ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು? – Kannada News | EPFO decides interest rate for EPF accounts for 26fy

ನವದೆಹಲಿ, ಮಾರ್ಚ್ 2: ಈ ಹಣಕಾಸು ವರ್ಷಕ್ಕೆ ಇಪಿಎಫ್ ಅಕೌಂಟ್​ಗಳಿಗೆ ನೀಡಬೇಕಿರುವ ಬಡ್ಡಿ ಹಣವನ್ನು (EPF interest rate) ನಿರ್ಧರಿಸಲಾಗಿದೆ. ವರದಿ ಪ್ರಕಾರ 2025-26ರ ವರ್ಷಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿದರ ನಿಗದಿ ಮಾಡಲಾಗಿದೆ. ಕಳೆದ ವರ್ಷವೂ ಇಷ್ಟೇ ಬಡ್ಡಿ ದರ ಇತ್ತು. ಸತತ ಮೂರು ವರ್ಷದಿಂದ ಇಪಿಎಫ್​ಒ ಶೇ. 8.25 ಬಡ್ಡಿ ನೀಡುತ್ತಿದೆ. 2022-23ರಲ್ಲಿ ಇಪಿಎಫ್ ವಾರ್ಷಿಕ ಬಡ್ಡಿ ದರ ಶೇ. 8.15 ಇತ್ತು. 2023-24ರಲ್ಲಿ ಅದನ್ನು ಶೇ. 8.25ಕ್ಕೆ ಏರಿಸಲಾಯಿತು. ನಂತರ ಅದೇ ದರವನ್ನು ಮುಂದುವರಿಸಿಕೊಂಡು ಬರಲಾಗಿದೆ.

ಇಪಿಎಫ್​ಒದ ಕೇಂದ್ರೀಯ ಟ್ರಸ್ಟ್​ಗಳ ಮಂಡಳಿಯ (ಸಿಬಿಟಿ) 239ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನಸುಖ್ ಮಾಂಡವೀಯ ನೇತೃತ್ವದಲ್ಲಿ ಈ ಸಭೆ ನಡೆದಿದೆ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

ಹಿಂದಿನ ವರ್ಷಗಳಲ್ಲಿ ಇದ್ದ ಇಪಿಎಫ್ ಬಡ್ಡಿದರಗಳು

  • 2025-26: ಶೇ. 8.25
  • 2024-25: ಶೇ. 8.25
  • 2023-24: ಶೇ. 8.25
  • 2022-23: ಶೇ. 8.15
  • 2021-22: ಶೇ. 8.10
  • 2020-21: ಶೇ. 8.50
  • 2019-20: ಶೇ. 8.50
  • 2018-19: ಶೇ. 8.65
  • 2017-18: ಶೇ. 8.55
  • 2016-17: ಶೇ. 8.65
  • 2015-16: ಶೇ. 8.8
  • 2014-15: ಶೇ. 8.75
  • 2013-14: ಶೇ. 8.75
  • 2012-13: ಶೇ. 8.5
  • 2011-12: ಶೇ. 8.25

ಈ ಹಣಕಾಸು ವರ್ಷ ಮುಗಿದ ಬಳಿಕ ಇಪಿಎಫ್ ಹಣಕ್ಕೆ ಬಡ್ಡಿ ಹಣ ಸೇರ್ಪಡೆಯಾಗುತ್ತದೆ. ಅಂದರೆ ಮಾರ್ಚ್ ಕಳೆದ ನಂತರ ಇಪಿಎಫ್ ಬಡ್ಡಿ ಹಣ ಜಮೆ ಆಗುವುದನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಇಪಿಎಫ್ ಬಡ್ಡಿ ದರ ಹೇಗೆ ನಿರ್ಧಾರವಾಗುತ್ತದೆ?

ಇಪಿಎಫ್​ಒ ಸಂಸ್ಥೆ ತನ್ನ ನಿಧಿಯಲ್ಲಿರುವ ಎಲ್ಲಾ ಹಣವನ್ನೂ ನಿರ್ದಿಷ್ಟ ಹೂಡಿಕೆಗಳಿಗೆ ಹಾಕುತ್ತದೆ. ಅದರಲ್ಲಿ ಬಂದಿರುವ ಆದಾಯವನ್ನು ಆಧಾರವಾಗಿಟ್ಟುಕೊಂಡು ಬಡ್ಡಿ ಹಣ ನಿರ್ಧರಿಸುತ್ತದೆ. ಪ್ರತಿಯೊಂದು ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಈ ಬಡ್ಡಿ ಹಣ ಸೇರ್ಪಡೆಯಾಗುತ್ತದೆ.

ನೀವು ಉಮಾಂಗ್ ಆ್ಯಪ್ ಅಥವಾ ಇಪಿಎಫ್ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿ, ಅಲ್ಲಿ ಪಾಸ್​ಬುಕ್ ಓಪನ್ ಮಾಡಿ ಪಿಎಫ್ ಬ್ಯಾಲನ್ಸ್ ಪರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *