ಊಟವಾದ ತಕ್ಷಣ ಮಾಡುವ ಈ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು – Kannada News | Never make this mistake after eating

ಆರೋಗ್ಯಕರವಾಗಿರಬೇಕು, ಸದೃಢರಾಗಿರಬೇಕು ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಆರೋಗ್ಯಕ್ಕೆ ಆಹಾರವನ್ನು ಸೇವನೆ ಮಾಡುತ್ತಾರೆ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೆ. ಆರೋಗ್ಯಕ ಆಹಾರ ಸೇವನೆ ಮಾಡಿದರೂ, ಸಮಯಕ್ಕೆ ಸರಿಯಾಗಿ ಊಟ ಮಾಡಿದರೂ, ಊಟ ಮಾಡಿದ ತಕ್ಷಣ ಮಾಡುವ ಈ ಕೆಲವೊಂದು ತಪ್ಪುಗಳಿಂದಾಗಿ (after meals mistakes) ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹೌದು ಊಟದ ಬಳಿಕ ಮಾಡುವ ಸಣ್ಣ ತಪ್ಪು ಕೆಲಸಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಕ್ರಮೇಣ ದುರ್ಬಲಗೊಳ್ಳಬಹುದು. ಹಾಗಿದ್ದರೆ ಊಟವಾದ ತಕ್ಷಣ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಊಟದ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ:

ಊಟ ಮಾಡಿದ ತಕ್ಷಣ ಮಲಗುವುದು: ನೀವು ಮಾಡುವ ದೊಡ್ಡ ತಪ್ಪುಗಳಲ್ಲಿ ಇದು ಸಹ ಒಂದು.  ಊಟ ಮಾಡಿದ ತಕ್ಷಣ ಮಲಗಿದಾಗ, ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ, ಮತ್ತು ಇದರಿಂದಾಗಿ ನೀವು ಆಮ್ಲೀಯತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ ಎದೆಯುರಿ ಸಮಸ್ಯೆ ಕೂಡ ಉಂಟಾಗಬಹುದು. ಆದ್ದರಿಂದ ಊಟವಾದ ಕನಿಷ್ಠ 30 ನಿಮಿಷಗಳ ಬಳಿಕವೇ ಮಲಗಿ.

ಚಹಾ ಅಥವಾ ಕಾಫಿ ಕುಡಿಯುವುದು: ಊಟವಾದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಅನೇಕ ಜನರಿಗೆ ಇರುತ್ತದೆ. ಈ ತಪ್ಪು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಊಟವಾದ ನಂತರ ನೀವು ಚಹಾ ಅಥವಾ ಕಾಫಿ ಕುಡಿಯುವಾಗ, ಅವುಗಳಲ್ಲಿರುವ ಅಂಶಗಳು ದೇಹವು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದು. ನೀವು ಚಹಾ ಅಥವಾ ಕಾಫಿ ಕುಡಿಯಲೇಬೇಕಾದರೆ, ಊಟವಾದ ಬಳಿಕ ಕನಿಷ್ಠ 45 ನಿಮಿಷಗಳ ಕಾಲ ಕಾಯಿರಿ.

ಹೆಚ್ಚು ನೀರು ಕುಡಿಯುವುದು: ಊಟವಾದ ತಕ್ಷಣ ನೀವು ಹೆಚ್ಚು ನೀರು ಕುಡಿಯಬಾರದು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಜೀರ್ಣಕಾರಿ ರಸಗಳು ದುರ್ಬಲಗೊಳ್ಳುತ್ತವೆ, ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಇದನ್ನು ಪದೇ ಪದೇ ಮಾಡುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಊಟ ಮಾಡುವಾಗ ಸ್ವಲ್ಪ ನೀರು ಕುಡಿಯುವುದು ಒಳ್ಳೆಯದು, ಆದರೆ ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ಮನುಷ್ಯನ ದೇಹದ ಯಾವ ಭಾಗ ಅತೀ ಕೊಳಕಾಗಿರುವುದು ಗೊತ್ತಾ?

ತಕ್ಷಣ ಸ್ನಾನ ಮಾಡುವುದು ಕೂಡ ತಪ್ಪು: ಊಟ ಮಾಡಿದ ತಕ್ಷಣ ಸ್ನಾನ ಮಾಡಬಾರದು. ಊಟ ಮಾಡಿದ ತಕ್ಷಣ ಸ್ನಾನ ಮಾಡುವುದರಿಂದ ಹೊಟ್ಟೆಯಿಂದ ರಕ್ತ ಪರಿಚಲನೆ ಚರ್ಮದ ಕಡೆಗೆ ಚಲಿಸುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ವಿಶೇಷವಾಗಿ, ನೀವು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಊಟ ಮಾಡಿದ ಕನಿಷ್ಠ ಒಂದು ಗಂಟೆಯ ನಂತರವೇ ಸ್ನಾನ ಮಾಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *