ಇದೆಂತಹ ಅವಮಾನ… ಪಾಕಿಸ್ತಾನ್ ತಂಡಕ್ಕೆ ‘ಬಾಬರ್’ ಭಯ

ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಪಾಕ್ ತಂಡದಿಂದಲೇ ಭಾರೀ ಅವಮಾನಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ನಡೆದ ಬಿಗ್ ಬ್ಯಾಷ್ ಲೀಗ್​ನಲ್ಲಿ ಸ್ಟೀವ್ ಸ್ಮಿತ್ ಬಾಬರ್​ಗೆ ಸ್ಟ್ರೈಕ್​ ನೀಡದೇ ಅವಮಾನಕ್ಕೀಡು ಮಾಡಿದ್ದರು. ಇದೀಗ ಪಾಕಿಸ್ತಾನ್ ತಂಡದ ಕೋಚ್ ಮೈಕ್ ಹೆಸ್ಸೆನ್ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ಬ್ಯಾಟಿಂಗ್​ಗೆ ಕಳುಹಿಸದೇ ಡಗೌಟ್​ನಲ್ಲಿ ಕೂರಿಸಿದ್ದಾರೆ.

ಕೊಲಂಬೊದ ಎಸ್​ಎಸ್​ಸಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನಮೀಬಿಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 107 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಬ್ಯಾಟಿಂಗ್​ಗೆ ಬರಲು ಬಾಬರ್ ಆಝಂ ಸಿದ್ಧರಾಗಿದ್ದರು.

ಆದರೆ ಬಾಬರ್ ಆಝಂ ಸ್ಥಾನದಲ್ಲಿ ಖ್ವಾಜಾ ನಫಾಯ್ ಅವರನ್ನು ಕಳುಹಿಸಲಾಯಿತು. ಆದರೆ ಖ್ವಾಜಾ ಕೇವಲ 5 ರನ್​ಗಳಿಸಿ ಔಟಾಗಿದ್ದರು. ಇದಾಗ್ಯೂ 5ನೇ ಕ್ರಮಾಂಕದಲ್ಲಿ ಬಾಬರ್ ಆಝಂ ಅವರನ್ನು ಕಳುಹಿಸಿರಲಿಲ್ಲ. ಬದಲಾಗಿ  ಶಾದಾಬ್ ಖಾನ್ ಅವರಿಗೆ ಮುಂಬಡ್ತಿ ನೀಡಲಾಯಿತು.

ಇದಕ್ಕೆ ಮುಖ್ಯ ಕಾರಣ ಬಾಬರ್ ಅವರ ನಿಧಾನಗತಿಯ ಬ್ಯಾಟಿಂಗ್. ಇದಕ್ಕೂ ಮುನ್ನ ನಡೆದ ಭಾರತದ ವಿರುದ್ಧ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಬಾಬರ್ 7 ಎಸೆತಗಳಲ್ಲಿ ಕೇವಲ 5 ರನ್​ ಗಳಿಸಿದ್ದರು. ಹಾಗೆಯೇ ನೆದರ್​ಲೆಂಡ್ಸ್ ವಿರುದ್ಧ 18 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 15 ರನ್​ಗಳು ಮಾತ್ರ.

ಇತ್ತ ನಮೀಬಿಯ ವಿರುದ್ಧದ ಪಂದ್ಯವು ನಿರ್ಣಾಯಕವಾಗಿದ್ದರಿಂದ ಬಾಬರ್​ಗೆ ಬ್ಯಾಟಿಂಗ್ ಅವಕಾಶ ನೀಡದಿರಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದ್ದಾರೆ. ಹೀಗಾಗಿ ಖ್ವಾಜಾ ನಫಾಯ್ ಹಾಗೂ ಶಾದಾಬ್ ಖಾನ್​​ಗೆ ಮುಂಬಡ್ತಿ ನೀಡಲಾಗಿದೆ.

ವಿಶೇಷ ಎಂದರೆ ಪಾಕಿಸ್ತಾನ್ ತಂಡವು 69 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದೆ. ಈ ವೇಳೆ ಬಾಬರ್​ಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡದಿರುವುದು ಇದೇ ಮೊದಲು. ಅಂದರೆ ಬಾಬರ್ ಆಝಂ ಕಣಕ್ಕಿಳಿದರೆ ತಂಡದ ರನ್ ಗತಿ ಕುಂಠಿತವಾಗಲಿದೆ ಎಂಬ ಭಯವೊಂದು ಪಾಕಿಸ್ತಾನ್ ತಂಡಕ್ಕೆ ಆವರಿಸಿದೆ. ಹೀಗಾಗಿಯೇ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ನೀಡಿಲ್ಲ. ಇದರಿಂದ ಭಾರೀ ಅವಮಾನಕ್ಕೊಳಗಾಗಿರುವ ಬಾಬರ್ ಆಝಂ ಮುಂದಿನ ಪಂದ್ಯದಿಂದ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

 

 

 

Source link

Leave a Reply

Your email address will not be published. Required fields are marked *