‌ಗಳು: 72 (ಒಂದೇ ಐಪಿಎಲ್ ಸೀಸನ್‌ನಲ್ಲಿ ಬ್ಯಾಟರ್ ಒಬ್ಬರು ಬಾರಿಸಿದ ಗರಿಷ್ಠ ಸಿಕ್ಸರ್ ದಾಖಲೆ)
- ಗರಿಷ್ಠ ಸ್ಕೋರ್: 103
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.