ಎಐ ಬಳಸಿ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ನಕಲಿ ವಿಡಿಯೋವನ್ನು ಕೆಲ ದುರುಳರು ಹರಿಬಿಟ್ಟಿದ್ದಾರೆ. ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್ನಲ್ಲಿ ಇಳಿಯುತ್ತಿರುವ ದೃಶ್ಯ ಅದಾಗಿದ್ದು, ಆ ಮಹಿಳೆಯ ಮುಖವನ್ನು ರುಕ್ಮಿಣಿ ಮುಖದೊಂದಿಗೆ ಬದಲಾಯಿಸಲಾಗಿದೆ. ಎಐ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಕಮೆಂಟುಗಳು ಹರಿದಾಡುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಟಿ, ತೀವ್ರ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮಾಧ್ಯಮಗಳ ಮುಂದೆ ಇದೇ ವಿಷಯವಾಗಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರುಕ್ಮಿಣಿ ವಸಂತ್ ಹೇಳಿದ್ದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
