ಈ ಆರೋಗ್ಯ ಸಮಸ್ಯೆ ಇದ್ದಾಗ ಡೆಂಗ್ಯೂ ಸೋಂಕು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಚ್ಚರ! – Kannada News | Why Dengue Is More Dangerous For People With Chronic Diseases

ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ (Dengue) ಜ್ವರದ ಪ್ರಕರಣಗಳು ಹೆಚ್ಚಾಗುತ್ತವೆ. ಸಾಮಾನ್ಯವಾಗಿ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಡೆಂಗ್ಯೂ ನಿಯಂತ್ರಣಕ್ಕೆ ಬರುತ್ತದೆ. ಆದರೆ ಕೆಲವರಿಗೆ ಮಾತ್ರ ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಹೌದು, ಕೆಲವು ಆರೋಗ್ಯ ಸಮಸ್ಯೆಗಳಿರುವವರಲ್ಲಿ ಡೆಂಗ್ಯೂ ಸೋಂಕು ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹಾಗಾದರೆ ಯಾವ ಆರೋಗ್ಯ ಸಮಸ್ಯೆಗಳಿದ್ದವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಮತ್ತು ಈ ರೀತಿಯ ಸಮಸ್ಯೆ ಇರುವವರಲ್ಲಿ ಡೆಂಗ್ಯೂನ ಪ್ರಮುಖ ಲಕ್ಷಣಗಳು ಯಾವವು, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡೆಂಗ್ಯೂನ ಪ್ರಮುಖ ಲಕ್ಷಣಗಳು

  • ತೀವ್ರ ಜ್ವರ (104°F ವರೆಗೆ)
  • ತಲೆನೋವು ಮತ್ತು ಕಣ್ಣಿನ ಹಿಂಭಾಗದಲ್ಲಿ ನೋವು
  • ಸ್ನಾಯು ಹಾಗೂ ಸಂಧಿ ನೋವು
  • ವಾಕರಿಕೆ ಮತ್ತು ವಾಂತಿ
  • ಚರ್ಮದ ಮೇಲೆ ಕೆಂಪು ದದ್ದುಗಳು
  • ದೇಹದಲ್ಲಿ ತೀವ್ರ ಆಯಾಸ

ತೀವ್ರ ಪರಿಸ್ಥಿತಿಯಲ್ಲಿ ರಕ್ತಸ್ರಾವ, ರಕ್ತದೊತ್ತಡ ಕುಸಿತ ಮತ್ತು ಅಂಗಾಂಗ ವೈಫಲ್ಯದಂತಹ ಅಪಾಯಗಳು ಉಂಟಾಗಬಹುದು.

ಯಾರಿಗೆ ಅಪಾಯ ಹೆಚ್ಚು?

ಮಧುಮೇಹ ರೋಗಿಗಳು: ಮಧುಮೇಹ ಇರುವವರಲ್ಲಿ ಡೆಂಗ್ಯೂ ಸೋಂಕು ತೀವ್ರವಾಗುವ ಸಾಧ್ಯತೆ ಹೆಚ್ಚು. ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಸೋಂಕಿನ ವಿರುದ್ಧ ಹೋರಾಡುವುದು ಕಷ್ಟವಾಗಬಹುದು.

ಅಧಿಕ ರಕ್ತದೊತ್ತಡ ಇರುವವರು: ಬಿಪಿ ಇರುವವರ ರಕ್ತನಾಳಗಳು ಈಗಾಗಲೇ ದುರ್ಬಲವಾಗಿರಬಹುದು. ಡೆಂಗ್ಯೂನಿಂದ ಉಂಟಾಗುವ ಉರಿಯೂತ ಮತ್ತು ದ್ರವ ಸೋರಿಕೆಯಿಂದ ಗಂಭೀರ ಸಮಸ್ಯೆಗಳು ಎದುರಾಗಬಹುದು.

ಇದನ್ನೂ ಓದಿ: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?

ಸ್ಥೂಲಕಾಯತೆ ಹೊಂದಿರುವವರು: ಅಧಿಕ ತೂಕವು ರೋಗನಿರೋಧಕ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಇದರಿಂದ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.

ಮೂತ್ರಪಿಂಡದ ಕಾಯಿಲೆ ಇರುವವರು: ದೀರ್ಘಕಾಲದ ಕಿಡ್ನಿ ಸಮಸ್ಯೆ ಇರುವವರಿಗೆ ಡೆಂಗ್ಯೂ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ದೇಹದ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ಹದಗೆಡುವ ಅಪಾಯ ಹೆಚ್ಚಿರುತ್ತದೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ದೇಹ ಮುಚ್ಚುವಂತಹ ಬಟ್ಟೆ ಧರಿಸಿ ಹಾಗೂ ಸೊಳ್ಳೆ ನಿವಾರಕಗಳನ್ನು ಬಳಸಿ. ಜ್ವರ ಅಥವಾ ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಸುರಕ್ಷಿತ.

ಗಮನಿಸಿ: ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *