ಇರಾನ್​​​​ ಹೊತ್ತಿ ಉರಿಯಲು ಈ ಹುಡುಗಿಯೇ ಕಾರಣ: 2024ರ ಈ ವಿಡಿಯೋ ನೆನಪಿದ್ಯಾ? – Kannada News | Ahoo Daryaei’s Bold Protest: The Spark for Iran’s Women’s Freedom Movement

ಕೆಲವೊಂದು ಹೋರಾಟ ಒಂದು ಬದಲಾವಣೆಗಳನ್ನು ತರುತ್ತದೆ. ಇರಾನ್​​​ನಲ್ಲಿ ಇದೀಗ ನಡೆಯುತ್ತಿರುವುದು ಅದೇ, ಇರಾನ್​​ನಲ್ಲಿ ಭಾರೀ ದೊಡ್ಡ ಸಂಘರ್ಷ ಶುರುವಾಗಿದೆ. ಒಂದು ಕಡೆ ಇಸ್ರೇಲ್​​​ , ಅಮೆರಿಕ ದಾಳಿ ಮಾಡಿದ್ರೆ ಮತ್ತೊಂದು ಕಡೆ ಇರಾನ್​​​​ನ ಮಹಿಳೆಯರೇ ತಮ್ಮ ಮೇಲಿನ ದಬ್ಬಾಳಿಕೆ ಬಗ್ಗೆ ದಂಗೆ ಎದ್ದಿದ್ದಾರೆ. ಈ ದಂಗೆ ಪ್ರಾರಂಭವಾಗಿರುವುದೇ ಅಹೂ ದರ್ಯಾಯೀ ಎಂಬ ಹುಡುಗಿಯಿಂದ, ಇಡೀ ಜಗತ್ತು ಇದೀಗ ಇರಾನ್​ ಕಡೆ ನೋಡಲು ಈ ಹುಡುಗಿಯೇ ಕಾರಣ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹೇಳಲಾಗುತ್ತಿದೆ.  ಅಂದು ಈ ಹುಡುಗಿ ನಡೆಸಿದ ಹೋರಾಟದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ 2024 ನವೆಂಬರ್​​​​ 3ರಂದು ನಡೆದ ಘಟನೆ ಏನು? ಟೆಹ್ರಾನ್‌ನ ರಸ್ತೆಯ ಮಧ್ಯದಲ್ಲಿ ಈ ಅಹೂ ದರ್ಯಾಯೀ ಮಾಡಿದ್ದೇನು? ಇಂದು ಇರಾನ್​​ ಈ ಸ್ಥಿತಿಗೆ ಬರಲು ಈ ಮಹಿಳೆ ಕಾರಣವೇ ಎಂಬೆಲ್ಲ ಪ್ರಶ್ನೆಗಳು ಮೂಡಿದೆ. ಇದೀಗ ಮತ್ತೆ ಈ ಹುಡುಗಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದಾಳೆ.

2024 ನವೆಂಬರ್ 3 ರ ಭಾನುವಾರದಂದು ಟೆಹ್ರಾನ್‌ನ ರಸ್ತೆಯ ಮಧ್ಯದಲ್ಲಿ ತನ್ನ ಬಟ್ಟೆಗಳನ್ನು ತೆಗೆದು ಬಿಕಿನಿಯಲ್ಲಿ ಪ್ರತಿಭಟಿಸಿದ ಇರಾನ್‌ನ ಅಹೂ ದರಾಯೈ ಎಂಬ ಹುಡುಗಿ, ದೇಶದ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟನೆ ನಡೆಸಿದ್ದಳು. ಅಹೂ ದರಾಯೈ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ನಿಯಮ ಹಾಗೂ ಹಿಂಸೆಯನ್ನು ವಿರೋಧಿಸಲು ತನ್ನ ಬಟ್ಟೆಗಳನ್ನು ತೆಗೆದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು ಈ ಹುಡುಗಿ ಎಂದು ವರದಿಗಳು ಹೇಳುತ್ತದೆ. ಇಲ್ಲಿಂದಲ್ಲೇ ಈ ಇರಾನ್​​​​​ ಪತನಕ್ಕೆ ಕಾರಣವಾಗಿದ್ದು ಎಂದು ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಟೆಹ್ರಾನ್‌ನ ರಸ್ತೆಯ ಮಧ್ಯ ತನ್ನ ಬಟ್ಟೆಗಳು ಎಸೆದು, ಸಾರ್ವಜನಿಕವಾಗಿ ಸರ್ಕಾರ ಹಾಗೂ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ಮಾಡಿದ್ದಳು. ಇದನ್ನು ನೋಡಿದ ಅಲ್ಲಿನ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇನ್ನು ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್​​ಗಳು ಈಕೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ಸುದ್ದಿ ಕೂಡ ಹರಡಿತು. ಆದರೆ ಈ ಸುದ್ದಿಯನ್ನು ಅಲ್ಲಿನ ಪೊಲೀಸರು ತಳ್ಳಿಹಾಕಿದ್ದರು. ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ಬಿಬಿಸಿ (BBC) ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಕಾರ, ಆಕೆಯನ್ನು ಪೊಲೀಸರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕವು ಭಾರತದ ಬಂದರುಗಳನ್ನು ಬಳಸುತ್ತಿದೆಯೇ? ನಿಜಾಂಶವೇನು?

ವೈರಲ್​​ ಪೋಸ್ಟ್​​​:

ಇರಾನ್‌ನ ನ್ಯಾಯಾಂಗ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಆಕೆಗೆ ಯಾವುದೇ ಶಿಕ್ಷೆ ವಿಧಿಸದೆ ಆಕೆಯ ಕುಟುಂಬದ ಜೊತೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಇರಾನ್‌ನಂತಹ ದೇಶಗಳಲ್ಲಿ ಇಂತಹ ಮಾಹಿತಿಗಳ ಪಾರದರ್ಶಕತೆಯ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಇಂದಿಗೂ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಕಟ್ಟುನಿಟ್ಟಿನ ಹಿಜಾಬ್ ನಿಯಮಗಳ ವಿರುದ್ಧದ ಹೋರಾಟಕ್ಕೆ ಆಹೂ ದರ್ಯಾಯಿ ಈಗ ಒಂದು ಪ್ರಬಲ ಶಕ್ತಿಯಾಗಿದ್ದಾರೆ ಎಂದು ಅನೇಕ ಮಹಿಳೆಯರು ಹೇಳಿದ್ದಾರೆ. ಇನ್ನು ಇರಾನ್​​ನಲ್ಲಿ ಇಂದಿಗೂ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಕಟ್ಟುನಿಟ್ಟಿನ ಹಿಜಾಬ್ ನಿಯಮದ ಬಗ್ಗೆ ಹೋರಾಟಗಳು ನಡೆಯುತ್ತಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್​​​ ಕೂಡ ಅಲ್ಲಿನ ಮಹಿಳೆ ಹಕ್ಕಿಗಾಗಿ ಹಾಗೂ ರಕ್ಷಣೆಗಾಗಿ ಈ ಯುದ್ಧ ಎಂದು ಹೇಳಿದ್ದರು.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *