ಏ 1ರಂದು ಶಿವಕುಮಾರ ಸ್ವಾಮೀಜಿ ಜನ್ಮದಿನ: SSLC ಪರೀಕ್ಷೆ ಹಿನ್ನಲೆ ಕಾರ್ಯಕ್ರದಲ್ಲಿ ಬದಲಾವಣೆ

ಏ 1ರಂದು ಶಿವಕುಮಾರ ಸ್ವಾಮೀಜಿ ಜನ್ಮದಿನ: SSLC ಪರೀಕ್ಷೆ ಹಿನ್ನಲೆ ಕಾರ್ಯಕ್ರದಲ್ಲಿ ಬದಲಾವಣೆ

ತುಮಕೂರು, ಮಾರ್ಚ್​ 29: ಏಪ್ರಿಲ್​​ 1ರಂದು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಯ ಕಾರ್ಯಕ್ರಮದ ಕೆಲಸಗಳು ಭರದಿಂದ ಸಾಗಿದೆ. ಏಪ್ರಿಲ್​ 1ರಂದು ತುಮಕೂರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಭಾಗವಹಿಸಲಿದ್ದಾರೆ. ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಈ ಬಾರಿ ಕಾರ್ಯಕ್ರಮಗಳನ್ನು ಖಡಿತ ಮಾಡಿರುವುದು ವಿಶೇಷ.

ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಇಂದು ಕ್ಯಾತಸಂದ್ರದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದಲಿಂಗ ಮಹಾಸ್ವಾಮೀಜಿ, ಏಪ್ರಿಲ್​​ 1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುತ್ತಿದ್ದಾರೆ. ದ್ವೀತಿಯ ಮಹಿಳಾ ರಾಷ್ಟಪತಿ ನಮ್ಮ‌ ಮಠಕ್ಕೆ ಬರುತ್ತಿದ್ದಾರೆ. ಬಡಕುಟುಂಬ ಹಾಗೂ ಆದಿವಾಸಿ ಸಮುದಾಯದಿಂದ ಬಂದಿದ್ದಾರೆ ಎಂಬುದು ನಾವೆಲ್ಲಾ ತುಂಬಾ ಹೆಮ್ಮೆ ಪಡುವ ವಿಚಾರ. ಇದು ನಮ್ಮ ತುಮಕೂರಿಗೆ ಹೆಮ್ಮೆಯ ವಿಚಾರ. ನಾವೆಲ್ಲರು ಅವರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ತುಮಕೂರು: ಏ 1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್​, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಚಿವ ವಿ. ಸೋಮಣ್ಣ, ಗೃಹ ಸಚಿವ ಜಿ.ಪರಮೇಶ್ವರ್, ಉನ್ನತ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಟಿ.ಬಿ ಜಯಚಂದ್ರ, ಶಾಸಕರಾದ ಕೆ.ಎನ್ ರಾಜಣ್ಣ, ಜ್ಯೋತಿ ಗಣೇಶ್ ಸುರೇಶ್ ಗೌಡ ಆಗಮಿಸುತ್ತಿದ್ದಾರೆ.

ಕಾರ್ಯಕ್ರಮದ ಸ್ವರೂಪ ಹೀಗಿದೆ

ಏಪ್ರಿಲ್ 1ರಂದು ಒಂದುವರೆ ಗಂಟೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 12:30
ವರೆಗೂ ನಡೆಯಲಿದೆ. ಕಾರ್ಯಕ್ರಮದ ಜೊತೆಗೆ ಪ್ರತಿ ವರ್ಷದಂತೆ ಈ ಬಾರಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಂತರ ಹೆಚ್ಚು ಕಾರ್ಯಕ್ರಮವಿರಲ್ಲ. ಏಕೆಂದರೆ  ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಈ ಬಾರಿ ಕಾರ್ಯಕ್ರಮಗಳನ್ನು ಖಡಿತ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ: 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?

ಬೆಳಿಗ್ಗೆ ಗದ್ದುಗೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗಿದೆ. ನಂತರ ಬೆಳಿಗ್ಗೆ 7:30ಕ್ಕೆ ಉತ್ಸವದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯೇ ವೇದಿಕೆ ಕಾರ್ಯಕ್ರಮ ಮುಗಿದ ತಕ್ಷಣ ವೀಣಾ ವಾದನ ಕಾರ್ಯಕ್ರಮ ಇರಲಿದೆ. ಅದಾದ ನಂತರ 119 ಮಹಿಳೆಯರಿಂದ ವಚನ ಗಾಯನ ಮಾಡುತ್ತಾರೆ. ಬಳಿಕ ಮಧ್ಯಾಹ್ನ ಹಾಗೂ ಸಂಜೆ ಯಾವುದೇ ಕಾರ್ಯಕ್ರಮವಿಲ್ಲ. ಕಾರ್ಯಕ್ರಮದ ವೇಳೆ ಒಂದಷ್ಟು ನಿಬಂಧನೆ ಪಾಲನೆ ಮಾಡಬೇಕಾಗಿದೆ. ಕೊಡೆ, ನೀರಿನ ಬಾಟಲ್ ತರಬಾರದು ಎಂದು ತಿಳಿಸಿದ್ದಾರೆ.

ಯಾವುದನ್ನು ಕೇಳಿ ಪಡೆಯಬಾರದು

ಇನ್ನು ಶಿವಕುಮಾರ್ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ದಯವಿಟ್ಟು ಯಾರು ಪ್ರಚಾರ ಮಾಡಬೇಡಿ. ಯಾವುದನ್ನು ಕೇಳಿ ಪಡೆಯಬಾರದು ಎಂದು ಸಿದ್ದಲಿಂಗ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *