Headlines

ಕಂಟೆಂಟ್ ಕ್ರಿಯೇಟರ್ಸ್​ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ಸಚಿವ ವೈಷ್ಣವ್ ಸೂಚನೆ – Kannada News | Content creators should get fair revenue share from digital platforms, says Ashwini Vaishnaw

ನವದೆಹಲಿ, ಫೆಬ್ರುವರಿ 28: ಕುಗ್ರಾಮದಲ್ಲಿ ಕೂತು ತಮಾಷೆಯ ವಿಡಿಯೋಗಳನ್ನು ಮಾಡುವವರಿಂದ ಹಿಡಿದು ಸೃಜನಶೀಲ ಕಲಾವಿದರವರೆಗೂ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಕಂಟೆಂಟ್ ಹಾಕುವ ಜನರಿಗೆ ಖುಷಿಯ ಸುದ್ದಿ ಇದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಕಂಟೆಂಟ್ ಕ್ರಿಯೇಟರ್​ಗಳಿಗೆ ತಮ್ಮ ಆದಾಯದಲ್ಲಿ ನ್ಯಾಯಯುತ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಶನ್ಸ್ ಅಸೋಸಿಯೇಶನ್ (ಡಿಎನ್​ಪಿಎ) ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಮಾಧ್ಯಮ ವೃತ್ತಿಪರರು, ಸೃಜನಶೀಲ ಕಲಾವಿದರು, ಇನ್​ಫ್ಲುಯೆನ್ಸರ್​ಗಳು, ಬರಹಗಾರರು, ಸಂಶೋಧಕರು ಮೊದಲಾದವರು ಈ ಪ್ಲಾಟ್​ಫಾರ್ಮ್​ಗಳನ್ನು ಬಳಸುವುದರಿಂದ ಅದರ ಮೌಲ್ಯದ ಹಂಚಿಕೆ ನ್ಯಾಯಯುತವಾಗಿರಬೇಕು. ಈ ಕ್ರಿಯೇಟರ್​ಗಳು ಡಿಜಿಟಲ್ ಇಕೋಸಿಸ್ಟಂನ ಬೆನ್ನೆಲುಬಾಗಿರುತ್ತಾರೆ. ಆದರೂ ಕೂಡ ಹಲವರಿಗೆ ಸರಿಯಾದ ಮನ್ನಣೆಯಾಗಲೀ, ಸಂಭಾವನೆಯಾಗಲೀ ಸಿಕ್ಕುವುದಿಲ್ಲ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಎ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

‘ಮಾನವ ಅಭಿವೃದ್ಧಿಯು ಯಾವಾಗಲೂ ಕೂಡ ಪ್ರೋತ್ಸಾಹಕಗಳಿಂದ ಪ್ರೇರಿತವಾಗಿರುತ್ತದೆ. ಪ್ರಾಮಾಣಿಕ ಕೆಲಸಕ್ಕೆ ನ್ಯಾಯಯುತವಾದ ಪ್ರಶಂಸೆ ಮತ್ತು ಬಹುಮಾನ ಸಿಗುವ ಖಚಿತ ಭರವಸೆಯ ಅಗತ್ಯ ಇರುತ್ತದೆ. ಕಂಟೆಂಟ್ ಕ್​ರಿಯೇಟರ್​ಗಳಿಗೆ ಉತ್ತೇಜನ ನೀಡಲು ಈ ರೀತಿಯ ಮನ್ನಣೆ ಬಹಳ ಮುಖ್ಯ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿರಲಿ

ಡಿಎನ್​ಪಿಎ ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ ಅಶ್ಚಿನಿ ವೈಷ್ಣವ್ ಅವರು ಡೀಪ್​ಫೇಕ್ ಇತ್ಯಾದಿ ಹಾವಳಿಯ ವಿಚಾರವನ್ನು ಪ್ರಸ್ತಾಪಿಸಿ, ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಹೆಚ್ಚು ಜವಾಬ್ದಾರಿಯುತವಾಗಿರಲಿ ಎಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಡೀಪ್​ಫೇಕ್​ನಂತಹ ನಕಲಿ ಚಿತ್ರ, ಸುಳ್ಳು ಮಾಹಿತಿ ಪ್ರಸರಣ ಇತ್ಯಾದಿ ಅಪಾಯಗಳು ಹೆಚ್ಚುತ್ತಲೇ ಇದ್ದು, ವಿಶ್ವಾದ್ಯಂತ ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಬಗ್ಗೆ ಸಾರ್ವಜನಿಕ ನಂಬಿಕೆ ಕಡಿಮೆ ಆಗುವ ಅಪಾಯ ಇದೆ. ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ತಮ್ಮಲ್ಲಿ ಸೇರ್ಪಡೆಯಾಗುವ ಕಂಟೆಂಟ್ ಬಗ್ಗೆ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅಪಾಯಕಾರಿ ಕಂಟೆಂಟ್​ಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತಹ ವ್ಯವಸ್ಥೆ ರೂಪಿಸಬೇಕು ಎಂದು ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *