ಇಂದೋರ್, ಏಪ್ರಿಲ್ 21: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳರಿಂದ ಜನರನ್ನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳೇ ಕಳ್ಳತನ (Robbery) ಮಾಡಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ನಿವೃತ್ತ ಎಸಿಪಿಯನ್ನು ಒಳಗೊಂಡ ಆಸ್ತಿ ವಿವಾದವನ್ನು ಪರಿಹರಿಸುವ ನೆಪದಲ್ಲಿ ಒಟ್ಟು 5 ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ರೇಡ್ ಮಾಡುವ ನೆಪದಲ್ಲಿ ಮನೆಯೊಳಗೆ ಬಂದ ಪೊಲೀಸ್ ಅಧಿಕಾರಿಗಳು 220 ಗ್ರಾಂ ಚಿನ್ನ ದೋಚಿದ್ದಾರೆ ಎಂದು ಆ ಉದ್ಯಮಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಗೌರವ್ ಜೈನ್ ಎಂಬ ಉದ್ಯಮಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೊಲೀಸರು ತಮ್ಮ ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ಮಾಸ್ಟರ್ ಕೀ ಬಳಸಿ ಮುಖ್ಯ ಬಾಗಿಲನ್ನು ತೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಪೊಲೀಸರು ತಮ್ಮ ಮನೆಯಿಂದ ಸುಮಾರು 220 ಗ್ರಾಂ ಚಿನ್ನವನ್ನು ಕದ್ದಿದ್ದಾರೆ ಎಂದು ಗೌರವ್ ಜೈನ್ ಆರೋಪಿಸಿದ್ದಾರೆ. ಪೊಲೀಸರನ್ನು ಎಸ್‌ಐ ಸಂಜಯ್ ವಿಷ್ಣೋಯ್, ರಣವೀರ್ ಕುಶ್ವಾ, ಪ್ರಣೀತ್ ಭಡೋರಿಯಾ, ದಿನೇಶ್ ಗುರ್ಜರ್ ಮತ್ತು ದೀಪೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಈ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿ ನಂತರ ತನ್ನನ್ನು ಗ್ವಾಲಿಯರ್‌ನ ಅತಿಥಿ ಗೃಹದಲ್ಲಿ ನಿವೃತ್ತ ಎಸಿಪಿಗೆ ಸಂಬಂಧಿಸಿದ ಜನರಿಗೆ ಹಸ್ತಾಂತರಿಸಿದ್ದಾರೆ ಎಂದು ಗೌರವ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇರಳದ ತ್ರಿಶೂರ್‌ನಲ್ಲಿ ಪಟಾಕಿಗಳ ಸ್ಫೋಟ; 10 ಜನ ಸಾವು, ಹಲವರಿಗೆ ಗಾಯ
चोर को पकड़ने वाली पुलिस ने इंदौर में ख़ुद ही घर में घुसकर 22 तोला सोना, घड़ी और मोबाइल चुरा लिए।
इंदौर में लूटा गया सोना क्या वल्लभ भवन तक भी पहुँच रहा है, इसलिए इन दोषी पुलिसवालों पर अभी तक FIR नहीं की गई है? pic.twitter.com/2pCg9CgTMs
— Jitendra (Jitu) Patwari (@jitupatwari) April 20, 2026
ಪೊಲೀಸರು ಗೌರವ್ ಜೈನ್ ಅವರಿಂದ 27,000 ರೂ. ಹಣವನ್ನು ಸುಲಿಗೆ ಮಾಡಿದ್ದಾರೆ. ಕ್ಯೂಆರ್ ಕೋಡ್ ಮೂಲಕ ಅವರಿದ್ದ ಹೋಟೆಲ್‌ಗೆ 10,000 ರೂ.ಗಳನ್ನು ನೀಡಲಾಗಿದೆ. 17,000 ರೂ.ಗಳನ್ನು ಎಸ್‌ಐ ಮಗನ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದರು. ಇದಾದ ಬಳಿಕ ಡಿಸಿಪಿ ಅಮರೇಂದ್ರ ಸಿಂಗ್ ಎಲ್ಲಾ ಐವರು ಅಧಿಕಾರಿಗಳನ್ನು ಅಮಾನತು ಮಾಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
