ಒಟಿಟಿಯಲ್ಲಿ ಸದ್ದು ಮಾಡುತ್ತಿದೆ ‘ರಾಖ್’ ವೆಬ್ ಸರಣಿ; ಸರಣಿ ನೋಡಿದ್ರೆ ಮೈ ನಡುಗುತ್ತೆ – Kannada News | Raakh Web Series: Unearthing The Chilling 1978 Ranga Billa True Crime On Amazon Prime

ಸಸ್ಪೆನ್ಸ್ ಹಾಗೂ ಕ್ರೈಂ ಥ್ರಿಲ್ಲರ್ ಕಥೆಗಳನ್ನು ನೋಡುವು ಎಂದರೆ ಒಂದು ವರ್ಗದ ಜನರಿಗೆ ಸದಾ ಇಷ್ಟ ಆಗುತ್ತದೆ. ಇವುಗಳಲ್ಲಿ ಬಹುತೇಕವು ಕಾಲ್ಪನಿಕ ಕಥೆ. ಆದರೆ, ಈಗ ನೈಜ ಘಟನೆ ಆಧಾರಿತ ಸರಣಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಈ ವೆಬ್ ಸರಣಿ ಹೆಸರು ರಾಖ್. ಬಿಡುಗಡೆಯಾದ ದಿನದಿಂದಲೇ ಈ ಸರಣಿ ತನ್ನ ವಿಭಿನ್ನ ಕಥಾಹಂದರ ಹಾಗೂ ರೋಚಕ ತಿರುವುಗಳಿಂದ ಪ್ರೇಕ್ಷಕರ ಗಮನ ಸೆಳೆದಿದೆ.

ಈ ಸರಣಿಯು ಕೇವಲ ಕಾಲ್ಪನಿಕ ಕಥೆಯಲ್ಲ, ಬದಲಿಗೆ ಇಡೀ ಭಾರತವನ್ನೇ ನಡುಗಿಸಿದ್ದ ಅತ್ಯಂತ ಘೋರವಾದ ನೈಜ ಕ್ರಿಮಿನಲ್ ಘಟನೆಯೊಂದನ್ನು ಆಧರಿಸಿದೆ. 1978ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ರಂಗಾ-ಬಿಲ್ಲಾ’ ಅಪಹರಣ ಮತ್ತು ಕೊಲೆ ಪ್ರಕರಣದ ಕರಾಳ ಹಿನ್ನೆಲೆಯನ್ನು ಈ ಸರಣಿ ಹೊಂದಿದೆ.

1978ರ ಆಗಸ್ಟ್ 26ರಂದು ದೆಹಲಿಯಲ್ಲಿ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ಕ್ಯಾಪ್ಟನ್ ಮದನ್ ಮೋಹನ್ ಚೋಪ್ರಾ ಅವರ ಮಕ್ಕಳಾದ ಗೀತಾ ಚೋಪ್ರಾ (16) ಮತ್ತು ಸಂಜಯ್ ಚೋಪ್ರಾ (14) ಎಂಬ ಇಬ್ಬರು ಅಪ್ರಾಪ್ತ ಸಹೋದರ-ಸಹೋದರಿ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನೆ ಬಿಟ್ಟಿದ್ದರು. ದಾರಿಯಲ್ಲಿ ಅವರಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕುಲಜೀತ್ ಸಿಂಗ್ ಅಲಿಯಾಸ್ ರಂಗಾ ಮತ್ತು ಜಸ್ಬೀರ್ ಸಿಂಗ್ ಅಲಿಯಾಸ್ ಬಿಲ್ಲಾ ಎಂಬ ಇಬ್ಬರು ಕ್ರೂರ ಅಪರಾಧಿಗಳು ಕಾರಿನಲ್ಲಿ ಅಪಹರಿಸಿದ್ದರು. ಅವರನ್ನು ಕೊಲೆ ಕೂಡ ಮಾಡಿದ್ದರು. ಈ ಘಟನೆ ಇಡೀ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತದನಂತರ ಭಾರಿ ಕಾರ್ಯಾಚರಣೆಯ ಮೂಲಕ ರಂಗಾ ಮತ್ತು ಬಿಲ್ಲಾನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಕಾರ್ಯಚಾರಣೆಯ ಕಥೆಯೇ ‘ರಾಖ್’.

‘ರಾಖ್’ ಎಂದರೆ ಹಿಂದಿಯಲ್ಲಿ ‘ಬೂದಿ’ ಎಂದರ್ಥ. ಹೆಸರೇ ಸೂಚಿಸುವಂತೆ ಈ ಸರಣಿಯು ಸೇಡು, ಅಪರಾಧ ಸುತ್ತ ಸುತ್ತುತ್ತದೆ. ನಿರ್ದೇಶಕ ಪ್ರೋಸಿತ್ ರಾಯ್ ಈ ಕರಾಳ ಸತ್ಯ ಘಟನೆಯನ್ನು ಆಧರಿಸಿಯೇ ಈ ಸರಣಿಯನ್ನು ರೂಪಿಸಿದ್ದು, ಕಥೆಯಲ್ಲಿ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು, ಪಟ್ಟಿ ಇಲ್ಲಿದೆ

ತಾಂತ್ರಿಕತೆ ಮತ್ತು ನಟನೆ

ಈ ಸರಣಿಗೆ ಪ್ರಮುಖ ಪ್ಲಸ್ ಪಾಯಿಂಟ್ ಎಂದರೆ ಅದರ ಸಿನೆಮಾಟೋಗ್ರಫಿ ಹಾಗೂ ಸೆಟ್. 1978ರ ಕಾಲಘಟ್ಟವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಕ್ರೈಮ್ ಶೈಲಿಯ ಅದರಲ್ಲೂ ರಿಯಲ್ ಕಥೆ ಇಷ್ಟಪಡುವವರಾಗಿದ್ದರೆ, ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ರಾಖ್’ ವೆಬ್ ಸರಣಿ ನಿಮಗೆ ಖಂಡಿತ ಒಂದು ಉತ್ತಮ ಆಯ್ಕೆ. ಈ ಸರಣಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅಲಿ ಫಜಲ್ ಗಮನ ಸೆಳೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *