ಚಿತ್ರದುರ್ಗ, ಆಗಸ್ಟ್ 07: ಯಾರಾದರೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಗೊತ್ತಾದರೆ ಅವರನ್ನು ಮುಗಿಸುವ ಯತ್ನಗಳು ನಡೆಯುತ್ತವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ತಮ್ಮನ್ನು ಸೇರಿ ಬಿ. ನಾಗೇಂದ್ರ ವಿಚಾರದಲ್ಲಿಯೂ ಇದೇ ರೀತಿ ಆಗಿದೆ ಎಂದವರು ತಿಳಿಸಿದ್ದಾರೆ. ಮಂತ್ರಿ ಸ್ಥಾನ ಸಿಗದಿದ್ದಾಗ ಅಸಮಾಧಾನಗಳು ಸಹಜ ಎಂದಿರುವ ಜಮೀರ್, ಹೈಕಮಾಂಡ್ಗೆ ಹಣ ಕೊಟ್ರೆ ಮಂತ್ರಿ ಆಗ್ತಾರೆ ಎಂಬ ಕೆಲ ಸ್ವಪಕ್ಷ ಶಾಸಕರ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ. ಅವೆಲ್ಲವೂ ಊಹಾಪೋಹ ಎಂದವರು ತಿಳಿಸಿದ್ದಾರೆ. ತಮಗೆ ಯಾವುದೇ ಖಾತೆ ಕೊಟ್ಟರು ನಿಭಾಯಿಸೋದಾಗಿಯೂ ಅವರು ಇದೇ ವೇಳೆ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
