ಒಂದೇ ಮದುವೆ ಸಮಾರಂಭದಲ್ಲಿ ಸಮಂತಾ-ನಾಗ ಚೈತನ್ಯ; ಮಾಜಿ ಜೋಡಿಯ ಫೋಟೋ ವೈರಲ್ – Kannada News | Samantha Naga Chaitanya attend same wedding reception with Raj Nidimoru Sobhita Dhulipala

ಟಾಲಿವುಡ್‌ನ ಖ್ಯಾತ ವಿತರಕ ಮತ್ತು ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ವಿವಾಹ ಆರತಕ್ಷತೆ ಶನಿವಾರ (ಮೇ 2) ರಾತ್ರಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ತೆಲುಗು (Tollywood) ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ನಾಗಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಮಾಜಿ ದಂಪತಿಗಳಾದ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಅವರ ಮೇಲೆ. ಆ ಸಂದರ್ಭದ ಕೆಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ವಿಶೇಷವೆಂದರೆ, ಸಮಂತಾ ಮತ್ತು ನಾಗ ಚೈತನ್ಯ ತಮ್ಮ ತಮ್ಮ ಹೊಸ ಜೀವನ ಸಂಗಾತಿಗಳ ಜೊತೆಗೂಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಮಂತಾ ಅವರು ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡರೆ, ನಾಗ ಚೈತನ್ಯ ಅವರು ಪತ್ನಿ ಶೋಭಿತಾ ಧುಲಿಪಾಲ ಅವರ ಜೊತೆ ಆಗಮಿಸಿದರು.

ನೇರಳೆ ಮತ್ತು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಸಮಂತಾ ಕಂಗೊಳಿಸುತ್ತಿದ್ದರು. ಪತಿ ರಾಜ್ ನಿಡಿಮೋರು ಅವರು ಸೂಟ್‌ನಲ್ಲಿ ಮಿಂಚುತ್ತಿದ್ದರು. ಸಮಂತಾ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಅದೇ ರೀತಿ, ನಾಗ ಚೈತನ್ಯ ಅವರು ನೀಲಿ ಬಣ್ಣದ ಬ್ಲೇಜರ್ ಧರಿಸಿದ್ದರೆ, ಶೋಭಿತಾ ಅವರು ನೀಲಿ ಮತ್ತು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. ಇವರ ಜೊತೆಯಲ್ಲಿ ನಾಗಾರ್ಜುನ ಮತ್ತು ಅಮಲಾ ಕೂಡ ವೇದಿಕೆಯ ಮೇಲೆ ನವ ದಂಪತಿಗಳಿಗೆ ಶುಭ ಹಾರೈಸಿದರು.

ಒಂದೇ ಸಮಾರಂಭದಲ್ಲಿ ಇಬ್ಬರೂ ಕಾಣಿಸಿಕೊಂಡರೂ, ಸಮಂತಾ ಮತ್ತು ಚೈತನ್ಯ ಪರಸ್ಪರ ಮಾತನಾಡಿದ ಅಥವಾ ಎದುರಾದ ಯಾವುದೇ ವಿಡಿಯೋಗಳು ಲಭ್ಯವಾಗಿಲ್ಲ. ಇಬ್ಬರೂ ಬೇರೆ ಬೇರೆ ಸಮಯದಲ್ಲಿ ವೇದಿಕೆ ಏರಿ ಶುಭ ಹಾರೈಸಿದರು. ಆದರೆ, ಅಭಿಮಾನಿಗಳು ಮಾತ್ರ ಈ ದೃಶ್ಯಗಳನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಸುತ್ತಿದ್ದಾರೆ. ‘ಎಲ್ಲರೂ ಈಗ ಅವರವರ ಜೀವನದಲ್ಲಿ ಸಂತೋಷವಾಗಿದ್ದಾರೆ, ಯಾರಿಗೂ ದೃಷ್ಟಿ ತಾಕದಿರಲಿ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕನ್ನಡದ ‘ರುದ್ರ ಕಾಲ’ ಪೋಸ್ಟರ್ ರಿಲೀಸ್ ಮಾಡಿದ ಸಮಂತಾ: ವಿಡಿಯೋ ನೋಡಿ

ಸಮಂತಾ ಮತ್ತು ನಾಗ ಚೈತನ್ಯ 2017ರಲ್ಲಿ ಗೋವಾದಲ್ಲಿ ವಿವಾಹವಾಗಿದ್ದರು. ಆದರೆ, 2021ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆನಂತರ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವಿವಾಹವಾದರೆ, ಸಮಂತಾ ಕಳೆದ ವರ್ಷ ರಾಜ್ ನಿಡಿಮೋರು ಅವರ ಜೊತೆ ಹೊಸ ಜೀವನ ಆರಂಭಿಸಿದ್ದರು. ಒಟ್ಟಿನಲ್ಲಿ, ಹಳೆಯ ಕಹಿ ನೆನಪುಗಳನ್ನು ಮರೆತು ಇಬ್ಬರೂ ತಮ್ಮ ಹೊಸ ಜೀವನದಲ್ಲಿ ಮುನ್ನಡೆಯುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *