Headlines

ಉಗ್ರರ ನೆಲೆ ಮೇಲಿನ ದಾಳಿ ಜಗತ್ತಿನಾದ್ಯಂತ ಪ್ರತಿಧ್ವನಿಸಿತು; ಆಸ್ಟ್ರೇಲಿಯಾದಲ್ಲಿ ಮೋದಿಯಿಂದ ಆಪರೇಷನ್ ಸಿಂಧೂರದ ಗುಣಗಾನ – Kannada News | PM Narendra Modi Hails Operation Sindoor At At mega Melbourne event in Australia

ಮೆಲ್ಬೋರ್ನ್, ಜುಲೈ 9: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಬೃಹತ್ ಭಾರತೀಯ ಸಮುದಾಯದ ಸಮಾರಂಭದಲ್ಲಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (PM Narendra Modi in Australia) ಕಳೆದ ವರ್ಷ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕುರಿತಾಗಿ ಪ್ರಸ್ತಾಪಿಸಿದ್ದಾರೆ. “ಭಾರತೀಯ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ ಯಶಸ್ಸನ್ನು ಕಂಡು ಭಾರತೀಯರಾದ ನಿಮಗೆ ಹೆಮ್ಮೆ ಎನಿಸುವುದಿಲ್ಲವೇ?” ಎಂದು ಮೋದಿ ಪ್ರಶ್ನಿಸಿದಾಗ ಇಡೀ ಸಭಾಂಗಣ “ಮೋದಿ, ಮೋದಿ” ಎಂಬ ಜಯಘೋಷಗಳನ್ನು ಕೂಗುತ್ತಾ, ಚಪ್ಪಾಳೆಗಳ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿತು.

ಈ ಮೂಲಕ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಅನಿವಾಸಿ ಭಾರತೀಯರ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ ಅನ್ನು ಹೊಗಳುವ ಮೂಲಕ ದೇಶದ ಸಾರ್ವಭೌಮತ್ವವನ್ನು ವಿದೇಶಿ ಮಣ್ಣಿನಲ್ಲಿ ಮತ್ತೊಮ್ಮೆ ಎತ್ತಿಹಿಡಿದಿದ್ದಾರೆ.

ಉಗ್ರರ ಶಿಬಿರಗಳ ದಾಳಿಯ ಸದ್ದು ಜಗತ್ತಿನಾದ್ಯಂತ ಪ್ರತಿಧ್ವನಿಸಿದೆ:

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ತೀವ್ರತೆಯನ್ನು ವಿವರಿಸಿದ ಪ್ರಧಾನಿ ಮೋದಿ, ಶತ್ರುಗಳ ಅಥವಾ ಉಗ್ರರ ಅಡಗುತಾಣಗಳ ಮೇಲೆ ಭಾರತ ನಡೆಸಿದ ದಾಳಿಯ ಸದ್ದು ಕೇವಲ ಗಡಿಯಲ್ಲಿ ಮಾತ್ರ ಕೇಳಿಸಿಲ್ಲ, ಅದು ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸಿದೆ ಎಂದು ಗುಡುಗಿದ್ದಾರೆ. ಭಾರತವು ಈಗ ತನ್ನನ್ನು ತಾನು ರಕ್ಷಿಸಿಕೊಳ್ಳಲು, ಎಲ್ಲ ರೀತಿಯ ಸವಾಲನ್ನು ಎದುರಿಸಲು ಸಶಕ್ತವಾಗಿದೆ ಎಂಬ ಕಠಿಣ ಸಂದೇಶವನ್ನು ಜಾಗತಿಕ ಸಮುದಾಯಕ್ಕೆ ಈ ಮೂಲಕ ನೀಡಲಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ

ಹೆಚ್ಚು ಬೆಳೆಯಿರಿ, ಹೆಚ್ಚು ಸಾಧಿಸಿ:

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಯುವ ಸಮೂಹ ಮತ್ತು ಉದ್ಯಮಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದ ಪ್ರಧಾನಿ ಮೋದಿ, “ಇನ್ನೂ ಹೆಚ್ಚು ಬೆಳೆಯಿರಿ, ಭವಿಷ್ಯದಲ್ಲಿ ಇನ್ನೂ ದೊಡ್ಡ ಸಾಧನೆಗಳನ್ನು ಮಾಡಿ” ಎಂದು ಕರೆ ನೀಡಿದರು. ಬದಲಾಗುತ್ತಿರುವ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ನಿಕಟ ಸಂಬಂಧ ಬಹಳ ಮಹತ್ವದ್ದಾಗಿದೆ. ನಮ್ಮೆರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯು ಕೇವಲ ವ್ಯವಹಾರಕ್ಕೆ ಸೀಮಿತವಾಗಿಲ್ಲ, ಇದು ಪರಸ್ಪರ ನಂಬಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿಂತಿದೆ ಎಂದು ಅವರು ಹೇಳಿದ್ದಾರೆ.

“ಆಪರೇಷನ್ ಸಿಂಧೂರ್ ಸಮಯದಲ್ಲಿ ನಾವು ಏನು ಮಾಡಿದೆವು ಎಂಬುದನ್ನು ಇಡೀ ಜಗತ್ತೇ ನೋಡಿದೆ” ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಭಾರತೀಯರಿಂದ ಭಾರಿ ಚಪ್ಪಾಳೆ ವ್ಯಕ್ತವಾಯಿತು.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ, ಭಾರತಕ್ಕೆ ಸಿಗಲಿದೆಯೇ ಜಾಗತಿಕ ಇಂಧನ ಬಲ ತರುವ ‘ಯುರೇನಿಯಂ’?

“21ನೇ ಶತಮಾನದ ಭಾರತವು ತನ್ನ 140 ಕೋಟಿ ಜನರ ಆಕಾಂಕ್ಷೆಗಳ ಬಲದೊಂದಿಗೆ ಮುಂದುವರಿಯುತ್ತಿದ್ದು, ಶೀಘ್ರದಲ್ಲೇ ‘ವಿಕಸಿತ ಭಾರತ’ ಆಗುವತ್ತ ಸ್ಥಿರ ಹೆಜ್ಜೆ ಇಡುತ್ತಿದೆ. ಒಂದು ಕನಸು ನನಸಾದಾಗ, ಮತ್ತೊಂದು ಹೊಸ ಕನಸು ಜನ್ಮ ತಾಳುತ್ತದೆ. ಒಂದು ಗುರಿಯನ್ನು ಸಾಧಿಸಿದಾಗ ಅದು ಇನ್ನೂ ದೊಡ್ಡ ಸಂಕಲ್ಪಕ್ಕೆ ಕಾರಣವಾಗುತ್ತದೆ. ಇದು ‘ಇನ್ನೂ ಹೆಚ್ಚು ಬೆಳೆಯಿರಿ, ಹೆಚ್ಚು ಸಾಧಿಸಿ’ ಎಂಬ ತತ್ವವನ್ನು ನಂಬುವ ನವ ಭಾರತ” ಎಂದು ಮೋದಿ ಹೇಳಿದರು.

ಬ್ಲಾಕ್​​ಬಸ್ಟರ್ ಶೋ:

ಮೆಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂನಲ್ಲಿ ನಡೆದ ಬೃಹತ್ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಗಳು ಇಷ್ಟು ಮಟ್ಟಿಗೆ ಸುಧಾರಿಸಲು ಅಲ್ಲಿನ ಅನಿವಾಸಿ ಭಾರತೀಯರೇ ಕಾರಣ ಎಂದು ಹೇಳಿದರು. ಮೆಲ್ಬೋರ್ನ್‌ನಲ್ಲಿ ಈಗ ‘ಮಿನಿ ಇಂಡಿಯಾ’ ಎಂದು ಕರೆಯಲ್ಪಡುವ ಹಲವು ಸ್ಥಳಗಳಿವೆ ಎಂದು ಅವರು ಹೇಳಿದರು. “ಈ ಕಾರ್ಯಕ್ರಮ ಹೌಸ್‌ಫುಲ್ ಆಗಿದೆ. ಇದೊಂದು ಬ್ಲಾಕ್‌ಬಸ್ಟರ್ ಶೋ! ಮೆಲ್ಬೋರ್ನ್ ಜನರನ್ನು ಭೇಟಿಯಾಗಲು ನಾನು ಕೂಡ ಕಾಯುತ್ತಿದ್ದೆ. ಹಾಗಾಗಿ ಈ ಬಾರಿ ಮೆಲ್ಬೋರ್ನ್ ಜನರೊಂದಿಗೆ ‘ಫ್ಲಾಟ್ ವೈಟ್ ಕಾಫಿ’ ಕುಡಿಯಬೇಕೆಂದುಕೊಂಡಿದ್ದೆ,” ಎಂದು ಮೋದಿ ಹೇಳಿದ್ದಾರೆ.

ತಾಂತ್ರಿಕವಾಗಿ ಪ್ರಗತಿಯಾಗುತ್ತಿದೆ ಭಾರತ:

ಭಾರತದ ತಾಂತ್ರಿಕ ಪ್ರಗತಿಯನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ದೇಶವು ವಿಶ್ವದ ಎರಡನೇ ಅತಿ ದೊಡ್ಡ 5G ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಮತ್ತು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 6G ಅಭಿವೃದ್ಧಿಯತ್ತ ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ ಎಂದರು. “ಭಾರತವು ವಿಶ್ವದ ಎರಡನೇ ಅತಿ ದೊಡ್ಡ 5G ಮಾರುಕಟ್ಟೆಯಾಗಿದೆ. ಇಂದು ಭಾರತವು ಸಂಪೂರ್ಣವಾಗಿ ‘ಮೇಡ್-ಇನ್-ಇಂಡಿಯಾ’ 6G ತಂತ್ರಜ್ಞಾನದ ಮೇಲೆ ವೇಗವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *