ಓಹ್ ಈಗ ಸಿಕ್ದೆ ನೋಡು, ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹೆಂಡತಿಯನ್ನು ಮತಗಟ್ಟೆಯಲ್ಲಿ ಕಂಡ ಪತಿ ಮಾಡಿದ್ದೇನು? – Kannada News | West Bengal: Missing Wife Found at Polling Booth, Husband’s Election Day Confrontation Drama

ಕೋಲ್ಕತ್ತಾ, ಏಪ್ರಿಲ್ 24: ಓಹ್ ಈಗ ಸಿಕ್ದೆ ನೋಡು ಎಲ್ಲಿದ್ದೆ ಇಷ್ಟು ದಿನ? ಇದು ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಪತ್ನಿಯನ್ನು ಮತಗಟ್ಟೆಯಲ್ಲಿ ಕಂಡಾಗಿ ಪತಿ ಕೇಳಿದ ಪ್ರಶ್ನೆ ಇದು. ಪಶ್ಚಿಮ ಬಂಗಾಳ(West Bengal)ದಲ್ಲಿ ಏಪ್ರಿಲ್ 23ರಂದು ನಡೆದ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತ್ನಿಯನ್ನು ಪತಿ ಕಂಡಿದ್ದಾರೆ.

ತಾರಾಬರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 25/238 ರ ಹೊರಗೆ ಒಬ್ಬ ವ್ಯಕ್ತಿ ಅತಿಯಾದ ಬಿಸಿಲನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಓಡಾಡುತ್ತಿದ್ದ. ಬೆವರಿನಿಂದ ಮೈ ನೆನೆದಿದ್ದರೂ ಅವರ ಕಣ್ಣುಗಳು ಮಾತ್ರ ಮತಗಟ್ಟೆಯ ಒಳಗೆ ಬರುವ ಪ್ರತಿಯೊಬ್ಬ ಮಹಿಳೆಯ ಮುಖವನ್ನೂ ಜಾಲಾಡುತ್ತಿದ್ದವು.

ಮಧ್ಯಾಹ್ನ ಸರಿಯಾಗಿ 2 ಗಂಟೆಯ ಸಮಯ. ಒಬ್ಬ ಮಹಿಳೆ ಕೈಯಲ್ಲಿ ಮತದಾರರ ಗುರುತಿನ ಚೀಟಿ (Voter ID) ಹಿಡಿದು ಸಂಭ್ರಮದಿಂದ ಮತಗಟ್ಟೆಯತ್ತ ಹೆಜ್ಜೆ ಹಾಕಿದಳು. ಅವಳು ಹತ್ತಿರ ಬರುತ್ತಿದ್ದಂತೆಯೇ, ಗಂಟೆಗಟ್ಟಲೆ ಹಸಿದ ಹುಲಿಯಂತೆ ಕಾಯುತ್ತಿದ್ದ ಆ ವ್ಯಕ್ತಿ ಒಮ್ಮೆಗೆ ಅವಳ ಮೇಲೆ ಎರಗಿದ, ಹಿಂದಿನಿಂದ ಅವಳ ಕೂದಲನ್ನು ಹಿಡಿದು ಎಳೆದ ಆತ, ಎಲ್ಲರ ಮುಂದೆ ಅವಳನ್ನು ನಿಂದಿಸಲು ಶುರು ಮಾಡಿದ.

ಮತಗಟ್ಟೆಯಲ್ಲಿ ಭದ್ರತೆಗೆ ನಿಂತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (CAPF) ಸಿಬ್ಬಂದಿ ಕೂಡಲೇ ಧಾವಿಸಿ ಬಂದು ಮಹಿಳೆಯನ್ನು ಆತನ ಹಿಡಿತದಿಂದ ಬಿಡಿಸಿದರು. ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂತು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಆ ಮಹಿಳೆಯ ಪತಿ, ಎರಡು ವರ್ಷಗಳ ಹಿಂದೆ ಆಕೆ ಮನೆ ಬಿಟ್ಟು ಓಡಿಹೋಗಿದ್ದಳು. ಇನ್ನೊಬ್ಬ ಪುರುಷನೊಂದಿಗೆ ಹೊಸ ಜೀವನ ಆರಂಭಿಸಿದ್ದ ಆಕೆ ಪತಿಯ ನೆನಪೇ ಇರಲಿಲ್ಲ.

ಮತ್ತಷ್ಟು ಓದಿ: Video: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ

ಅವಳನ್ನು ಪತ್ತೆಹಚ್ಚಲು ಆತ ಬಳಸಿದ ತಂತ್ರ ನಿಜಕ್ಕೂ ಅದ್ಭುತವಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಕಟ್ಟುನಿಟ್ಟಿನ ಚುನಾವಣಾ ನಿಯಮಗಳ ಪ್ರಕಾರ, ಮತದಾನ ಮಾಡಲು ಆಕೆ ತನ್ನ ಹಳೆಯ ವಿಳಾಸದ ಮತಗಟ್ಟೆಗೆ ಬರಲೇಬೇಕು ಎಂದು ಆತ ಲೆಕ್ಕ ಹಾಕಿದ್ದ. ಆತನ ಲೆಕ್ಕಾಚಾರ ಹುಸಿಯಾಗಲಿಲ್ಲ; ಮತದಾನದ ಹಕ್ಕು ಚಲಾಯಿಸಲು ಬಂದ ಪತ್ನಿ ಪತಿಯ ಬಲೆಗೆ ಬಿದ್ದಿದ್ದಳು.

ಪೋಲೀಸರು ಆತನನ್ನು ವಶಕ್ಕೆ ಪಡೆದಾಗ ಆತ ಒಂದು ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾನೆ, ಈಕೆಯ ವೋಟರ್ ಐಡಿಯಲ್ಲಿರುವ ನನ್ನ ಹೆಸರನ್ನು ಮೊದಲು ಅಳಿಸಿಹಾಕಿ, ಅದು ಅಳಿಸಿಹೋಗುವವರೆಗೆ ಈಕೆಗೆ ಮತ ಹಾಕಲು ಬಿಡಬೇಡಿ ಎಂದು ಕಿರುಚಾಡಿದ್ದ. ಆದರೆ ಚುನಾವಣಾ ಸಿಬ್ಬಂದಿ ಆತನ ಬೇಡಿಕೆಯನ್ನು ತಿರಸ್ಕರಿಸಿ, ಮಹಿಳೆಗೆ ಮತ ಚಲಾಯಿಸಲು ಅವಕಾಶ ನೀಡಿದರು.

ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:17 pm, Fri, 24 April 26

Source link

Leave a Reply

Your email address will not be published. Required fields are marked *