ಉಪ ಲೋಕಾಯುಕ್ತರಿಗೇ ಆನ್​​ಲೈನ್ ದೋಖಾ! ರೇಜರ್ ಬ್ಲೇಡ್‌ ಆರ್ಡರ್ ಮಾಡಿದ್ರೆ ಬಂದಿದ್ದು ಹಳೇ ಬಟ್ಟೆ ತುಂಡು – Kannada News | Online Shopping Fraud Hits Karnataka Upa Lokayukta: Razor Blade Order Turns Into Old Cloth in Bengaluru

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ಅವರೇ ಆನ್‌ಲೈನ್ ಶಾಪಿಂಗ್ ಮೋಸಕ್ಕೆ ಬಲಿಯಾಗುವಂತಾಗಿದೆ. ಅವರು ಗುಡ್ ಮ್ಯಾಕ್ಸ್ ಕಂಪನಿಯ ರೇಜರ್ ಬ್ಲೇಡ್‌ಗಳನ್ನು ಆನ್​ಲೈನ್ ಮೂಲಕ ಆರ್ಡರ್ ಮಾಡಿದ್ದರು. ಶ್ಯಾಡೋಫ್ಯಾಕ್ಸ್ ಮುಖಾಂತರ ಬಂದ ಪಾರ್ಸೆಲ್ ಅನ್ನು ತೆರೆದಾಗ, ಅದರಲ್ಲಿ ರೇಜರ್ ಬ್ಲೇಡ್‌ಗಳ ಬದಲು ಹಳೆಯ ಬಟ್ಟೆಗಳು ಪತ್ತೆಯಾಗಿವೆ! ಈ ಘಟನೆಯು ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಪಲೋಕಾಯುಕ್ತರಂತಹ ಉನ್ನತ ಹುದ್ದೆಯಲ್ಲಿರುವವರೇ ಇಂತಹ ವಂಚನೆಗೆ ಗುರಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ, ಗುಡ್ ಮ್ಯಾಕ್ಸ್ ಕಂಪನಿ, ಡೆಲಿವರಿ ಸೇವೆ ಒದಗಿಸಿದ ಶ್ಯಾಡೋಫ್ಯಾಕ್ಸ್ ಕಂಪನಿ ಹಾಗೂ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *