ಬೆಂಗಳೂರು, ಜುಲೈ 09: ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಘಟನೆಗೆ ಕಾನೂನು ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ನೆಲ, ಜಲ, ಭಾಷೆ ವಿಚಾರ ಬಂದಾಗ ನಾವು ಹಿಂದೆ ಸರಿಯುವುದಿಲ್ಲ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಯಾರೇ ಇರಬಹುದು. ಏನೇ ಗಡಿ ವಿಚಾರ ಇದ್ರೂ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು. ಯಾವುದೋ ಸಂಘಟನೆಯವರು ಹೇಳ್ತಾರೆ, ಮುಖ್ಯಮಂತ್ರಿ ಹೇಳುತ್ತಾರೆ ಎಂದು ಬೇಕಾದ ರೀತಿ ಅಡ್ಡಾದಿಡ್ಡಿ ಗೆರೆ ಎಳೆಯೋಕೆ ಬರಲ್ಲ. ಇದನ್ನು ಎಚ್ಚರಿಕೆ ಎಂದಾದರೂ ತಿಳಿದುಕೊಳ್ಳಲಿ ಅಥವಾ ಮನವಿ ಅಂತಾದರೂ ತಿಳಿದುಕೊಳ್ಳಲಿ. ನಮ್ಮ ರಾಜ್ಯದಲ್ಲಿ ಬಂದು ಪುಂಡಾಟಿಕೆ ಮಾಡೋದು, ಘಟರ್ಷಣೆ ನಡೆಸೋದಕ್ಕೆ ಆಸ್ಪದ ನೀಡಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
