ನವದೆಹಲಿ, ಆಗಸ್ಟ್ 13: ಭಾರ್ತಿ ಏರ್‌ಟೆಲ್ (Bharti Airtel) ತನ್ನ ಗ್ರಾಹಕರಿಗೆ ನೀಡುತ್ತಿದ್ದ ಅತ್ಯಂತ ಜನಪ್ರಿಯ ₹299 ರ ಅನ್‌ಲಿಮಿಟೆಡ್ ಬೇಸ್ ಪ್ರಿಪೇಡ್ ಪ್ಲಾನ್ ಅನ್ನು ರದ್ದುಗೊಳಿಸಿದೆ. ಇದರೊಂದಿಗೆ ಕಂಪನಿಯ ಕನಿಷ್ಠ ಅನ್‌ಲಿಮಿಟೆಡ್ ಪ್ರಿಪೇಡ್ ಪ್ಲಾನ್ ಆರಂಭಿಕ ಬೆಲೆ ಈಗ ₹349 ಕ್ಕೆ ಏರಿಕೆಯಾಗಿದೆ. ಈ ಬದಲಾವಣೆಯು ಕಂಪನಿಯ ಬೇಸ್ ಎಆರ್‌ಪಿಯು (ARPU) ದರದಲ್ಲಿ 16.7% ನಷ್ಟು ಏರಿಕೆಗೆ ಕಾರಣವಾಗಿದೆ. ಎಆರ್‌ಪಿಯು ಎಂದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ.
ಏರ್‌ಟೆಲ್ ದರ ಬದಲಾವಣೆಗಳು
- ₹299 ಪ್ಲಾನ್ ರದ್ದು: ದಿನಕ್ಕೆ 1GB ಡೇಟಾ ನೀಡುತ್ತಿದ್ದ 28 ದಿನಗಳ ಅವಧಿಯ ₹299 ರ ಪ್ಲಾನ್ ಅನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ.
- ಇತರ ರದ್ದುಗೊಂಡ ಪ್ಲಾನ್‌ಗಳು: ಏರ್‌ಟೆಲ್ ತನ್ನ ಪೋರ್ಟ್‌ಫೋಲಿಯೋದಿಂದ ₹319, ₹649 ಮತ್ತು ₹799 ಬೆಲೆಯ ಪ್ರಿಪೇಡ್ ಪ್ಲಾನ್‌ಗಳನ್ನು ಸಹ ತೆಗೆದುಹಾಕಿದೆ. ಆದರೆ, ಕೆಲ ಪ್ರದೇಶಗಳಲ್ಲಿ ₹579, ₹619 ಪ್ಲಾನ್‌ಗಳನ್ನು ಕೈಬಿಡಲಾಗಿರುವುದು ತಿಳಿದುಬಂದಿದೆ.
- ಹೊಸ ಬೇಸ್ ಪ್ಲಾನ್ (₹349): ಈಗ ಗ್ರಾಹಕರು ದಿನಕ್ಕೆ 1.5GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಪಡೆಯಲು ₹299 ಬದಲು ಕನಿಷ್ಠ ₹349 ವೆಚ್ಚ ಮಾಡಬೇಕಾಗುತ್ತದೆ.
- ಬೆಲೆ ಏರಿಕೆ: ₹859 ಪ್ಲಾನ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಈಗ ಅದು ₹899 ಕ್ಕೆ ದೊರೆಯಲಿದೆ.
- ಬದಲಾಗದ ಪ್ಲಾನ್‌ಗಳು: ₹199 ಮತ್ತು ₹219 ಪ್ಲಾನ್‌ಗಳು ಹಾಗೆಯೇ ಮುಂದುವರಿಯಲಿವೆ. ₹199 ಪ್ಲಾನ್ 28 ದಿನ ವ್ಯಾಲಿಡಿಟಿ ಇದ್ದು ಒಟ್ಟಾರೆ 2ಜಿಬಿ ಡೇಟಾ ನೀಡುತ್ತದೆ. ₹219 ಪ್ಲಾನ್ ಒಟ್ಟು 3ಜಿಬಿ ಡೇಟಾ ನೀಡುತ್ತದೆ.
ಇದನ್ನೂ ಓದಿ: ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಏರ್‌ಟೆಲ್ ಒಂದೇ ದಿನದಲ್ಲಿ ಮಾಡಿದ ಅತಿ ದೊಡ್ಡ ಪ್ರಿಪೇಡ್ ಪೋರ್ಟ್‌ಫೋಲಿಯೋ ಬದಲಾವಣೆ ಇದಾಗಿದೆ. ಕಂಪನಿಯು ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾರಿಫ್ ವ್ಯವಸ್ಥೆಯನ್ನು ಮರುಹೊಂದಿಸಲು (Tariff Rationalisation) ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
