ಕಬಡ್ಡಿ ಆಡುತ್ತಿದ್ದ ಗೆಳೆಯರು ಅಂಡರ್ವಲ್ಡ್ ಸಂಪರ್ಕಕ್ಕೆ ಬಂದು ಬಳಿಕ ಅವರ ಜೀವನದಲ್ಲಿ ಆಗುವ ಬದಲಾವಣೆ, ಬದಲಾಗುವ ಅವರ ಗೆಳೆತನ ಇತ್ಯಾದಿಗಳ ಕತೆಗಳನ್ನು ಹೇಳುತ್ತದೆ ಮಲಯಾಳಂನ ‘ಬಾಲ್ಟಿ’ ಸಿನಿಮಾ. ಈ ಸಿನಿಮಾ ಸೋನಿ ಲಿವ್ ನಲ್ಲಿ ವೀಕ್ಷಿಸಬಹುದು.
ಗೇಮ್ ಆಫ್ ಥ್ರೋನ್ಸ್ನ ಪ್ರೀಕ್ವೆಲ್ ಆಗಿರುವ ಹೌಸ್ ಆಫ್ ದಿ ಡ್ರ್ಯಾಗನ್ ಮೂರನೇ ಸೀಸನ್ನ ನಾಲ್ಕನೇ ಎಪಿಸೋಡ್ ಇದೇ ಭಾನುವಾರ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಎಚ್ಬಿಓನಲ್ಲಿಯೂ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ.
ಸನ್ನಿ ಡಿಯೋಲ್ ಮತ್ತು ಅಕ್ಷಯ್ ಖನ್ನಾ ನಟನೆಯ ‘ಇಕ್ಕ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಭಿನ್ನ ರೀತಿಯ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.
ಹಿರಿಯ ನಟರಾದ ಜಯರಾಂ, ಊರ್ವಶಿ ಜೊತೆಗೆ ಇನ್ನೂ ಕೆಲವು ಯುವ ನಟ-ನಟಿಯರು ನಟಿಸಿರುವ ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾ ‘ಪರಿಮಳ ಆಂಡ್ ಕೋ’ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.
‘ಪತಿ ಪತ್ನಿ ಔರ್ ವೋ’ ಸರಣಿ ದಶಕಗಳಿಂದಲೂ ಹಿಂದಿ ಚಿತ್ರರಂಗದಲ್ಲಿ ಮುಂದುವರೆದುಕೊಂಡು ಬರುತ್ತಲೇ ಇದೆ. ಇದೀಗ ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ವಾಮಿಕಾ ಚಬ್ಬಿ ಅವರುಗಳು ನಟನೆಯ ಈ ಹಾಸ್ಯ ಪ್ರಧಾನ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.
ಈ ವಾರ ರಾಮ್ ಚರಣ್, ಜಾನ್ಹವಿ ಕಪೂರ್ ಮತ್ತು ಶಿವರಾಜ್ ಕುಮಾರ್ ನಟನೆಯ ‘ಪೆದ್ದಿ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಸೂಪರ್ ಹಿಟ್ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ವಿವಾದಕ್ಕೆ ಕಾರಣವಾಗಿದ್ದ ಸೀನ್ಗಳನ್ನು ಒಟಿಟಿಯಲ್ಲಿ ತೆಗೆದು ಹಾಕಲಾಗಿದೆ.
ಭಾರತ ಚಿತ್ರರಂಗದ ಲಿಜೆಂಡರಿ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ತಮ್ಮ 93ನೇ ವಯಸ್ಸಿನಲ್ಲಿ ನಿರ್ದೇಶನ ಮಾಡಿರುವ ‘ಸಿಂಗ ಗೀತಂ’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾಕ್ಕೆ ಸಾಧಾರಣ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಅನ್ನು ನೋಡಬಹುದಾಗಿದೆ.
Published On – 12:56 pm, Sat, 11 July 26
