ಕಳೆದ ಕೆಲ ವರ್ಷಗಳಿಂದ ಮಲಯಾಳಂ ಸಿನಿಮಾಗಳು (Cinema) ತಮ್ಮ ಕಂಟೆಂಟ್ ಇಂದ ದೇಶದಾದ್ಯಂತ ಮಾತ್ರವಲ್ಲ ವಿಶ್ವ ಮಟ್ಟದಲ್ಲಿ ಸಿನಿಮಾ ಪ್ರೇಮಿಗಳನ್ನು ತನ್ನತ್ತೆ ಸೆಳೆದಿದೆ. ಯಾವ ಸಿನಿಮಾ ವಿಮರ್ಶಕರು, ಸಿನಿಮಾ ಪ್ರೇಮಿಗಳ ಬಾಯಲ್ಲೂ ಮಲಯಾಳಂ ಸಿನಿಮಾಗಳ ಗುಣಗಾನ ಕೇಳಿ ಬರುತ್ತಿದೆ. ಆದರೆ ಇದೀಗ ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ ಒಬ್ಬರು ಕನ್ನಡ ಸಿನಿಮಾ ಒಂದು ತಮ್ಮ ಆಲ್ಟೈಮ್ ಫೇವರೇಟ್ ಎಂದಿದ್ದಾರೆ.
ಪೃಥ್ವಿರಾಜ್ ಸುಕುಮಾರ್, ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ. ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿರುವ ಪೃಥ್ವಿರಾಜ್ ಸುಕುಮಾರ್, ಅತ್ಯುತ್ತಮ ಪ್ಯಾನ್ ಇಂಡಿಯಾ ನಟರಲ್ಲೊಬ್ಬರು. ಇದೀಗ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು, ಖುದ್ದು ರಾಜಮೌಳಿ ಅವರು, ನಾನು ಪೃಥ್ವಿರಾಜ್ ಅಂಥಹಾ ನಟನ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪ್ಪಟ ಸಿನಿಮಾ ಪ್ರೇಮಿ, ಸಿನಿಮಾ ವಿಧ್ಯಾರ್ಥಿ ಆಗಿರುವ ಪೃಥ್ವಿರಾಜ್ ಸುಕುಮಾರ್ ಅವರು ಹಲವು ಭಾಷೆಗಳ, ಹಲವಾರು ಸಿನಿಮಾಗಳನ್ನು ವೀಕ್ಷಿಸಿದ್ದಾರೆ, ಅಭ್ಯಾಸ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ನಟನೆಯ ‘ಐ ನೋಬಡಿ’ ಸಿನಿಮಾದ ಪ್ರಚಾರಾರ್ಥ ಹಲವು ಕಡೆ ಸಂದರ್ಶನಗಳನ್ನು ನೀಡಿದ್ದರು. ಅಂತೆಯೇ ಹಾಲಿವುಡ್ ರಿಪೋರ್ಟರ್ಗೂ ಸಹ ಸಂದರ್ಶನ ನೀಡಿದ್ದರು. ಈ ವೇಳೆ ತಮಗೆ ಇಷ್ಟವಾದ ಸಿನಿಮಾಗಳ ಬಗ್ಗೆ ಪೃಥ್ವಿರಾಜ್ ಕುಮಾರ್ ಸುಕುಮಾರನ್ ಮಾತನಾಡಿ, ಪ್ರತಿಭಾಷೆಯಲ್ಲೂ ತಮಗೆ ಇಷ್ಟವಾದ ಸಿನಿಮಾಗಳನ್ನು ಹೆಸರಿಸಿದರು.
ಇದನ್ನೂ ಓದಿ:ಗಮನ ಸೆಳೆದ ‘ಮ್ಯಾರೇಜ್ ಪಾರ್ಟಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್
ಹಿಂದಿಯಲ್ಲಿ ತಮಗೆ ‘ದೀವಾರ್’ ಸಿನಿಮಾ ಬಹಳ ಇಷ್ಟ ಎಂದ ಪೃಥ್ವಿರಾಜ್, ತೆಲುಗಿನಲ್ಲಿ ‘ಬಾಹುಬಲಿ’ ಬಲು ಇಷ್ಟ. ಕನ್ನಡದಲ್ಲಿ ‘ಓಂ’ ಸಿನಿಮಾ ನನಗೆ ಬಹಳ ಇಷ್ಟ. ಉಪೇಂದ್ರ ಅವರು ಅದನ್ನು ಬರೆದಿರುವ ರೀತಿ, ನಿರ್ದೇಶನ ಮಾಡಿರುವ ಅದ್ಭುತ. ಒನ್ ಆಂಡ್ ಓನ್ಲಿ ಶಿವರಾಜ್ ಕುಮಾರ್ ನಟಿಸಿರುವ ಆ ಸಿನಿಮಾ ನನ್ನ ಆಲ್ಟೈಂ ಫೇವರೇಟ್ ಸಿನಿಮಾಗಳಲ್ಲಿ ಅದೂ ಸಹ ಒಂದು’ ಎಂದಿದ್ದಾರೆ. ಪೃಥ್ವಿರಾಜ್ ಸುಕುಮಾರ್ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ‘ಕೆಜಿಎಫ್’ ಸಿನಿಮಾವನ್ನು ಕೇರಳದಲ್ಲಿ ವಿತರಣೆಯಷ್ಟೆ ಮಾಡಿದ್ದರು. ಆದರೆ ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೊಂದಿದ್ದಾರೆ.
ಇನ್ನು ಅದೇ ಸಂದರ್ಶನದಲ್ಲಿ, ತಮಿಳಿನಲ್ಲಿ ತಮಗೆ ಕಮಲ್ ಹಾಸನ್, ಶಿವಾಜಿ ಗಣೇಶನ್ ನಟನೆಯ ‘ತೇವರ್ ಮಗನ್’ ಸಿನಿಮಾ ಬಲು ಇಷ್ಟ, ಈಗ ಬಿಡುಗಡೆ ಆಗುತ್ತಿರುವ ಹಲವು ಸಿನಿಮಾಗಳಿಗಿಂತಲೂ ಆ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಇನ್ನು ಮಲಯಾಳಂನಲ್ಲಿ ತಮಗೆ ಸಾಕಷ್ಟು ಫೇವರೇಟ್ ಇವೆ ಆದರೆ ಈ ಬಾರಿ ನಾನು ಮಮ್ಮುಟಿ ನಟನೆಯ ‘ಭೂತಗನ್ನಡಿ’ ಸಿನಿಮಾ ಪಿಕ್ ಮಾಡುತ್ತೇನೆ ಎಂದು ತಮ್ಮ ಆಪ್ಷನ್ಗಳನ್ನು ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
