Headlines

‘ಎಲ್ಲಾ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ’; ಕೋಚ್ ಸ್ಯಾಮಿ ಮೇಲೆ ಜೋಸೆಫ್ ಗಂಭೀರ ಆರೋಪ – Kannada News | West Indies Cricket Row: Alzarri Joseph Slams Daren Sammy Over Test Series Withdrawal Lies

ವೆಸ್ಟ್ ಇಂಡೀಸ್ ಕ್ರಿಕೆಟ್​ನಲ್ಲಿ ಕೋಚ್ ಹಾಗೂ ಆಟಗಾರರ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ (Daren Sammy) ವಿರುದ್ಧ ವೇಗಿ ಅಲ್ಜಾರಿ ಜೋಸೆಫ್ (Alzarri Joseph) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಸ್ಯಾಮಿ ಎಲ್ಲಾ ಗೊತ್ತಿದ್ದು ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ವಾಸ್ತವವಾಗಿ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ. ತಂಡದ ಆಯ್ಕೆ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದ ಸ್ಯಾಮಿ, ಜೋಸೆಫ್ ಅವರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸ್ವತಃ ಜೋಸೆಫ್ ಅವರೇ ಈ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದರು ಎಂದಿದ್ದರು.

ಇದೀಗ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ನೀಡಿರುವ ಹೇಳಿಕಗೆ ಸ್ಪಷ್ಟನೆ ನೀಡಿರುವ ಅಲ್ಜಾರಿ ಜೋಸೆಫ್, ‘ವೈಯಕ್ತಿಕ ಕಾರಣಗಳಿಂದಾಗಿ ನಾನು ಈ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದು ಸ್ಯಾಮಿ ಅವರಿಗೂ ಗೊತ್ತಿತ್ತು ಆದಾಗ್ಯೂ ಸ್ಯಾಮಿ ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

ಡ್ಯಾರೆನ್ ಸ್ಯಾಮಿ ಹೇಳಿದ್ದೇನು?

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ, ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅಲ್ಜಾರಿ ಜೋಸೆಫ್ ಅವರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆ ವೇಳೆ, ಸ್ವತಃ ಜೋಸೆಫ್ ಅವರೇ ಈ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದರು. ಜೋಸೆಫ್ ಅವರ ಈ ನಿರ್ಧಾರ ನನ್ನ ನಿಯಂತ್ರಣಕ್ಕೆ ಮೀರಿತ್ತು. ಮಂಡಳಿಯ ಒಪ್ಪಂದಕ್ಕೊಳಪಟ್ಟಿರುವ ಆಟಗಾರರು ತಂಡದ ಆಯ್ಕೆಯ ಸಮಯದಲ್ಲಿ ಆಡುವುದರಿಂದ ಹಿಂದೆ ಸರಿಯುವ ಈ ನಿರ್ಧಾರದ ಸಮಸ್ಯೆಯನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಗಳು ಆದಷ್ಟು ಬೇಗ ಪರಿಹರಿಸಬೇಕೆಂದು ಸ್ಯಾಮಿ ಹೇಳಿದ್ದರು.

ಅಲ್ಜಾರಿ ಜೋಸೆಫ್ ಹೇಳುವುದೇನು?

ಡ್ಯಾರೆನ್ ಸ್ಯಾಮಿ ಅವರ ಹೇಳಿಕೆಗೆ ಈಗ ಪ್ರತಿಕ್ರಿಯಿಸಿರುವ ಅಲ್ಜಾರಿ ಜೋಸೆಫ್,‘ಈ ಟೆಸ್ಟ್ ಸರಣಿಯಲ್ಲಿ ಆಡಲು ನಾನು ಸಂಪೂರ್ಣ ಫಿಟ್ ಆಗಿರಲಿಲ್ಲ. ನನ್ನ ಈ ಪರಿಸ್ಥಿತಿಯ ಬಗ್ಗೆ ನಾನು ಕೋಚ್ ಡ್ಯಾರೆನ್ ಸ್ಯಾಮಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದೆ. ಹಾಗೆಯೇ ನಾನು CWI ಜೊತೆಯೂ ಮಾತನಾಡಿದ್ದೇನೆ. ಇದರ ಹೊರತಾಗಿಯೂ CWI ಹೊರಡಿಸಿದ ಹೇಳಿಕೆಯಲ್ಲಿ ನಾನು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಈ ಸರಣಿಯಿಂದ ಹಿಂದೆ ಸರಿದೆ ಎಂದಿದೆ. ಇದರ ಹಿಂದೆ ಸ್ಯಾಮಿ ಅವರ ಕೈವಾಡವಿದೆ. ಏಕೆಂದರೆ ಸ್ಯಾಮಿ ಬಹಳ ಸಮಯದಿಂದ ತಂಡದಲ್ಲಿದ್ದಾರೆ.

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸ್ಯಾಮಿ ಹೇಳಿಕೆಯ ಬಗ್ಗೆ ನಾನು ಹೇಳಲು ಏನೂ ಇಲ್ಲ. ನಾನು ಒಂದು ವರ್ಷ ಪೂರ್ಣವಾಗಿ ಆಟದಿಂದ ಹೊರಗುಳಿದಿದ್ದೆ. ಎರಡನೇ ಬಾರಿಗೆ ಮತ್ತೆ ಗಾಯಕ್ಕೆ ತುತ್ತಾದ ಕಾರಣ ನಾನು ಇಷ್ಟು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಲ್ಲ. ನನ್ನ ದೇಹವು ಮತ್ತೊಂದು ಟೆಸ್ಟ್ ಸರಣಿಯನ್ನು ಆಡಲು ಸಿದ್ಧವಾಗಿರಲಿಲ್ಲ. ಆದ್ದರಿಂದ ನಾನು ಈ ಸರಣಿಯಿಂದ ಹಿಂದೆ ಸರಿದೆ. ಆದರೆ ಡ್ಯಾರೆನ್ ಸ್ಯಾಮಿ ನೀಡಿರುವ ಈ ಹೇಳಿಕೆ ಸಂಪೂರ್ಣವಾಗಿ ವಿವಾದಾತ್ಮಕವಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *