ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಾಗಿ ಈ ವಸ್ತುಗಳನ್ನು ನಿಮ್ಮೊಂದಿಗೆ ಒಯ್ಯಿರಿ – Kannada News | Summer Safety Tips: Keep these things with you when you go out in the hot summer

ಬೇಸಿಗೆಯ (Summer) ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಜೊತೆಗೆ ಸೆಖೆಯನ್ನು ತಡೆಯಲು ನಾವು ಧರಿಸುವ ಬಟ್ಟೆ, ಪಾದರಕ್ಷೆ ಸಹಿತ ಸೇವನೆ ಮಾಡುವಂತಹ ಆಹಾರದ ಬಗ್ಗೆಯೂ ಈ ಸಮಯದಲ್ಲಿ ಗಮನ ವಹಿಸುವ ಅತ್ಯಗತ್ಯ. ಅದರಲ್ಲೂ ಈ ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಶಾಖದ ಅಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಲವೊಂದು ಅಗತ್ಯ ವಸ್ತುಗಳನ್ನು ನಮ್ಮೊಂದಿಗೆ ಕೊಂಡೊಯ್ಯಲೇಬೇಕು. ಈ ಸಣ್ಣ ಈ ವಿಷಯಗಳು ಶಾಖದ ಹೊಡೆತ, ನಿರ್ಜಲೀಕರಣ ಮತ್ತು ಬಿಸಿಲಿನ ಬೇಗೆಯಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತವೆ. ಹಾಗಿದ್ರೆ ಈ ಉರಿ ಬಿಸಿಲಲ್ಲಿ ಮನೆಯಿಂದ ಹೊರಗೆ ಹೋಗುವಾಗ ಯಾವೆಲ್ಲಾ ವಸ್ತುಗಳನ್ನು ಕೊಂಡೊಯ್ಯಬೇಕು ಎಂಬುದನ್ನು ನೋಡೋಣ ಬನ್ನಿ.

ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ಬಳಿ ಈ ವಸ್ತುಗಳು ಇರಲಿ:

ನೀರಿನ ಬಾಟಲ್: ಈ ಸುಡುವ ಬಿಸಿಲಿನಲ್ಲಿ, ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ನೀವು ಹಲವಾರು ಕಾಯಿಲೆಗಳಿಗೆ ಗುರಿಯಾಗಬಹುದು. ಈ ಸಮಯದಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ  ಹೊರಗೆ ಹೋಗುವಾಗ ಅಗತ್ಯವಾಗಿ ನೀರಿನ ಬಾಟಲ್‌ ನಿಮ್ಮ ಜೊತೆ ಇಟ್ಟುಕೊಳ್ಳಿ. ಮತ್ತು ಆಗಾಗ್ಗೆ ನೀರನ್ನು ಸೇವನೆ ಮಾಡುತ್ತಲೇ ಇರಿ.

ಸನ್‌ಗ್ಲಾಸ್: ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಯಾವಾಗಲೂ ನಿಮ್ಮ ಬ್ಯಾಗ್‌ನಲ್ಲಿ ಸನ್ಗ್ಲಾಸ್ ಅನ್ನು ಇಟ್ಟುಕೊಳ್ಳಬೇಕು. ಇವು ನಿಮ್ಮ ಕಣ್ಣುಗಳನ್ನು ಸೂರ್ಯನ ಪ್ರಕರ ಶಾಖದಿಂದ ರಕ್ಷಿಸಲು ಅತ್ಯಗತ್ಯ. ಅಲ್ಲದೆ ಸನ್‌ಗ್ಲಾಸ್ ಕಣ್ಣಿನ ಸೋಂಕನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತವೆ. ಅವು ಯಾವಾಗಲೂ ನಿಮ್ಮ ಬ್ಯಾಗ್‌ನಲ್ಲಿ ಇರಲೇಬೇಕು.

ಸನ್‌ಸ್ಕ್ರೀನ್:  ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ನೀವು ನಿಮ್ಮ ಬ್ಯಾಗ್‌ನಲ್ಲಿ ಯಾವಾಗಲೂ ಸನ್‌ಸ್ಕ್ರೀನ್‌ ಇಟ್ಟುಕೊಳ್ಳಿ.  ನಿಮ್ಮ ಚರ್ಮವು ಒಣಗಲು ಅಥವಾ ಒರಟಾಗಲು ಪ್ರಾರಂಭಿಸಿದರೆ, ನೀವು ತಕ್ಷಣ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಿ.

ಇದನ್ನೂ ಓದಿ: ಬೇಸಿಗೆಯ ಉರಿ ಬಿಸಿಲಿನಲ್ಲೂ ದೇಹವನ್ನು ತಂಪಾಗಿರಿಸಲು ಸುಲಭ ಸಲಹೆಗಳನ್ನು ಪ್ರಯತ್ನಿಸಿ

ಛತ್ರಿ: ಈ ಉರಿ ಬಿಸಿಲಿನಲ್ಲಿ ಹೊರಗೆ ಹೋಗುವ ಸಂದರ್ಭದಲ್ಲಿ ನೀವು ಖಂಡಿತವಾಗಿಯೂ ಒಂದು ಛತ್ರಿಯನ್ನು ಇಟ್ಟುಕೊಳ್ಳಬೇಕು. ಇದು ಸೂರ್ಯನ ಪ್ರಕರ ಶಾಖದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ಸ್ಕಾರ್ಫ್ : ಹೆಂಗಳೆಯರು ಹೊರಗೆ ಹೋಗುವ ಮೊದಲು ಖಂಡಿತವಾಗಿಯೂ ತಮ್ಮ ಬ್ಯಾಗಿನಲ್ಲಿ ಸ್ಕಾರ್ಫ್ ಇಟ್ಟುಕೊಳ್ಳಬೇಕು. ಇದು ನಿಮ್ಮನ್ನು  ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಬಿಸಿಲು ಮತ್ತು ಟ್ಯಾನಿಂಗ್ ಅನ್ನು ತಡೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *