‘ಉರಿ’ ಸಿನಿಮಾನಲ್ಲೇ ಇದೆ ‘ಧುರಂಧರ್’ ಸಿನಿಮಾದ ಹಿಂಟ್

‘ಉರಿ’ ಸಿನಿಮಾನಲ್ಲೇ ಇದೆ ‘ಧುರಂಧರ್’ ಸಿನಿಮಾದ ಹಿಂಟ್

ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆದ್ದರಿಂದ ‘ಧುರಂಧರ್ 2’ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಸಿನಿಮಾದ ನಾಯಕ ‘ಹಂಝಾ’ ಮುಂದೇನು ಮಾಡುತ್ತಾನೆ ಎಂಬುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದು, ‘ಧುರಂಧರ್’ಗೆ ಮುಂದೆ ಆದಿತ್ಯ ನಿರ್ದೇಶಿಸಿದ್ದು ಒಂದೇ ಫೀಚರ್ ಫಿಲಂ ಅದುವೇ ‘ಉರಿ; ದಿ ಸರ್ಜಿಕಲ್ ಸ್ಟ್ರೈಕ್’. 2019 ರಲ್ಲಿ ಬಿಡುಗಡೆ ಆಗಿದ್ದ ‘ಉರಿ’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ ಆ ಸಿನಿಮಾನಲ್ಲಿಯೇ ಅವರು ‘ಧುರಂಧರ್’ ಸಿನಿಮಾದ ಸ್ಪಷ್ಟ ಸುಳಿವು ನೀಡಿದ್ದರು.

‘ಉರಿ’ ಸಿನಿಮಾ, ಭಾರತೀಯ ಸೇನೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಆಧರಿಸಿದ ಸಿನಿಮಾ ಆಗಿದೆ. ಸಿನಿಮಾನಲ್ಲಿ, ಭಯೋತ್ಪಾದಕರು ಉರಿಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಮೇಜರ್ ವಿಹಾನ್ ಸಿಂಗ್ ಶೇರ್ಗಿಲ್ (ವಿಕ್ಕಿ ಕೌಶಲ್) ‘ಸರ್ಜಿಕಲ್ ಸ್ಟ್ರೈಕ್’ಗಾಗಿ ಸಿದ್ಧತೆ ನಡೆಸಲು ಆರಂಭಿಸುತ್ತಾರೆ. ಆಗ ಫ್ಲೈಟ್ ಲೆಫ್ಟಿನೆಂಟ್ ಸೀರತ್ ಕೌರ್ (ಕೃತಿ ಕುಲ್ಹಾರಿ ) ಜೊತೆಗೆ ಮಾತನಾಡುತ್ತಾ, ‘ನಿಮ್ಮ ಕುಟುಂಬದವರು ಯಾರಾದರೂ ಸೈನ್ಯದಲ್ಲಿದ್ದಾರಾ? ಎಂದು ಕೇಳುತ್ತಾರೆ. ಆಗ ಲೆಫ್ಟಿನೆಂಟ್ ಸೀರತ್ ಕೌರ್, ‘ನನ್ನ ಪತಿ ಜಸ್ಕೀರತ್ ಸಿಂಗ್ ರಂಗಿ ಸೈನ್ಯದಲ್ಲಿದ್ದರು, ನೌಶೇರಾ ಸೆಕ್ಟರ್​​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದರು’ ಎನ್ನುತ್ತಾರೆ.

‘ಧುರಂಧರ್’ ಸಿನಿಮಾನಲ್ಲಿ ನಾಯಕ ರಣ್ವೀರ್ ಸಿಂಗ್, ಪಾಕಿಸ್ತಾನದಲ್ಲಿ ತನ್ನ ಹೆಸರನ್ನು ‘ಹಂಝಾ ಅಲಿ’ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಿಜವಾದ ಹೆಸರು ಜಸ್ಕೀರತ್ ಸಿಂಗ್ ರಂಗಿ ಎಂದಾಗಿರುತ್ತದೆ. ಅದನ್ನು ಸಿನಿಮಾನಲ್ಲಿ ತೋರಿಸಲಾಗಿದೆ. ಈ ಲಿಂಕ್​​​ಗಳನ್ನು ಜೋಡಿಸಿ ನೋಡುವುದಾದರೆ ಉರಿ ಘಟನೆ ನಡೆದಿರುವುದು 2016 ರಲ್ಲಿ ಆದರೆ ಅದಕ್ಕೆ ಮುಂಚೆಯೇ ಜಸ್ಕೀರತ್ ಸಿಂಗ್ ರಂಗಿ ನಿಧನ ಹೊಂದಿದ್ದಾರೆ. ಅದೂ ಪಾಕಿಸ್ತಾನದಲ್ಲಿ ಅಲ್ಲ ಬದಲಿಗೆ ಭಾರತದಲ್ಲಿ. ಅಂದರೆ ರಣ್ವೀರ್ ಸಿಂಗ್ ಪಾತ್ರ ಪಾಕಿಸ್ತಾನದಲ್ಲಿ ತನ್ನ ಮಿಷನ್ ಮುಗಿಸಿ ಭಾರತಕ್ಕೆ ವಾಪಸ್ಸಾಗಿ ಇಲ್ಲಿ ಭಯೋತ್ಪಾದಕರೊಟ್ಟಿಗೆ ಹೋರಾಡುವಾದ ನಿಧನ ಹೊಂದಿದೆ.

ಇದನ್ನೂ ಓದಿ:‘ಧುರಂಧರ್ 2’ ಅಬ್ಬರ: 3.50 ಲಕ್ಷ ಟಿಕೆಟ್ ಮಾರಾಟ, ಗಳಿಸಿದ ಮೊತ್ತ ಎಷ್ಟು?

ಹಂಝಾ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಪ್ರೇಕ್ಷಕರಿಗೂ ಇದೆ. ಇದೀಗ ಬಿಡುಗಡೆ ಆಗಲಿರುವ ‘ಧುರಂಧರ್ 2’ ಸಿನಿಮಾನಲ್ಲಿ ಹಂಝಾ ಪಾತ್ರ ಪಾಕಿಸ್ತಾನಕ್ಕೆ ಹೋಗುವ ಮುಂಚಿನ ಕತೆಯನ್ನು ತೋರಿಸಲಾಗುವುದು ಎನ್ನಲಾಗುತ್ತಿದೆ. ‘ಧುರಂಧರ್ 2’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ಪಾತ್ರ ಭಾರತದಲ್ಲಿ ಇದ್ದಾಗಿನ ಸಾಹಸಗಳು, ಅವರ ಪಾತ್ರದ ಹಿನ್ನೆಲೆ, ಮದುವೆ ದೃಶ್ಯಗಳನ್ನು ತೋರಿಸುವ ಸಾಧ್ಯತೆ ಇದೆ. ಅಲ್ಲದೆ, ಹಂಝಾನ ಮುಂದಿನ ಹೆಜ್ಜೆ ಏನಾಗಿರಲಿದೆ ಎಂಬುದನ್ನು ತೋರಿಸಲಾಗುತ್ತದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *