ರಜತ್ ಶರ್ಮಾ (Rajat Sharma), ಭಾರತೀಯ ಪತ್ರಿಕೋದ್ಯಮದಲ್ಲಿ ಬಲು ದೊಡ್ಡ ಹೆಸರು. ಇಂಡಿಯಾ ಟುಡೆಯ ಎಡಿಟರ್ ಇನ್ ಚೀಫ್ ಆಗಿರುವ ರಜತ್ ಅವರು ಕರೆದರೆ ಇಲ್ಲ ಎನ್ನುವ ರಾಜಕಾರಣಿ, ಸಿನಿಮಾ ಸೆಲೆಬ್ರಿಟಿಗಳಿಲ್ಲ. ಅವರು ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮಕ್ಕೆ ಪ್ರಧಾನಿ, ಮಾಜಿ ಪ್ರಧಾನಿ, ಹಲವಾರು ಸಚಿವರು, ಮುಖ್ಯಮಂತ್ರಿಗಳು, ದೊಡ್ಡ ಕ್ರೀಡಾ ತಾರೆಯರು, ಬಾಲಿವುಡ್ನ ಖಾನ್ ತ್ರಯರು ಎಲ್ಲರೂ ಬಂದು ಹೋಗಿದ್ದಾರೆ. ಹಾಗೆ ಬಂದವರಿಗೆ ರಜತ್ ಶರ್ಮಾ, ಕೆಂಡದಂಥಹಾ ಪ್ರಶ್ನೆಗಳನ್ನೇ ಕೇಳುತ್ತಾರೆ. ಇದೀಗ ಅವರ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಟ ಯಶ್ ಭಾಗಿ ಆಗಿದ್ದಾರೆ. ಯಶ್ ಕಾರ್ಯಕ್ರಮದ ಬಳಿಕ ತಮ್ಮ ನ್ಯೂಸ್ ಬುಲೆಟಿನ್ನಲ್ಲಿ ರಜತ್ ಅವರು ಯಶ್ ಬಗ್ಗೆ ವಿಶೇಷ ಉಲ್ಲೇಖ ಮಾಡಿದ್ದು, ‘ಅಂಥಹಾ ಸ್ಟಾರ್ ನಟ ನಾನು ನೋಡಿರಲಿಲ್ಲ’ ಎಂದು ಭಾವುಕವಾಗಿ ನುಡಿದಿದ್ದಾರೆ.
‘ಯಶ್ ಅವರೊಟ್ಟಿಗೆ ನಾನು ‘ಆಪ್ ಕಿ ಅದಾಲತ್’ ಶೋ ರೆಕಾರ್ಡ್ ಮಾಡಿದೆ. ಅವರು ಬಂದಾಗ ಸ್ಟುಡಿಯೋನಲ್ಲಿದ್ದ ಆಡಿಯೆನ್ಸ್ ಕೊಟ್ಟ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಯ್ತು. ಯಶ್ ಅವರು ಮೊದಲಿಗೆ ತಮ್ಮ ಹಿಂದಿ ಭಾಷೆಯಿಂದ ನನಗೆ ಶಾಕ್ ನೀಡಿದರು. ಅವರ ಮಾತೃಭಾಷೆ ಕನ್ನಡದವಾದರೂ ಅವರು ಅದ್ಭುತವಾಗಿ ಹಿಂದಿ ಮಾತನಾಡಿದರು. ಹಿಂದಿ ತಪ್ಪಾಗುವ ಸಾಧ್ಯತೆ ಇದೆ ಕ್ಷಮಿಸಿ ಎಂದರಾದರೂ ಅವರ ಭಾಷೆ ಅದ್ಭುತವಾಗಿತ್ತು’ ಎಂದು ರಜತ್ ಹೇಳಿದ್ದಾರೆ.
ಆದರೆ ರಜತ್ ಅವರು ಯಶ್ರ ಫ್ಯಾನ್ ಆಗಿದ್ದು, ಅಭಿಮಾನಿಗಳ ಬಗ್ಗೆ ಅವರಿಗೆ ಇರುವ ಕಾಳಜಿಯ ಬಗ್ಗೆ ಮಾತನಾಡಿದಾಗ. ರಜತ್ ಅವರೇ ಹೇಳಿರುವಂತೆ, ‘ಯಶ್ ಒಂದೇ ಬಾರಿ 700ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಫೋಟೊ ನೀಡಿದರಂತೆ’ ಈ ಬಗ್ಗೆ ನಾನು ಯಶ್ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರ ಕೇಳಿ ನನಗೆ ಆಶ್ಚರ್ಯವಾಯ್ತು. ಇವರ ರೀತಿ ಅಭಿಮಾನಿಗಳ ಬಗ್ಗೆ ಯೋಚನೆ ಮಾಡುವ ಮತ್ತೊಬ್ಬ ಸ್ಟಾರ್ ನಟನ ನಾನು ಈ ವರೆಗೆ ನೋಡಿಲ್ಲ’ ಎಂದು ಖುದ್ದು ರಜತ್ ಶರ್ಮಾ ಹೇಳಿದರು.
ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಫ್ಯಾನ್ಸ್ಗೆ ಹಬ್ಬ
ರಜತ್ ಅವರ ಪ್ರಶ್ನೆಗೆ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಯಶ್, ‘ನಾನು ಆಗಾಗ್ಗೆ ಅಭಿಮಾನಿಗಳ ಭೇಟಿ ಮಾಡುತ್ತಿರುತ್ತೇನೆ. ಆದರೆ ನಾನು ಭೇಟಿಗೆ ಹೋಗುವಾಗಲೇ ನಿರ್ಧರಿಸಿ ಹೋಗಿರುತ್ತೇನೆ. ನಾನು ಪ್ರತಿಯೊಬ್ಬರನ್ನೂ ಭೇಟಿ ಆಗಬೇಕು ಎಂದು. ಏಕೆಂದರೆ ಅದು (ಯಶ್ ಜೊತೆ ಫೋಟೊ ತೆಗೆಸಿಕೊಳ್ಳುವುದು) ಅವರ ಪಾಲಿಗೆ ದೊಡ್ಡ ಯಶಸ್ಸು, ಜೀವನ ಪರ್ಯಂತ ಉಳಿಯಬಹುದಾದ ನೆನಪು. ಹಾಗಾಗಿ ನಾನು ಅವರೊಟ್ಟಿಗೆ ಸಿಂಗಲ್ ಆಗಿಯೇ ಫೋಟೊ ತೆಗೆಸಿಕೊಳ್ಳುತ್ತೇನೆ. ಗ್ರೂಫ್ ಫೋಟೊ ತೆಗೆಸಿಕೊಳ್ಳುವುದಿಲ್ಲ’ ಎಂದರು ಯಶ್.
ಯಶ್, ಹೀಗೆ ಹೇಳುತ್ತಿದ್ದಂತೆ, ಅಲ್ಲಿಯೇ ಸ್ಟುಡಿಯೋನಲ್ಲಿದ್ದ ಅಭಿಮಾನಿಗಳು. ‘ಇವತ್ತೂ ಕೂಡ ಸಿಂಗಲ್ ಆಗಿ ಫೋಟೊ ಕೊಡಬೇಕು’ ಎಂದರು. ಯಶ್ ಅದನ್ನು ಒಪ್ಪಿಗೆ ನೀಡಿದ್ದು ಮಾತ್ರವೇ ಅಲ್ಲದೆ, ಸಂದರ್ಶನ ಮುಗಿದ ಬಳಿಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ನಿಂತಿದ್ದು, ಎಲ್ಲರೊಟ್ಟಿಗೂ ಸಿಂಗಲ್ ಫೋಟೊ ತೆಗೆಸಿಕೊಂಡರು. ಎಲ್ಲರಿಗೂ ಹಸ್ತ ಲಾಘವ ಮಾಡಿ ಹಾರೈಸಿದರು. ಇದನ್ನೆಲ್ಲ ನೋಡಿ ರಜತ್ ಶರ್ಮಾ, ಮತ್ತೊಮ್ಮೆ, ‘ಇಂಥಹಾ ಸ್ಟಾರ್ ನಟನ ಈ ವರೆಗೆ ನೋಡಿರಲಿಲ್ಲ’ ಎಂದರು. ಯಶ್ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮ ಇಂಡಿಯಾ ಟಿವಿಯಲ್ಲಿ ಆಗಸ್ಟ್ 15 ರಂದು ಪ್ರಸಾರ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
