ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಖಂಡಿಸಿ, ಬಿಸಿಸಿಐ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಹಾಕಿತ್ತು. ಆ ಬಳಿಕ ಕ್ರಿಕೆಟ್ ಲೋಕದಲ್ಲಿ ದೊಡ್ಡ ವಿವಾದವೊಂದು ಹುಟ್ಟಿಕೊಂಡಿತು. ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ನಿಂದ ತನ್ನ ತಂಡದ ಹೆಸರನ್ನು ಹಿಂತೆಗೆದುಕೊಂಡಿತು. ಇತ್ತ ಪಾಕಿಸ್ತಾನ, ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿತ್ತು.
