ಔಪಚಾರಿಕವಾಗಿ ಮೂರ್ನಾಲ್ಕು ಬಾರಿ ಎಪ್ಸ್ಟೀನ್ ಭೇಟಿಯಾಗಿದ್ದೆ; ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಹರ್ದೀಪ್ ಪುರಿ ಸ್ಪಷ್ಟನೆ – Kannada News | Union Minister Hardeep Puri slams Rahul Gandhis charge says Epstein meetings were part of IPI delegation protocol

ನವದೆಹಲಿ, ಫೆಬ್ರವರಿ 11: ಲೋಕಸಭೆ ಅಧಿವೇಶನದಲ್ಲಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸಂಬಂಧಗಳನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ರಾಹುಲ್ ಗಾಂಧಿಯ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಮತ್ತು ಉತ್ತರಗಳನ್ನು ಕೇಳದೆ ಸದನದಿಂದ ಹೊರನಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಸತ್ತಿನ ರಾಹುಲ್ ಗಾಂಧಿಯವರ ಭಾಷಣವನ್ನು ಉಲ್ಲೇಖಿಸಿದ ಹರ್ದೀಪ್ ಪುರಿ, “ನಮ್ಮಲ್ಲಿ ಯುವ ನಾಯಕರೊಬ್ಬರು ಇಂದು ಸಂಸತ್ತಿನ ಮುಂದೆ ಕೆಲವು ವಿಷಯಗಳನ್ನು ಮಂಡಿಸಿದರು. ಅವರಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಅಭ್ಯಾಸವಿದೆ. ಅಪರೂಪಕ್ಕೆ ನಮ್ಮ ದೇಶಕ್ಕೆ ಬರುವ ನಾಯಕ ಸಂಸತ್ತಿಗೆ ಬಂದಾಗ ಮನಬಂದಂತೆ ಆರೋಪ ಮಾಡುತ್ತಾರೆ. ಯಾರೂ ಅವರ ಮಾತನ್ನು ಕೇಳದಿದ್ದಾಗ ಸದನದಿಂದ ಹೊರನಡೆಯುತ್ತಾರೆ. ಅವರು ಇಂದು ತಮ್ಮ ಭಾಷಣದ ನಂತರ ಹೊರಟುಹೋದರು” ಎಂದು ರಾಹುಲ್ ಗಾಂಧಿಯ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆ (ಐಪಿಐ)ಗೆ ಸಂಬಂಧಿಸಿದ ಅಧಿಕೃತ ನಿಯೋಗದ ಭಾಗವಾಗಿ ಮಾತ್ರ ಜೆಫ್ರಿ ಎಪ್ಸ್ಟೀನ್ ಅವರನ್ನು ಭೇಟಿಯಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಪ್ಸ್ಟೀನ್ ಅವರೊಂದಿಗಿನ ಅವರ ಸಭೆಗಳು ಅಧಿಕೃತ ಭೇಟಿಗೆ ಸೀಮಿತವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಸಚಿವ ಹರ್ದೀಪ್ ಪುರಿ ಅವರ ಹೆಸರನ್ನು ಎಪ್ಸ್ಟೀನ್ ಫೈಲ್ಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ ನಂತರ ಈ ಸ್ಪಷ್ಟೀಕರಣ ಬಂದಿದೆ. ಇದು ಲೈಂಗಿಕ ಅಪರಾಧಿಯ ಅಪರಾಧ ಚಟುವಟಿಕೆಗಳನ್ನು ವಿವರಿಸುತ್ತದೆ. ಇದರಲ್ಲಿ ಸಾರ್ವಜನಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ವಲಯವೂ ಸೇರಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲ್ ಕ್ಲಿಂಟನ್ ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಉನ್ನತ ವ್ಯಕ್ತಿಗಳನ್ನು ಈ ಫೈಲ್‌ಗಳಲ್ಲಿ ಹೆಸರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *