‘ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಸೇರಿದಂತೆ ಹಲವಾರು ಮಂದಿ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು. ಆರಂಭದಲ್ಲಿಯೇ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಕೆವಿಎನ್ ಮಾಲೀಕ ವೆಂಕಟ್ ಅವರು ಚಿತ್ರತಂಡದ ಎಲ್ಲರಿಗೂ ಧನ್ಯವಾದ ಹೇಳಿದರು. ‘ಟಾಕ್ಸಿಕ್’ ಸಿನಿಮಾ ಆರಂಭ ಹೇಗಾಯ್ತು, ಯಶ್ ಅವರ ಗೆಳೆತನ ಸಿಕ್ಕಿದ್ದು ಹೇಗೆ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಮಾಪಕ ವೆಂಕಟ್ ಮಾತನಾಡಿದರು.
ವೆಂಕಟ್ ಅವರು ಹೇಳಿದಂತೆ ‘ಟಾಕ್ಸಿಕ್’ ಸಿನಿಮಾ ಶುರುವಾಗಿದ್ದು ಒಂದು ಪಾರ್ಟಿಯಿಂದ ಅಂತೆ. ಪಾರ್ಟಿಯೊಂದಕ್ಕೆ ವೆಂಕಟ್ ಅವರು ಕರೆಯದೇ ಹೋಗಿದ್ದರಂತೆ. ಅಲ್ಲಿ ಯಶ್ ಅವರ ಪರಿಚಯ ಆಯ್ತಂತೆ. ವಿಶೇಷವೆಂದರೆ ವೆಂಕಟ್ ಅವರು ಕರೆಯದೇ ಹೋಗಿದ್ದ ಪಾರ್ಟಿ, ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿ.
ರಾಧಿಕಾ ಅವರ ಹುಟ್ಟುಹಬ್ಬದ ಪಾರ್ಟಿಗೆ ಯಾರೋ ಗೆಳೆಯರನ್ನು ಭೇಟಿ ಮಾಡಲೆಂದು ವೆಂಕಟ್ ಹೋಗಿದ್ದರಂತೆ. ಆಗ ಕೆಲ ಸಮಯ ಯಶ್ ಅವರೊಟ್ಟಿಗೆ ವೆಂಕಟ್ ಅವರು ಮಾತನಾಡಿದ್ದು, ಅದೇ ಅವರಿಬ್ಬರ ಮೊದಲ ಭೇಟಿಯಂತೆ. ಮೊದಲ ಮಾತು-ಕತೆಯಲ್ಲೇ ಕನೆಕ್ಟ್ ಆದೆ ಎಂದ ವೆಂಕಟ್ ಅವರು. ಆ ನಂತರ ಹಲವು ಭಾರಿ ಭೇಟಿ ಆದೆವು, ಈಗ ಸಿನಿಮಾ ಮಾತ್ರವೇ ಅಲ್ಲದೆ, ಇನ್ನೂ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ಪಾರ್ಟರ್ ಆಗಿ ಮಾಡುತ್ತಿದ್ದೇವೆ’ ಎಂದರು ವೆಂಕಟ್.
ಇದನ್ನೂ ಓದಿ:‘ಆಲ್ ದಿ ಬೆಸ್ಟ್ ಟಾಕ್ಸಿಕ್’: ಟ್ರೈಲರ್ ಲಾಂಚ್ ಮಾಡಿದ ಶಿವಣ್ಣ
ಅವರಷ್ಟು ಸಿನಿಮಾ ಬಗ್ಗೆ ಫ್ಯಾಷನ್ ಇರುವ, ಕಷ್ಟ ಪಟ್ಟು ಕೆಲಸ ಮಾಡುವ, ಶಿಸ್ತಿನಿಂದ ಕೆಲಸ ಮಾಡುವ, ದೂರಾಲೋಚನೆಯುಳ್ಳ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರಿಲ್ಲದೆ ಈ ಸಿನಿಮಾ ಆಗುತ್ತಿರಲಿಲ್ಲ. ಅವರ ವೃತ್ತಿಪರತೆ, ಮೌಲ್ಯಗಳು, ಎಲ್ಲವನ್ನೂ ಅದ್ಭುತವಾಗಿ ಮತ್ತು ಅತ್ಯದ್ಭುತವಾಗಿಯೇ ಮಾಡಬೇಕು ಎಂಬ ಅವರ ಹಂಬಲ ನನ್ನನ್ನು ವಿಸ್ಮಿತಗೊಳಿಸಿತು. ಈ ಸಿನಿಮಾಕ್ಕೆ ಕತೆ ಬರೆಯುವ ಜೊತೆಗೆ ಸಹ ನಿರ್ಮಾಣ ಮಾಡಿದ್ದಾರೆ. ಅವರು ಸೆಟ್ನಲ್ಲಿ ಇದ್ದಾಗ ಎಲ್ಲವೂ ಸರಿಯಾಗಿ ಹೋಗುತ್ತದೆ. ಏನಾದರೂ ಸರಿಯಿಲ್ಲ ಎಂದರೆ ಅವರು ಅದನ್ನು ಸರಿ ಮಾಡುತ್ತಾರೆ. ಒಬ್ಬ ನಿರ್ಮಾಪಕನಿಗೆ ಇದಕ್ಕಿಂತಲೂ ಇನ್ನೇನು ಬೇಕು. ಇದೊಂದು ನೆನಪಿಟ್ಟಿಕೊಳ್ಳುವಂಥಾ ಜರ್ನಿ ನನ್ನ ಪಾಲಿಗೆ. ‘ಟಾಕ್ಸಿಕ್’ ಜನರೇಷನ್ಗಳ ಕಾಲ ನೆನಪುಳಿಯುವ ಸಿನಿಮಾ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಇದು ಕೇವಲ ಎಂಗೇಜಿಂಗ್ ಮತ್ತು ಎಂಟರ್ಟೈನ್ ಮಾಡುವ ಸಿನಿಮಾ ಅಲ್ಲ ಇದು ನಿಮ್ಮ ನಾಡಿ ಮಿಡಿತವನ್ನೇ ಬದಲಾಯಿಸುತ್ತದೆ’ ಎಂದಿದ್ದಾರೆ ವೆಂಕಟ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
