
ಟೆಹ್ರಾನ್, ಮಾರ್ಚ್ 23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಜೊತೆ ‘ಪ್ರೊಡಕ್ಟಿವ್ ಮಾತುಕತೆ’ ನಡೆಸಿದ್ದೇವೆ ಎಂಬ ಹೇಳಿಕೆಯನ್ನು ಇರಾನ್ ತಳ್ಳಿಹಾಕಿದೆ. ಇಂಧನದ ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಅಮೆರಿಕ ಈ ರೀತಿಯ ಹೇಳಿಕೆ ನೀಡಿದೆ ಎಂದು ಇರಾನ್ ಟೀಕಿಸಿದೆ. ಇರಾನ್ ಮೇಲೆ ನಡೆಸಲು ಯೋಚಿಸಲಾಗಿದ್ದ ಮಿಲಿಟರಿ ದಾಳಿಗಳಿಗೆ ವಿರಾಮ ನೀಡುವುದಾಗಿ ಟ್ರಂಪ್ ಘೋಷಿಸಿದ ಸ್ವಲ್ಪ ಸಮಯದ ನಂತರ ಇರಾನ್ ರಾಯಭಾರ ಕಚೇರಿ ಈ ಹೇಳಿಕೆ ಬಿಡುಗಡೆ ಮಾಡಿದೆ.
“ಇರಾನ್‌ನ ದೃಢ ಎಚ್ಚರಿಕೆಯ ನಂತರ ಟ್ರಂಪ್ ನಮ್ಮ ದೇಶದ ಮೇಲೆ ದಾಳಿ ನಡೆಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇರಾನ್‌ನ ಇಂಧನ ಮೂಲಸೌಕರ್ಯದ ಮೇಲೆ ಯಾವುದೇ ಯುಎಸ್ ದಾಳಿ ನಡೆದರೂ ಅದು ಇಡೀ ಪ್ರದೇಶದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಇದಾದ ನಂತರವೇ ಟ್ರಂಪ್ ಹಿಂದೆ ಸರಿದು ಇರಾನ್ ಮೇಲಿನ ದಾಳಿಯನ್ನು ಮುಂದೂಡಲು ಆದೇಶ ಹೊರಡಿಸಿದ್ದಾರೆ” ಎಂದು ಇರಾನ್‌ನ ರಾಯಭಾರ ಕಚೇರಿ ತಿಳಿಸಿದೆ.
BREAKING | Iran’s Foreign Ministry: There are no negotiations between Tehran and Washington. The statements by the U.S. president are part of an effort to lower energy prices and buy time for implementing his military plans. — Iran Military Media (@IRMilitaryMedia) March 23, 2026
ಇದನ್ನೂ ಓದಿ: ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ
ಟ್ರಂಪ್ ಅವರ ಈ ಹೇಳಿಕೆಗಳು ಇಂಧನದ ಬೆಲೆಗಳನ್ನು ಕಡಿಮೆ ಮಾಡುವ ಮತ್ತು ಮುಂದಿನ ದಾಳಿಗೆ ಸಮಯವನ್ನು ಮಾಡಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದ್ದು, ಇರಾನ್ ಮತ್ತು ಅಮೆರಿಕದ ನಡುವೆ ಪ್ರಸ್ತುತ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಹೇಳಿದೆ.
ಇದರ ನಡುವೆ, ಇಸ್ರೇಲಿನ ಸೈನ್ಯವು ಇಂದು ಇರಾನ್ನಲ್ಲಿ ಮತ್ತೊಂದು ದಾಳಿಯನ್ನು ಪ್ರಾರಂಭಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ