ಟೀಂ ಇಂಡಿಯಾದಲ್ಲಿನ ಅವಕಾಶಗಳ ಕೊರತೆಯಿಂದಾಗಿ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್ನಲ್ಲಿ ಯಾರ್ಕ್ಷೈರ್ ತಂಡದ ಪರ ಆಡುತ್ತಿದ್ದಾರೆ. ಅದರಂತೆ ತಂಡದ ಪರ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಕುಲ್ದೀಪ್ ಗ್ಲಾಮೋರ್ಗನ್ ವಿರುದ್ಧ 10 ಓವರ್ಗಳಲ್ಲಿ ಕೇವಲ 39 ರನ್ಗಳನ್ನು ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ಗಳನ್ನು ಕಬಳಿಸಿದ್ದಾರೆ(PC-PTI).
ಕುಲ್ದೀಪ್ ಯಾದವ್ ತಮ್ಮ ಕೊನೆಯ ಓವರ್ನಲ್ಲಿ ಮೂರು ಎಸೆತಗಳಲ್ಲಿ ಎರಡು ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ ಮ್ಯಾಜಿಕ್ ಪ್ರದರ್ಶಿಸಿದರು. ಮೊದಲಿಗೆ ವಿಕೆಟ್ ಕೀಪರ್ ಅಲೆಕ್ಸ್ ಹಾರ್ಟನ್ ಅವರ ವಿಕೆಟ್ ಪಡೆದ ಕುಲ್ದೀಪ್ ಆ ಬಳಿಕ ಮ್ಯಾಕ್ಲ್ರಾಯ್ ಅವರನ್ನು ಪೆವಿಲಿಯನ್ಗಟ್ಟಿದರು. ಮ್ಯಾಕ್ಲ್ರಾಯ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ(PC-PTI).
ಗಮನಿಸಬೇಕಾದ ಅಂಶವೆಂದರೆ ಟೀಂ ಇಂಡಿಯಾ, ಇಂಗ್ಲೆಂಡ್ ಸರಣಿಯಾದ್ಯಂತ ಕುಲ್ದೀಪ್ ಯಾದವ್ಗೆ ಅವಕಾಶ ನೀಡಲಿಲ್ಲ. ಏಕದಿನ ಸರಣಿಯ ಉದ್ದಕ್ಕೂ ಅವರು ಬೆಂಚ್ ಕಾಯಬೇಕಾಯಿತು. ಹೀಗಾಗಿ ಇಂಗ್ಲೆಂಡ್ನಲ್ಲಿ ಕುಲ್ದೀಪ್ಗೆ ಅವಕಾಶ ನೀಡದಿದ್ದಕ್ಕಾಗಿ ಮಾಜಿ ಕ್ರಿಕೆಟಿಗರು ಮ್ಯಾನೇಜ್ಮೆಂಟ್ ನಿರ್ಧಾರವನ್ನು ಟೀಕಿಸಿದ್ದರು. ಅಲ್ಲದೆ ಟೀಂ ಇಂಡಿಯಾ ಕೂಡ ಏಕದಿನ ಸರಣಿಯನ್ನು ಸೋತಿತ್ತು(PC-PTI).
ಇದೀಗ ಅದೇ ಇಂಗ್ಲೆಂಡ್ನಲ್ಲಿ ಸಿಕ್ಕ ಅವಕಾಶವನ್ನು ಕುಲ್ದೀಪ್ ಸದುಪಯೋಗಪಡಿಸಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಕುಲ್ದೀಪ್ ಮುಂದಿನ ಕೆಲವು ಪಂದ್ಯಗಳನ್ನು ಯಾರ್ಕ್ಷೈರ್ ತಂಡದ ಪರ ಆಡಲಿದ್ದಾರೆ. ಈ ತಂಡದಲ್ಲಿ ಕುಲ್ದೀಪ್ ಹೊರತಾಗಿ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್ರಂತಹ ಸ್ಟಾರ್ ಆಟಗಾರರೂ ಇದ್ದಾರೆ(PC-PTI).
ಇಂಗ್ಲೆಂಡ್ ನೆಲದಲ್ಲಿ ಕುಲ್ದೀಪ್ ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿದರೆ, ಅವರಿಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಗುವುದು ಖಚಿತ. ಏಕೆಂದರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದ್ದು, ತಂಡದಲ್ಲಿ ಅನುಭವಿ ಸ್ಪಿನ್ನರ್ನ ಕೊರತೆಯಿದೆ. ಹೀಗಾಗಿ ಕುಲ್ದೀಪ್ ತಮ್ಮ ಹಳೆಯ ಲಯಕ್ಕೆ ಮರಳಿದರೆ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತ(PC-PTI).
