ಒಂದೇ ಕೋಣೆಯಲ್ಲಿ ಸಿಕ್ತು ಮಹಿಳೆ ಮತ್ತು ಕೆಲಸದವನ ಶವ! ವಿದೇಶದಿಂದ ಮರಳಿದ ಪತಿಗೆ ಕಾದಿತ್ತು ಶಾಕ್ – Kannada News | Bengaluru: Elderly Woman Murdered, House Help Dead in Residence

ಒಂದೇ ಕೋಣೆಯಲ್ಲಿ ಸಿಕ್ತು ಮಹಿಳೆ ಮತ್ತು ಕೆಲಸದವನ ಶವ!

ಬೆಂಗಳೂರು, ಫೆಬ್ರುವರಿ 03: ನಗರದಲ್ಲಿ ಭಾನುವಾರ ಬೆಳಗಿನ ಜಾವ 65 ವರ್ಷದ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲೇ (Bengaluru) ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಕೆಲಸಗಾರನ ಶವವೂ ಅದೇ ಕೊಠಡಿಯಲ್ಲಿ ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತನ್ನ ಕೋಣೆಯಲ್ಲೇ ಹತ್ಯೆಯಾದ ವೃದ್ಧೆ

ಮಹಿಳೆಯ ಪತಿ ವಿದೇಶ ಪ್ರವಾಸದಿಂದ ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಮರಳಿದ್ದರು. ಮನೆಯ ಬಾಗಿಲನ್ನು ಬಡಿದ ಪತಿಗೆ ಪತ್ನಿಯಿಂದ ಉತ್ತರ ಸಿಗದ ಕಾರಣ ಆತಂಕಗೊಂಡಿದ್ದರು. ಭಯಗೊಂಡ ಪತಿ ಮನೆಯಲ್ಲೇ ಇದ್ದ ತಮ್ಮ ಪುತ್ರಿಗೆ ಕರೆ ಮಾಡಿ ಮನೆಯೊಳಗೆ ಬಂದಿದ್ದರು. ಈ ವೇಳೆ ಮನೆ ಕೆಲಸಗಾರನು ಸಾಮಾನ್ಯವಾಗಿ ಮಲಗುತ್ತಿದ್ದ ಸ್ಥಳದಲ್ಲಿ ಕಾಣಿಸದಿರುವುದಕ್ಕೆ ವ್ಯಕ್ತಿಯಲ್ಲಿ ಅನುಮಾಣ ಮೂಡಿತ್ತು.

ನಂತರ ಪತ್ನಿ ಮಲಗುವ ಕೋಣೆಗೆ ತೆರಳಿದ ಪತಿಗೆ ಶಾಕ್ ಕಾದಿತ್ತು. ಹಾಸಿಗೆಯ ಮೇಲೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಮೀಪದಲ್ಲೇ ಮನೆ ಕೆಲಸಗಾರನ ಶವವೂ ಕಂಡುಬಂದಿದೆ. ಇದನ್ನು ಕಂಡ ಪತಿಯ ಕೂಗಾಟಕ್ಕೆ ಪುತ್ರಿ ಧಾವಿಸಿ ಬಂದು ನೋಡಿದಾಗ ಆಕೆಯೂ ದಂಗಾಗಿದ್ದಳು. ನಂತರ ಪುತ್ರಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಲೈಂಗಿಕ ದೌರ್ಜನ್ಯವಾಗಿರುವ ಸಂದೇಹ

ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಕುತ್ತಿಗೆ ಹಿಸುಕಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮನೆ ಕೆಲಸಗಾರ ಮದ್ಯ ವ್ಯಸನಿಯಾಗಿದ್ದು, ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದೆಂದೂ ಊಹಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಘಟನೆಗೆ ಸಂಬಂಧಿಸಿದ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *