
ನವದೆಹಲಿ, ಏಪ್ರಿಲ್ 7: ಕದನವಿರಾಮ ಅಥವಾ ಶಾಂತಿ ಮಾತುಕತೆಗೆ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ 10 ದಿನಗಳ ಗಡುವು ನಾಳೆ ಬೆಳಗ್ಗೆ ಅಂತ್ಯಗೊಳ್ಳಲಿದೆ. ಹೀಗಾಗಿ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ಸಂಜೆ ತುರ್ತು ಸಲಹೆಯನ್ನು ನೀಡಿದ್ದು, ಸಂಭಾವ್ಯ ಉದ್ವಿಗ್ನ ಪರಿಸ್ಥಿತಿಯ ನಡುವೆ ಇರಾನ್ ದೇಶದಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ. ಭಾರತೀಯ ಪ್ರಜೆಗಳು ಕನಿಷ್ಠ 48 ಗಂಟೆಗಳ ಕಾಲ ತಾವು ಎಲ್ಲಿದ್ದಾರೋ ಅದೇ ಸ್ಥಳಗಳಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಹಾಗೇ ಅನಗತ್ಯ ಓಡಾಟ ಮಾಡದೆ ಮನೆಯೊಳಗೆ ಇರಬೇಕೆಂದು ಸೂಚಿಸಿದೆ.
ನಾಳೆ ಸಂಭವಿಸಬಹುದಾದ ದಾಳಿಯ ವಿರುದ್ಧ ಮುನ್ನೆಚ್ಚರಿಕೆಯಾಗಿ ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳಲ್ಲಿ ಇರದಂತೆ ಭಾರತೀಯರಿಗೆ ಸೂಚಿಸಲಾಗಿದೆ. ಹಾಗೇ, ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಮನ್ವಯವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಲಾದ ಹೋಟೆಲ್‌ಗಳಲ್ಲಿ ವಸತಿ ಹೊಂದಿರುವವರು ಒಳಗೆಯೇ ಇರಲು ಮತ್ತು ಸ್ಥಳದಲ್ಲೇ ಇರುವ ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಲು ನಿರ್ದೇಶಿಸಲಾಗಿದೆ.
Advisory as on 07 April 2026. pic.twitter.com/xsrpoOvx0f — India in Iran (@India_in_Iran) April 7, 2026
ಇದನ್ನೂ ಓದಿ: ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್‌ಗೆ ಟ್ರಂಪ್ ಬೆದರಿಕೆ
“ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಲಾದ ಹೋಟೆಲ್‌ಗಳಲ್ಲಿರುವವರು ಮನೆಯೊಳಗೆ ಇರಬೇಕು ಮತ್ತು ಸ್ಥಳದಲ್ಲೇ ಇರುವ ರಾಯಭಾರ ಕಚೇರಿಯ ತಂಡಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಬೇಕು. ಅಧಿಕೃತ ನವೀಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲು ಸೂಚಿಸಲಾಗಿದೆ. ರಾಯಭಾರ ಕಚೇರಿಯ ತುರ್ತು ಸಂಖ್ಯೆಗಳು (989128109115, 989128109102, 989128109109, 989932179359) ಕಾರ್ಯನಿರ್ವಹಿಸುತ್ತಲೇ ಇರುತ್ತವೆ” ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ