ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ.
ಇಡೀ ಯೋಜನೆಯನ್ನು ಪೂರೈಸಿದ ನಂತರವೂ ಸರ್ಕಾರದ ಬೊಕ್ಕಸಕ್ಕೆ ಸುಮಾರು 2,300 ಕೋಟಿ ರೂ.ಗೂ ಅಧಿಕ ಹಣ ಉಳಿತಾಯವಾಗಲಿದೆ. ಫೆಬ್ರವರಿ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ನಿರ್ಮಿಸಲಾದ 2,722 ಫ್ಲ್ಯಾಟ್ಗಳನ್ನು ಉದ್ಘಾಟಿಸಿದ್ದು, ಹೆಚ್ಚುವರಿ 6,632 ಫ್ಲ್ಯಾಟ್ಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಒಟ್ಟು ಯೋಜನಾ ಪ್ರದೇಶದ ಕೇವಲ ಶೇ. 12.9ರಷ್ಟು ಭಾಗವನ್ನು (ಅಂದರೆ ಸುಮಾರು 69.41 ಎಕರೆ) ವಾಣಿಜ್ಯ ಮತ್ತು ವಸತಿ ಉದ್ದೇಶಗಳಿಗಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಅಥವಾ ಲೀಸ್ಗೆ ನೀಡಲು ಬಳಸಲಾಗುತ್ತದೆ.
ಹಳೆಯ ಸಣ್ಣ ಕಟ್ಟಡಗಳ ಬದಲಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಎತ್ತರದ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಒಟ್ಟು 21,000ಕ್ಕೂ ಹೆಚ್ಚು ಹೊಸ ಫ್ಲ್ಯಾಟ್ಗಳು ಲಭ್ಯವಾಗಲಿವೆ.
ಈ ಪ್ರದೇಶಗಳಲ್ಲಿದ್ದ ಹಳೆಯ ಮನೆಗಳಲ್ಲಿ ಶೇ. 40ರಷ್ಟು ವಾಸಿಸಲು ಅಯೋಗ್ಯವಾಗಿದ್ದವು. ಅಲ್ಲದೆ ಕೇಂದ್ರ ಸರ್ಕಾರಿ ನೌಕರರಿಗೆ ಸುಮಾರು 20,000ಕ್ಕೂ ಹೆಚ್ಚು ಮನೆಗಳ ಕೊರತೆಯಿತ್ತು.
ಸರೋಜಿನಿ ನಗರ, ನೇತಾಜಿ ನಗರ, ನೌರೋಜಿ ನಗರ, ಕಸ್ತೂರಿಬಾ ನಗರ, ತ್ಯಾಗರಾಜ್ ನಗರ, ಶ್ರೀನಿವಾಸಪುರಿ ಮತ್ತು ಮೊಹಮ್ಮದ್ಪುರ ಒಳಗೊಂಡಂತೆ ಸುಮಾರು 537 ಎಕರೆ ಪ್ರದೇಶದಲ್ಲಿ ಈ ಯೋಜನೆ ವ್ಯಾಪಿಸಿದೆ.