‘ಈ ಅಯೋಗ್ಯನ ಬಗ್ಗೆ ಬಿಟ್ಟುಬಿಡಿ’; ಸಿನಿಮಾ ಬಗ್ಗೆ ಕೇಳಿದ್ದಕ್ಕೆ ನೇರವಾಗಿ ಹೇಳಿದ ಅಭಿಷೇಕ್ ಅಂಬರೀಷ್ – Kannada News | Abishek Ambareesh Labels Himself Ayogya at Movie Event; Video Goes Viral on Social Media

ಅಭಿಷೇಕ್ ಅಂಬರೀಷ್ (Abhishek Ambareesh) ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಖ್ಯಾತ ನಟ ಅಂಬರೀಷ್ ಅವರ ಮಗನಾಗಿದ್ದರೂ ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಈಗ ಅವರು ತಮ್ಮನ್ನು ತಾವು ಅಯೋಗ್ಯ ಎಂದು ಕರೆದುಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣ ಆಗಿದೆ. ಅನೇಕರು ಈ ವಿಡಿಯೋ ಹಂಚಿಕೊಳ್ಳುತ್ತಾ ಇದ್ದಾರೆ.

ಅಭಿಷೇಕ್ ಅವರು ಮೊದಲು ನಟಿಸಿದ್ದು 2019ರ ‘ಅಮರ್’ ಸಿನಿಮಾದಲ್ಲಿ. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆ ಬಳಿಕ 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡಿದರು. ಈ ಚಿತ್ರ ಕೂಡ ಫೇಲ್ ಆಯಿತು. ಸಿನಿಮಾ ಸಂಪೂರ್ಣವಾಗಿ ಸೋತಿತ್ತು. ಆ ಬಳಿಕ ಅಭಿಷೇಕ್ ಅಂಬರೀಷ್ ಅವರು ‘ಕಾಳಿ’ ಚಿತ್ರ ಒಪ್ಪಿಕೊಂಡರು. ಈ ಸಿನಿಮಾದ ಲುಕ್ 2022ರಲ್ಲೇ ರಿಲೀಸ್ ಆಗಿದ್ದರೂ ಸಿನಿಮಾ ಸೆಟ್ಟೇರಿಲಿಲ್ಲ.

ಅಭಿಷೇಕ್ ವೃತ್ತಿ ಜೀವನದಲ್ಲಿ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಹೀಗಾಗಿ, ಅವರ ಮುಂದಿನ ಸಿನಿಮಾ ಯಾವಾಗ ಎಂಬ ಪ್ರಶ್ನೆ ಮುಡೋದು ಸಹಜ. ಇತ್ತೀಚೆಗೆ ನಡೆದ ‘ಅಯೋಗ್ಯ 2’ ಸಿನಿಮಾ ಈವೆಂಟ್​​ನಲ್ಲಿ ಅಭಿಷೇಕ್ ಅಂಬರೀಷ್​​ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನಿಮ್ಮ ಮುಂದಿನ ಸಿನಿಮಾ ಯಾವಾಗ’ ಎಂದು ಆ್ಯಂಕರ್ ನಿರಂಜನ್ ದೇಶಪಾಂಡೆ ಕೇಳಿದರು. ಇದಕ್ಕೆ ಅಭಿಷೇಕ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು.

ಇದನ್ನೂ ಓದಿ: ‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನೋದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್ ಹೀಗೆ ಹೇಳಿದ್ದೇಕೆ?

‘ನಾವಿಲ್ಲಿ ಅಯೋಗ್ಯ 2 ಸಿನಿಮಾ ಬಗ್ಗೆ ಮಾತನಾಡೋಕೆ ಬಂದಿದ್ದೇವೆ. ಈ ಅಯೋಗ್ಯನ ಬಗ್ಗೆ ಬಿಟ್ಟುಬಿಡಿ’ ಎಂದು ನೇರವಾಗಿ ಹೇಳಿದರು. ಆಗ ಇದಕ್ಕೂ ಕೆಲವರು ಚಪ್ಪಾಳೆ ತಟ್ಟಿ,  ಶಿಳ್ಳೆ ಹೊಡೆದರು. ‘ಬಹುಶಃ ಹೆಚ್ಚಿನ ಹಣ ಕೊಟ್ಟಿದ್ದೇನೆ’ ಎಂದು ಅವರೇ ಒಪ್ಪಿಕೊಂಡರು. ಈ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *