ಬೆಂಗಳೂರು, ಜೂನ್ 26: ಒಂದು ಕಾಲದಲ್ಲಿ ಕೂಲ್ ಸಿಟಿ ಎಂದೇ ಖ್ಯಾತವಾಗಿದ್ದ ಬೆಂಗಳೂರು ಈಗ ಹಾಟ್ ಸಿಟಿಯಾಗುತ್ತಿದೆ. ಈ ವಾತಾವರಣದ ಬದಲಾವಣೆಯನ್ನು ಗಮನಿಸಿರುವ ಬಿಡಿಎ, ನಗರವನ್ನು ಮತ್ತೆ ಹಸಿರಾಗಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೆಂಪೇಗೌಡ ಜಯಂತಿ ದಿನದಂದು ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮತ್ತು ಆಯುಕ್ತ ಮಣಿವಣ್ಣನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಹ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅಭಿಯಾನ ಹೇಗೆ ನಡೆಯಲಿದೆ ಮತ್ತು ಎಷ್ಟು ಜನ ಭಗಿಯಾಗಲಿದ್ದಾರೆ ಎಂಬ ಬಗ್ಗೆ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಪಿ. ಅವರು ನೀಡಿರುವ ಮಾಹಿತಿ ಈ ವಿಡಿಯೋದಲ್ಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
