ನಮ್ಮವರಿಗೆ, ಅದರಲ್ಲೂ ನಾವು ಪ್ರೀತಿಸುವ ಜೀವಕ್ಕೆ ಬಗೆಬಗೆಯ ಉಡುಗೊರೆಗಳನ್ನು (gifts) ನೀಡುವುದೆಂದರೆ ಅದೇನೋ ಸಂತೋಷ. ಇಂತಹ ಸಣ್ಣಪುಟ್ಟ ಸರ್‌ಪ್ರೈಸ್‌ಗಳು ಸಂಬಂಧಗಳಿಗೆ ಮಾಧುರ್ಯವನ್ನು ನೀಡುತ್ತದೆ. ಅದೇ ಈ ಗಿಫ್ಟ್ ನೀಡುವ ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳು ಸಂಬಂಧವನ್ನೇ ಹಾಳು ಮಾಡುವ ಸಾಧ್ಯತೆ ಇದೆಯಂತೆ. ಹೌದು ಉಡುಗೊರೆಯನ್ನು ನೀಡುವಾಗ ಅದರಲ್ಲೂ ವಿಶೇಷವಾಗಿ ಜೀವನ ಸಂಗಾತಿ, ಲವರ್‌ಗೆ ಈ ಕೆಲವೊಂದು ನಿರ್ಧಿಷ್ಟ ವಸ್ತುಗಳನ್ನು ಉಡುಗೊರೆ ನೀಡಿದರೆ ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಎಂತಹ ವಸ್ತುಗಳನ್ನು ಗಿಫ್ಟ್ ನೀಡುವುದು ಬಹುದೊಡ್ಡ ತಪ್ಪು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.
ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ:
ಮುಳುಗುತ್ತಿರುವ ಹಡಗಿನ ಫೋಟೋ: ನೀವು ನಿಮ್ಮ ಸಂಗಾತಿಗೆ ಮುಳುಗುತ್ತಿರುವ ಹಡಗಿನ ಚಿತ್ರವನ್ನು ಎಂದಿಗೂ ಉಡುಗೊರೆಯಾಗಿ ನೀಡಬಾರದು. ಅಂತಹ ಚಿತ್ರವನ್ನು ವಾಸ್ತುಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಸಂಬಂಧವನ್ನು ಹದಗೆಡಿಸುತ್ತದೆ ಅಷ್ಟೇ ಅಲ್ಲದೆ ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು.
ಕಪ್ಪು ಬಣ್ಣದ ಬಟ್ಟೆ: ಹೆಚ್ಚಿನ ಜನರು ತಮ್ಮ ಸಂಗಾತಿಗೆ ಸ್ಟೈಲಿಷ್ ಬಟ್ಟೆಗಳನ್ನು ಆಗಾಗ್ಗೆ ಗಿಫ್ಟ್ ಮಾಡುತ್ತಿರುತ್ತಾರೆ. ಹೀಗೆ ನೀವೇನಾದರೂ ಕಪ್ಪು ಬಣ್ಣದ ಬಟ್ಟೆಯನ್ನು ಗಿಫ್ಟ್ ಮಾಡಿದ್ರೆ ಇದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಂಬಿಕೆಗಳ ಪ್ರಕಾರ ಕಪ್ಪು ಬಣ್ಣವು ನಕಾರಾತ್ಮಕತೆ, ದುಃಖ ಮತ್ತು ಪ್ರತ್ಯೇಕತೆಯ ಸಂಕೇತವಾಗಿದೆ, ಹಾಗಾಗಿ ಕಪ್ಪು ಬಣ್ಣದ ಬಟ್ಟೆಯನ್ನು ಉಡುಗೊರೆ ನೀಡಿದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ತಪ್ಪು ತಿಳುವಳಿಕೆ, ಜಗಳಗಳು ನಡೆಯುವ ಸಾಧ್ಯತೆ ಇರುತ್ತದೆ.
ಶೂಗಳು ಮತ್ತು ಚಪ್ಪಲಿಗಳು: ಹೆಚ್ಚಿನವರು ಶೂ, ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಲು ಇಷ್ಟಪಡುತ್ತಾರೆ. ಆದರೆ ನೀವು ಈ ಉಡುಗೊರೆಗಳನ್ನು ನೀಡುವ ತಪ್ಪನ್ನು ಮಾಡಬೇಡಿ. ಶೂ ಮತ್ತು ಚಪ್ಪಲಿಗಳನ್ನು ನೀಡುವುದರಿಂದ ಸಂಗಾತಿಗಳ ನಡುವೆ ವಾದಗಳು ಉಂಟಾಗುತ್ತವೆ ಮತ್ತು ಶೀಘ್ರದಲ್ಲೇ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಶೂ ಉಡುಗೊರೆ ನೀಡುವುದನ್ನು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸಲಾಗಿದೆ.
ಕರವಸ್ತ್ರ: ಯಾರಿಗೂ ಕರವಸ್ತ್ರಗಳನ್ನು ಉಡುಗೊರೆಯಾಗಿ ನೀಡಬಾರದು. ಅದರಲ್ಲೂ ವಿಶೇಷವಾಗಿ, ದಂಪತಿಗಳು ಪರಸ್ಪರ ಕರವಸ್ತ್ರಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಬೇಕು. ಇದು ಗಂಡ ಮತ್ತು ಹೆಂಡತಿಯ ನಡುವೆ ದುಃಖ ಮತ್ತು ಸಂಘರ್ಷದ ಸಾಧ್ಯತೆಗೆ ಕಾರಣವಾಗಬಹುದು.
ಇದನ್ನೂ ಓದಿ: ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು
ಸುಗಂಧ ದ್ರವ್ಯ: ಸುಗಂಧದ್ರವ್ಯ ಸಾಮಾನ್ಯ ಗಿಫ್ಟ್ ಆಯ್ಕೆಗಳಲ್ಲಿ ಒಂದಾಗಿದ್ದು, ಹೆಚ್ಚಿನವರು ಸುಗಂಧ ದ್ರವ್ಯವನ್ನು ತಮ್ಮವರಿಗೆ ಗಿಫ್ಟ್ ಮಾಡುತ್ತಾರೆ. ಆದರೆ ಈ ವಸ್ತುವನ್ನು ಯಾವುದೇ ಕಾರಣಕ್ಕೂ ಗಿಫ್ಟ್ ಮಾಡಬಾರದಂತೆ. ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಪರ್ಫ್ಯೂಮ್ ಪರಿಮಳ ಸ್ವಲ್ಪ ಸಮಯದ ಬಳಿಕ ಮಾಯವಾಗುವಂತೆ, ಪ್ರೀತಿ ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಗಾಜಿನ ವಸ್ತುಗಳು: ಗಾಜಿನ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಬೇಕು. ಸ್ವಲ್ಪ ಅಜಾಗರೂಕತೆ ವಹಿಸಿದರೂ ಗಾಜಿನ ವಸ್ತು ಒಡೆದು ಹೋಗುವಂತೆ ಗಾಜಿನ ವಸ್ತುಗಳನ್ನು ಗಿಫ್ಟ್ ಮಾಡಿದ್ರೆ ಸಂಬಂಧವೂ ಒಡೆದು ಹೋಗುತ್ತದೆ ಎಂದು ನಂಬಲಾಗಿದೆ. ಈ ರೀತಿಯ ಗಿಫ್ಟ್‌ಗಳು ಸಂಬಂಧದಲ್ಲಿ ಜಗಳ ಮತ್ತು ಉದ್ವಿಗ್ನತೆಯನ್ನು ಉಂಟು ಮಾಡುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಗಾಜಿನ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಂಬಂಧಗಳನ್ನು ದುರ್ಬಲಗೊಳಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
