
ಭಾರತದಲ್ಲಿ ರಿಟೈರ್ಮೆಂಟ್ಗೆ ಪ್ಲಾನಿಂಗ್ (Retirement Planning) ಮಾಡುವವರ ಸಂಖ್ಯೆ ಬಹಳ ಕಡಿಮೆ. ಮಧ್ಯ ಮಧ್ಯದಲ್ಲಿ ಬರುವ ಖರ್ಚು ವೆಚ್ಚಗಳಿಗೇ ಎಲ್ಲಾ ಸಂಪಾದನೆ ಸರಿ ಮಾಡಿಕೊಳ್ಳುವುದುಂಟು. ಆಫೀಸ್ನಲ್ಲಿ ಸಿಗುವ ಇಪಿಎಫ್, ಗ್ರಾಚುಟಿ ಹಣ ನಿವೃತ್ತಿ ನಂತರ ಸಾಕಾಗಬಹುದು ಎಂಬುದು ಬಹಳ ಜನರ ಎಣಿಕೆ. ಆದರೆ, ಇದು ತಪ್ಪು ಎಣಿಕೆ. ಸದ್ಯ ರಿಟೈರ್ಮೆಂಟ್ ಪ್ಲಾನಿಂಗ್ಗೆ ಮೂರು ರೀತಿಯ ಆಯ್ಕೆಗಳಿವೆ. ಒಂದು, ಇಪಿಎಫ್ ಹಣ. ಎರಡನೆಯದು ಎನ್ಪಿಎಸ್. ಮೂರನೆಯದು ಮ್ಯೂಚುವಲ್ ಫಂಡ್. ಮೂರನ್ನೂ ಬಳಸಿ ಪ್ಲಾನಿಂಗ್ ಮಾಡಿಕೊಳ್ಳಬಹುದು.
ಇಪಿಎಫ್, ಎನ್ಪಿಎಸ್ ಮತ್ತು ಮ್ಯೂಚುವಲ್ ಫಂಡ್ ಈ ಮೂರು ಕೂಡ ಬೇರೆ ಬೇರೆ ಪಾತ್ರ, ಸ್ವಭಾವ ಹೊಂದಿವೆ. ಇಪಿಎಫ್ನಲ್ಲಿ ಸಾಮಾನ್ಯವಾಗಿ ಶೇ. 8ಕ್ಕಿಂತಲೂ ಹೆಚ್ಚು ವಾರ್ಷಿಕ ಬಡ್ಡಿ ಸಿಗುತ್ತದೆ. ಆದರೆ, ಶೇ. 9ರ ಒಳಗೆ ಅದು ಇರುತ್ತದೆ. ಸಂಬಳದ ಜೀವನದಲ್ಲಿರುವವರಿಗೆ ಅದು ಮೂಲಭೂತವಾದ ರಿಟೈರ್ಮೆಂಟ್ ಸ್ಕೀಮ್.
ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ
ಎನ್ಪಿಎಸ್ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಮ್ ಸ್ವಲ್ಪ ಈಕ್ವಿಟಿ ಕಡೆ ಮುಖ ಮಾಡಿರುವ ಯೋಜನೆ. ಈಕ್ವಿಟಿ, ಬಾಂಡ್, ಗವರ್ನ್ಮೆಂಟ್ ಸೆಕ್ಯೂರಿಟೀಸ್ಗಳಿಗೆ ಜೋಡಿತವಾಗಿದೆ. ಹೂಡಿಕೆದಾರರಿಗೆ ಆಯ್ಕೆಯಲ್ಲಿ ಫ್ಲೆಕ್ಸಿಬಿಲಿಟಿ ಸ್ವಲ್ಪ ಇರುತ್ತದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳುವವರು ಪೂರ್ಣ ಈಕ್ವಿಟಿ ಸ್ಕೀಮ್ ಆಯ್ದುಕೊಳ್ಳಬಹುದು.
ಎನ್ಪಿಎಸ್ನಲ್ಲಿರುವ ಹೂಡಿಕೆ ಶೇ. 10ರಿಂದ 14ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಬಹುದು. ಗಮನಿಸಬೇಕಾದ ಸಂಗತಿ ಎಂದರೆ, ರಿಟೈರ್ ಆದಾಗ ಒಟ್ಟಾರೆ ಕಾರ್ಪಸ್ನಿಂದ ಶೇ. 80ರಷ್ಟನ್ನು ವಿತ್ಡ್ರಾಯಲ್ ಮಾಡಬಹುದು. ಉಳಿದ ಶೇ. 20ರಷ್ಟನ್ನು ಆ್ಯನುಟಿ ಪ್ಲಾನ್ ಖರೀದಿಗೆ ಬಳಸಬೇಕಾಗುತ್ತದೆ.
ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್ಗಳ ಎಫ್ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್
ಮ್ಯೂಚುವಲ್ ಫಂಡ್ನಲ್ಲಿ ಸ್ವಾತಂತ್ರ್ಯ
ಮ್ಯೂಚುವಲ್ ಫಂಡ್ಗಳು ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿರುವಂಥವು. ಅದರಲ್ಲೂ ಹೆಚ್ಚಿನ ಈಕ್ವಿಟಿ ಫಂಡ್ಗಳು ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ಕೊಟ್ಟಿವೆ. ರಿಟೈರ್ಮೆಂಟ್ ಪ್ಲಾನಿಂಗ್ಗೆ ಈ ಫಂಡ್ಗಳು ಬಹಳ ಉಪಯುಕ್ತ ಎನಿಸುತ್ತವೆ. ದೀರ್ಘಾವಧಿಯಲ್ಲಿ ಇವುಗಳು ಸಾಮಾನ್ಯವಾಗಿ ಶೇ. 12ರಿಂದ ಶೇ. 15ರಷ್ಟು ರಿಟರ್ನ್ ಕೊಡಬಲ್ಲುವು. ಅಂತಿಮ ಹಣಕ್ಕೆ ಶೇ. 12.5ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ ಎನ್ನುವುದು ಬಿಟ್ಟರೆ ಹೆಚ್ಚಿನ ರಿಟರ್ನ್ಸ್ ನಿಮ್ಮ ಕೈ ಸೇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ