ಒಂದು ಆವೃತ್ತಿಯಲ್ಲಿ ಅತ್ಯಧಿಕ ಶತಕ; ಜಂಟಿಯಾಗಿ 2ನೇ ಸ್ಥಾನಕ್ಕೇರಿದ ದೇವದತ್ ಪಡಿಕ್ಕಲ್ – Kannada News | Devdutt Padikkal’s 4th Century in Vijay Hazare Trophy: Karnataka Star Shines

ವಿಜಯ್ ಹಜಾರೆ ಟ್ರೋಫಿಯ 5ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ತ್ರಿಪುರ ತಂಡಗಳು ಮುಖಾಮುಖಿಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡದ ಪರ ಆರಂಭಿಕ ದೇವದತ್ ಪಡಿಕ್ಕಲ್ ಅಮೋಘ 108 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಆವೃತ್ತಿಯಲ್ಲಿ ದೇವದತ್ ಕಲೆಹಾಕುತ್ತಿರುವ 4ನೇ ಶತಕ ಇದಾಗಿದೆ. ಅಂದರೆ ಈ ಆವೃತ್ತಿಯಲ್ಲಿ ನಡೆದಿರುವ ಐದು ಪಂದ್ಯಗಳ ನಾಲ್ಕು ಇನ್ನಿಂಗ್ಸ್​ಗಳಲ್ಲಿ ದೇವದತ್ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಿದೆ.

ಈ ಟೂರ್ನಿಯಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ದೇವದತ್ ಟೂರ್ನಿಯ ಐದನೇ ಪಂದ್ಯದಲ್ಲೇ 4ನೇ ಶತಕ ಸಿಡಿಸುವ ಮೂಲಕ ಒಂದು ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಧಿಕ ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲನೇ ಸ್ಥಾನದಲ್ಲಿರುವ ತಮಿಳುನಾಡು ಬ್ಯಾಟ್ಸ್‌ಮನ್ ಎನ್​ ಜಗದೀಸನ್ ಹಾಗೂ ಕನ್ನಡಿಗ ಕರುಣ್ ನಾಯರ್ ತಲಾ 5 ಶತಕಗಳನ್ನು ಬಾರಿಸಿದ್ದರೆ, ಪಡಿಕ್ಕಲ್ 4 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಡಿಕ್ಕಲ್ ಈ ಹಿಂದೆಯೂ ಅಂದರೆ 2020-21 ರ ಆವೃತ್ತಿಯಲ್ಲಿ 4 ಶತಕ ಬಾರಿಸಿದ್ದರು.

Source link

Leave a Reply

Your email address will not be published. Required fields are marked *