ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು – Kannada News | Gautam Adani overtakes Mukesh Ambani as Asia’s richest man as per Bloomberg billionaires index

ನವದೆಹಲಿ, ಏಪ್ರಿಲ್ 17: ಭಾರತದ ಇಬ್ಬರು ದಿಗ್ಗಜ ಉದ್ಯಮಿಗಳ ನಡುವೆ ಯಾರು ನಂಬರ್ ಒನ್ ಎನ್ನುವ ರೇಸ್ ನಡೆದಿದೆ. ಹೆಚ್ಚು ಆಸ್ತಿವಂತಿಕೆಯಲ್ಲಿ ಮುಕೇಶ್ ಅಂಬಾನಿ ಅವರನ್ನು ಗೌತಮ್ ಅದಾನಿ (Gautam Adani) ಹಿಂದಿಕ್ಕಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪಟ್ಟಿಯಲ್ಲಿ ಅದಾನಿ 19ನೇ ಸ್ಥಾನಕ್ಕೇರಿದರೆ, ಮುಕೇಶ್ ಅಂಬಾನಿ 20ನೇ ಸ್ಥಾನದಲ್ಲಿದ್ದಾರೆ. ಅದಾನಿ ನಿವ್ವಳ ಆಸ್ತಿ ಮೌಲ್ಯ 3.56 ಬಿಲಿಯನ್ ಡಾಲರ್​ನಷ್ಟು ಏರಿಕೆಯಾಗಿ 92.6 ಬಿಲಿಯನ್ ಡಾಲರ್ ಆಗಿದೆ. ಇದೇ ವೇಳೆ, ಮುಕೇಶ್ ಅಂಬಾನಿ ಅವರ ನಿವ್ವಳ ಆಸ್ತಿಮೌಲ್ಯ 90.8 ಬಿಲಿಯನ್ ಡಾಲರ್ ಇದೆ.

2022ರಲ್ಲಿ ಹಿಂಡನ್ಬರ್ಗ್ ವರದಿ ಬಿಡುಗಡೆಗೆ ಮುನ್ನ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯನ್ನು ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದರು. ಆ ಬಳಿಕ ಅದಾನಿ ಗ್ರೂಪ್​ನ ವಿವಿಧ ಷೇರುಗಳು ಕುಸಿದ ಪರಿಣಾಮ ಅವರ ಆಸ್ತಿಮೌಲ್ಯ ತುಸು ಕ್ಷೀಣಿಸಿತ್ತು. ಈಗ ಮತ್ತೆ ಅವರು ಪುಟಿದೆದಿದ್ದಾರೆ. ಭಾರತದ ನಂಬರ್ ಒನ್ ಮಾತ್ರವಲ್ಲ, ಏಷ್ಯಾದ ನಂಬರ್ ಒನ್ ಶ್ರೀಮಂತ ಎನಿಸಿದ್ದಾರೆ.

ಟಾಪ್-20ಯಲ್ಲಿ ಅಮೆರಿಕ ಕಾರುಬಾರು

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​ನಲ್ಲಿ ವಿಶ್ವದ ಅತೀ ಶ್ರೀಮಂತರಾದ 500 ಮಂದಿಯ ಪಟ್ಟಿ ಇದೆ. ಇದರಲ್ಲಿ ಟಾಪ್-20ಯಲ್ಲಿ 15 ಮಂದಿ ಅಮೆರಿಕನ್ನರೇ ಇದ್ದಾರೆ. ಫ್ರಾನ್ಸ್, ಮೆಕ್ಸಿಕೋ ಮತ್ತು ಸ್ಪೇನ್ ದೇಶದ ಒಬ್ಬೊಬ್ಬರು ಈ ಪಟ್ಟಿಯಲ್ಲಿದ್ದಾರೆ. ಭಾರತದವರು ಇಬ್ಬರಿದ್ದಾರೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ

ಇಲಾನ್ ಮಸ್ಕ್ 656 ಬಿಲಿಯನ್ ಡಾಲರ್​ನೊಂದಿಗೆ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ದಾಖಲೆ ಮುಂದುವರಿಸಿದ್ದಾರೆ. ಲ್ಯಾರಿ ಪೇಜ್​ನಿಂದ ಹಿಡಿದು ಲ್ಯಾರಿ ಎಲಿಸನ್​ವರೆಗೆ ಐವರು ಶ್ರೀಮಂತರು 200 ಬಿಲಿಯನ್ ಡಾಲರ್​ಗೂ ಹೆಚ್ಚಿನ ನಿವ್ವಳ ಆಸ್ತಿ ಹೊಂದಿದ್ದಾರೆ.

ಬ್ಲೂಮ್​ಬರ್ಗ್ ಇಂಡೆಕ್ಸ್; ವಿಶ್ವದ ಟಾಪ್-10 ಶ್ರೀಮಂತರು

  1. ಇಲಾನ್ ಮಸ್ಕ್: 656 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 286 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್: 269 ಬಿಲಿಯನ್ ಡಾಲರ್
  4. ಸೆರ್ಗೇ ಬ್ರಿನ್: 266 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 239 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 230 ಬಿಲಿಯನ್ ಡಾಲರ್
  7. ಮೈಕೇಲ್ ಡೆಲ್: 170 ಬಿಲಿಯನ್ ಡಾಲರ್
  8. ಜೆನ್ಸೆನ್ ಹುವಾಂಗ್: 164 ಬಿಲಿಯನ್ ಡಾಲರ್
  9. ಬರ್ನಾರ್ಡ್ ಆರ್ನಾಲ್ಟ್: 164 ಬಿಲಿಯನ್ ಡಾಲರ್
  10. ಜಿಮ್ ವಾಲ್ಟನ್: 150 ಬಿಲಿಯನ್ ಡಾಲರ್

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಬ್ಲೂಮ್​ಬರ್ಗ್ ಇಂಡೆಕ್ಸ್​ನಲ್ಲಿ 23 ಮಂದಿ ಭಾರತೀಯರು

  1. ಗೌತಮ್ ಅದಾನಿ: 19ನೇ ಸ್ಥಾನ
  2. ಮುಕೇಶ್ ಅಂಬಾನಿ: 20ನೇ ಸ್ಥಾನ
  3. ಲಕ್ಷ್ಮೀ ಮಿಟ್ಟಲ್: 62ನೇ ಸ್ಥಾನ
  4. ಶಿವ ನಾದರ್: 70ನೇ ಸ್ಥಾನ
  5. ಶಾಪೂರ್ ಮಿಸ್ತ್ರಿ ಕುಟುಂಬ: 71ನೇ ಸ್ಥಾನ
  6. ಸಾವಿತ್ರಿ ಜಿಂದಾಲ್: 73ನೇ ಸ್ಥಾನ
  7. ಸುನಿಲ್ ಮಿಟ್ಟಲ್ ಕುಟುಂಬ: 101ನೇ ಸ್ಥಾನ
  8. ದಿಲೀಪ್ ಶಾಂಘವಿ: 107ನೇ ಸ್ಥಾನ
  9. ಅಜೀಮ್ ಪ್ರೇಮ್​ಜಿ: 119ನೇ ಸ್ಥಾನ
  10. ಕುಮಾರ್ ಬಿರ್ಲಾ: 120ನೇ ಸ್ಥಾನ
  11. ರಾಧಾಕೃಷ್ಣ ದಮಾನಿ: 147ನೇ ಸ್ಥಾನ
  12. ಉದಯ್ ಕೋಟಕ್: 219ನೇ ಸ್ಥಾನ
  13. ಸೈರಸ್ ಪೂನಾವಾಲ: 232ನೇ ಸ್ಥಾನ
  14. ಕೆಪಿ ಸಿಂಗ್: 281ನೇ ಸ್ಥಾನ
  15. ವಿಕ್ರಮ್ ಲಾಲ್: 282ನೇ ಸ್ಥಾನ
  16. ರವಿ ಜೈಪುರಿಯಾ: 293ನೇ ಸ್ಥಾನ
  17. ಮುರಳಿ ದಿವಿ: 370ನೇ ಸ್ಥಾನ
  18. ನುಸ್ಲಿ ವಾಡಿಯಾ: 386ನೇ ಸ್ಥಾನ
  19. ಸಮೀರ್ ಮೆಹತಾ: 433ನೇ ಸ್ಥಾನ
  20. ಪಂಕಜ್ ಪಟೇಲ್: 447ನೇ ಸ್ಥಾನ
  21. ರಾಹುಲ್ ಭಾಟಿಯಾ: 451ನೇ ಸ್ಥಾನ
  22. ಸುಧೀರ್ ಮೆಹತಾ: 456ನೇ ಸ್ಥಾನ
  23. ಇಂದರ್ ಜೈಸಿಂಘಾನಿ: 466ನೇ ಸ್ಥಾನ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:34 pm, Fri, 17 April 26

Source link

Leave a Reply

Your email address will not be published. Required fields are marked *