ಇದ್ದ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೆ ವರ್ಗಾವಣೆ: ಸಚಿವರ ಆಪ್ತ ಕಾರ್ಯದರ್ಶಿ ಪತ್ನಿಗೆ ಒಲಿದ ಡಿಸಿ ಭಾಗ್ಯ – Kannada News | Bengaluru Rurl DC Basavaraj transferred, Minister KH muniyappa PS Wife CEO Anuradha appointed As New DC

ಬೆಂಗಳೂರು, (ಫೆಬ್ರವರಿ 27): ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಸಿಟಿ ಔಟ್ ಸ್ಕಟ್ಸ್ ನಲ್ಲಿ ಕೆಂಪೇಗೌಡ ಏರ್ಪೋಟ್ ನಿಂದ ಪ್ರಸಿದ್ದಿಯಾಗಿರುವ ಪ್ಯೂಚರ್ ಬೆಂಗಳೂರು (Bengaluru) ಅಂತಲೆ ಕರೆಸಿಕೊಳ್ಳುವ ಜಿಲ್ಲೆ. ಹೀಗಾಗಿ ಜಿಲ್ಲೆಗೆ ಬರಲು ಅಧಿಕಾರಿಗಳು ತುದ್ದಿಗಾಲಲ್ಲಿ ನಿಲ್ಲುತ್ತಿದ್ದು, ಡಿಮ್ಯಾಂಡ್ ಸಹ ಹಚ್ಚಿದೆ. ಇಷ್ಟು ಡಿಮ್ಯಾಂಡ್ ನಡುವೆಯೂ ಸಿಇಒ ಆಗಿ ಎರೆಡೂವರೆ ವರ್ಷದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಅನುರಾಧ ಕೆ ಎನ್ ಡಿಸಿಯಾಗಿ ಮುಂಬಡ್ತಿ ಪಡೆದಿದ್ದರೆ, ಬಂದ ಒಂದು ವರ್ಷಕ್ಕೆ ಜಿಲ್ಲಾಧಿಕಾರಿ ಬಸವರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಅಚ್ಚರಿ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೇ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಈ ಜಾಗಕ್ಕೆ ಇದೀಗ ಸಚಿವ ಆಪ್ತ ಕಾರ್ಯದರ್ಶಿ ಸಿಇಒ ಆಗಿದ್ದ ಅನುರಾಧ ಅವರನ್ನೇ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಚಿವರ ಆಪ್ತ ಕಾರ್ಯದರ್ಶಿಗೆ ಎರಡು ಹುದ್ದೆ

ಹೌದು..ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಿಇಒ ಆಗಿ ಕಳೆದ ಎರಡೂವರೆ ವರ್ಷದಿಂದೆ ಕೆ ಎನ್ ಅನುರಾಧ ಅವರು ಅಧಿಕಾರ ಸ್ವೀಕರಿಸಿದ್ದರು. ಜೊತೆಗೆ ಕಳೆದ ಒಂದು ವರ್ಷದಿಂದ ಜಿಲ್ಲೆಗೆ ಡಿಸಿಯಾಗಿ ಎ ಬಿ ಬಸವರಾಜ್ ಅವರು ಬಂದಿದ್ದರು. ಡಿಸಿ ಮತ್ತು ಸಿಇಒ ಇಬ್ಬರು ಜಿಲ್ಲೆಯಲ್ಲಿ ಆಕ್ಟೀವ್ ಆಗಿ ಓಡಾಡಿಕೊಂಡು ಕೆಲಸ ಮಾಡುತ್ತಾ ಜನಮನ್ನಣೆ ಗಳಿಸಿದ್ದರು. ಆದ್ರೆ ಇದೀಗ ಡಿಸಿಯಾಗಿ ಬಂದ ಒಂದು ವರ್ಷಕ್ಕೆ ಬಸವರಾಜ್ ಅವರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜೊತೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಳೆದ ಎರೆಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಇಒ ಅನುರಾಧ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಜಿಲ್ಲಾ ಪಂಚಾಯತಿಯ ಪ್ರಭಾರ ಸಿಇಒ ಆಗಿಯೂ ಅನುರಾಧ ಅವರನ್ನೇ ಮುಂದುವರೆಸಲಾಗಿದೆ. ಅನುರಾಧ ಅವರು ಸಚಿವ ಕೆ.ಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿಯಾಗಿದ್ದಾರೆ. ಹೀಗಾಗಿ ಅವರಿಗೆ ಈ ಭಾಗ್ಯ ದೊರೆತಿದೆ ಎಂದು ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.

ಇದನ್ನೂ ನೋಡಿ: ಮುಂದೆ ಕಾಂಗ್ರೆಸ್ ಸರ್ಕಾರ ಬರೋದು ಕಷ್ಟ! ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಶಾಸಕ ಬಾಲಕೃಷ್ಣ ಶಾಕಿಂಗ್ ಮಾತು

ಒಂದೇ ವರ್ಷಕ್ಕೆ ಅದು ಸ್ಥಳ ತೋರಿಸದೇ ವರ್ಗಾವಣೆ ಮಾಡಿರುವುದಕ್ಕೆ ಬಸವರಾಜ್ ಶಾಕ್ ಆಗಿದ್ದಾರೆ. ಜೊತೆಗೆ ನೂತನ ಡಿಸಿಯಾಗಿ ನೇಮಕ ಜೊತೆಗೆ ಜಿಲ್ಲಾ ಪಂಚಾಯತಿ ಸಿಇಒ ಆಗಿಯೂ ಅನುರಾಧ ಅವರನ್ನ ಮುಂದುವರೆಸಿರುವುದು ಜಲ್ಲೆಯಲ್ಲಿ ಹಲವು ಚರ್ಚೆಗಳನ್ನ ಹುಟ್ಟುಹಾಕಿದೆ. ಜೊತೆಗೆ ನೂತನ ಡಿಸಿ ಕೆ ಎನ್ ಅನುರಾಧ ಅವರು ಸಚಿವ ಕೆಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿ ಅನ್ನೋ ಕಾರಣಕ್ಕೆ ಎರೆಡೂವರೆ ವರ್ಷದಿಂದ ಜಿಲ್ಲೆಯಲ್ಲೆ ಉನ್ನತ ಸ್ಥಾನದಲ್ಲಿ ಮುಂದುವರೆಸಿದ್ದು, ಇದೀಗ ಡಿಸಿಯಾಗಿ ಬಡ್ತಿ ಸಹ ನೀಡಿದ್ದಾರೆ ಅನ್ನೂ ಮಾತು ಸಹ ಕೇಳಿ ಬರುತ್ತಿವೆ. ಇನ್ನೂ ಜಿಲ್ಲೆಯಲ್ಲಿ ಈಗಾಗಲೇ ಸಚಿವರ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಉನ್ನತ ಹುದ್ದೇಗಳಿಗೆ ನೇಮಕ ಮಾಡ್​ತಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬರ್ತಿದ್ದು, ಇದೀಗ ಡಿಸಿ ದಿಡೀರ್ ವರ್ಗಾವಣೆ ಮಾಡಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಇತ್ತೀಚೆಗಷ್ಟೆ ಅಧಿಕಾರಿಗಳಿಗೆ ಸ್ಥಾನ ತೋರಿಸದೆ ಎತ್ತಂಗಡಿ ಮಾಡುತ್ತಿದ್ದಾರೆ ಅಂತ ಹೈಕೋರ್ಟ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಡಿಸಿ ಬಸವರಾಜ್ ಗೆ ಯಾವುದೇ ಸ್ಥಾನ ತೋರಿಸದೆ ವರ್ಗಾವಣೆ ಮಾಡಿರುವುದು ಸರ್ಕಾರದ ನಡೆ ಬಗ್ಗೆ ನಾನಾ ರೀತಿ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *