ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ

ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ

ಕೊಲ್ಕತ್ತಾ, ಮಾರ್ಚ್ 11: ಪಶ್ಚಿಮ ಬಂಗಾಳದ ಪೂರ್ವ ಬರ್ದ್ವಾನ್‌ನ ಮೆಮರಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 19ರ ಫ್ಲೈಓವರ್‌ನ ಗೋಡೆಯ ಕುಸಿತ ಸಂಭವಿಸಿದೆ. ಇದು ಉದ್ಘಾಟನೆಯಾಗಿ ಕೇವಲ 6 ತಿಂಗಳಾಗಿತ್ತು. ರಸ್ತೆಯ 50-60 ಅಡಿಗಳು ಕುಸಿದು, ಕೊಲ್ಕತ್ತಾಗೆ (Kolkata) ಹೋಗುವ ಲೇನ್ ಅನ್ನು ಮುಚ್ಚಲಾಯಿತು. ಈ ಜನನಿಬಿಡ ಎಕ್ಸ್‌ಪ್ರೆಸ್‌ವೇಯಲ್ಲಿ ಹಠಾತ್ ಕುಸಿತವು ಪಾದಚಾರಿಗಳನ್ನು ಭಯಭೀತಗೊಳಿಸಿತು. ಸುದ್ದಿ ತಿಳಿದ ನಂತರ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *