ಈ ಗಿಡಗಳನ್ನು ಮನೆ ಸುತ್ತ ನೆಟ್ಟರೆ ಇನ್ನೆಂದೂ ಸೊಳ್ಳೆಗಳ ಹಾವಳಿಯೇ ಇರೋದಿಲ್ಲ – Kannada News | Plant these plants at home to get rid of mosquitoes

ಬೇಸಿಗೆಯ ಸಮಯದಲ್ಲಿ ಉರಿ ಬಿಸಿಲು, ಸೆಖೆ ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಸೊಳ್ಳೆಗಳ (mosquitoes) ಹಾವಳಿ. ಈ ಸೊಳ್ಳೆಗಳು ಮನೆಯೊಳಗೆ ನುಗ್ಗಿ ಮನುಷ್ಯರ ರಕ್ತ ಹೀರಿ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ, ಡೆಂಗ್ಯೂ, ಮಲೇರಿಯಾದಂತಹ ರೋಗಗಳ ಅಪಾಯವನ್ನೂ ಹೆಚ್ಚಿಸುತ್ತವೆ. ಹಾಗಾಗಿ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಹೆಚ್ಚಿನವರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇವು ಸೊಳ್ಳೆಯನ್ನು ಓಡಿಸುವುದೇನೋ ನಿಜ, ಆದರೆ ಈ ಉತ್ಪನ್ನಗಳಿಂದ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಿರುವಾಗ ಈ ಕೆಲವೊಂದು ಪವರ್‌ಫುಲ್‌ ಗಿಡಗಳನ್ನು ಮನೆ ಸುತ್ತ, ಬಾಲ್ಕನಿಯಲ್ಲಿ ನೆಡುವ ಮೂಲಕ ಸೊಳ್ಳೆಗಳು ಮನೆ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು. ಸೊಳ್ಳೆಗಳನ್ನು ಓಡಿಸಲು ಯಾವೆಲ್ಲಾ ಗಿಡಗಳನ್ನು ನೆಟ್ಟರೆ ಉತ್ತಮ ಎಂಬುದನ್ನು ನೋಡೋಣ ಬನ್ನಿ.

ಈ ಗಿಡಗಳನ್ನು ನೆಟ್ಟರೆ ಮನೆ ಬಳಿ ಒಂದು ಸೊಳ್ಳೆಯೂ ಸೋಕುವುದಿಲ್ಲ:

ತುಳಸಿ: ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯ ಧಾರ್ಮಿಕ ಮಹತ್ವದೊಂದಿಗೆ ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿವೆ. ಅಲ್ಲದೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವ ಮೂಲಕ ಸೊಳ್ಳೆ, ಕೀಟ, ಹಲ್ಲಿಗಳ ಕಾಟದಿಂದಲೂ ಮುಕ್ತಿ ಪಡೆಯಬಹುಉ. ತುಳಸಿ ಸಸ್ಯವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಅದರ ಸುವಾಸನೆಯು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಮತ್ತು ಈ ಸಸ್ಯ ಪರಿಸರವನ್ನು ಶುದ್ಧೀಕರಿಸುತ್ತದೆ.

ಪುದೀನ: ಪುದೀನಾದ ಬಲವಾದ  ಬಲವಾದ ಮತ್ತು ವಿಶಿಷ್ಟವಾದ ಸುವಾಸನೆಯು ಮನೆಯಿಂದ ಸೊಳ್ಳೆಗಳನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೊಳ್ಳೆಗಳು, ಕೀಟಗಳು, ಜೋಡಗಳು ಪುದೀನದ ಬಲವಾದ ಸುವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಪಾಟ್‌ಗಳಲ್ಲಿ ಪುದೀನಾ ಗಿಡವನ್ನು ನೆಟ್ಟು, ಕಿಟಕಿ ಬಾಲ್ಕನಿಗಳಲ್ಲಿ ಇಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು.

ಲೆಮನ್‌ ಗ್ರಾಸ್:‌ ಲೆಮನ್‌ ಗ್ರಾಸ್‌ ಅಡುಗೆಯ ಸುವಾಸನೆ ಹೆಚ್ಚಿಸುವುದು ಮಾತ್ರವಲ್ಲದೆ,  ಮನೆಯ ವಾತಾವರಣವನ್ನು ಸುರಕ್ಷಿತವಾಗಿ ಮತ್ತು ತಾಜಾವಾಗಿಡಲು ಸಹಕಾರಿ.  ಇದರ ಪ್ರಬಲ ಹಾಗೂ ರಿಫ್ರೆಶಿಂಗ್‌ ಪರಿಮಳ ಮನುಷ್ಯರಾದ ನಮಗೆ ಇಷ್ಟವಾಗುತ್ತದೆ. ಆದರೆ ಸೊಳ್ಳೆಗಳು ಇದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಮನೆ ಸುತ್ತ ಲೆಮನ್‌ ಗ್ರಾಸ್‌ ಗಿಡವನ್ನು ನೆಡುವ ಮೂಲಕ ಸೊಳ್ಳೆಗಳ ಹಾವಳಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಇದನ್ನೂ ಓದಿ: ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳದಂತೆ ನೋಡಿಕೊಳ್ಳಲು ಒಂದು ಸಲಹೆಯನ್ನು ಪಾಲಿಸಿ

ಚೆಂಡು ಹೂವಿನ ಗಿಡ: ಚೆಂಡು ಹೂವಿನ ಗಿಡಗಳು ಮನೆಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದರ ಜೊತೆಗೆ ಕೀಟ ಸೊಳ್ಳೆಗಳನ್ನು ಮನೆಯಿಂದ ದೂರವಿಡುತ್ತವೆ ಹೌದು ಸೊಳ್ಳೆಗಳು ಚೆಂಡು ಹೂವಿನ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಮನೆ ಸುತ್ತಲೂ ಈ ಗಿಡವನ್ನು ನೆಡುವ ಮೂಲಕ ನೈಸರ್ಗಿಕ ರೀತಿಯಲ್ಲಿ ಸೊಳ್ಳೆಗಳು ಮನೆ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು.

ಬೇವು:  ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಬೇವು ಸೊಳ್ಳೆಗಳನ್ನು ಓಡಿಸಲು ಸಹ ಸಖತ್‌ ಪರಿಣಾಮಕಾರಿ. ಈ ಗಿಡದ ಎಲೆಗಳು ಮತ್ತು ಸುವಾಸನೆಯು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಅಲ್ಲದೆ ಬೇವಿನ ಗಿಡ  ಮನೆಯ ವಾತಾವರಣವನ್ನು ತಾಜಾ ಮತ್ತು ಸ್ವಚ್ಛವಾಗಿರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *