ನವದೆಹಲಿ, ಫೆಬ್ರುವರಿ 28: ಕುಗ್ರಾಮದಲ್ಲಿ ಕೂತು ತಮಾಷೆಯ ವಿಡಿಯೋಗಳನ್ನು ಮಾಡುವವರಿಂದ ಹಿಡಿದು ಸೃಜನಶೀಲ ಕಲಾವಿದರವರೆಗೂ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಂಟೆಂಟ್ ಹಾಕುವ ಜನರಿಗೆ ಖುಷಿಯ ಸುದ್ದಿ ಇದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಕಂಟೆಂಟ್ ಕ್ರಿಯೇಟರ್ಗಳಿಗೆ ತಮ್ಮ ಆದಾಯದಲ್ಲಿ ನ್ಯಾಯಯುತ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಶನ್ಸ್ ಅಸೋಸಿಯೇಶನ್ (ಡಿಎನ್ಪಿಎ) ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
‘ಮಾಧ್ಯಮ ವೃತ್ತಿಪರರು, ಸೃಜನಶೀಲ ಕಲಾವಿದರು, ಇನ್ಫ್ಲುಯೆನ್ಸರ್ಗಳು, ಬರಹಗಾರರು, ಸಂಶೋಧಕರು ಮೊದಲಾದವರು ಈ ಪ್ಲಾಟ್ಫಾರ್ಮ್ಗಳನ್ನು ಬಳಸುವುದರಿಂದ ಅದರ ಮೌಲ್ಯದ ಹಂಚಿಕೆ ನ್ಯಾಯಯುತವಾಗಿರಬೇಕು. ಈ ಕ್ರಿಯೇಟರ್ಗಳು ಡಿಜಿಟಲ್ ಇಕೋಸಿಸ್ಟಂನ ಬೆನ್ನೆಲುಬಾಗಿರುತ್ತಾರೆ. ಆದರೂ ಕೂಡ ಹಲವರಿಗೆ ಸರಿಯಾದ ಮನ್ನಣೆಯಾಗಲೀ, ಸಂಭಾವನೆಯಾಗಲೀ ಸಿಕ್ಕುವುದಿಲ್ಲ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಎ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ
‘ಮಾನವ ಅಭಿವೃದ್ಧಿಯು ಯಾವಾಗಲೂ ಕೂಡ ಪ್ರೋತ್ಸಾಹಕಗಳಿಂದ ಪ್ರೇರಿತವಾಗಿರುತ್ತದೆ. ಪ್ರಾಮಾಣಿಕ ಕೆಲಸಕ್ಕೆ ನ್ಯಾಯಯುತವಾದ ಪ್ರಶಂಸೆ ಮತ್ತು ಬಹುಮಾನ ಸಿಗುವ ಖಚಿತ ಭರವಸೆಯ ಅಗತ್ಯ ಇರುತ್ತದೆ. ಕಂಟೆಂಟ್ ಕ್ರಿಯೇಟರ್ಗಳಿಗೆ ಉತ್ತೇಜನ ನೀಡಲು ಈ ರೀತಿಯ ಮನ್ನಣೆ ಬಹಳ ಮುಖ್ಯ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಡಿಜಿಟಲ್ ಪ್ಲಾಟ್ಫಾರ್ಮ್ಗಳು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿರಲಿ
ಡಿಎನ್ಪಿಎ ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ ಅಶ್ಚಿನಿ ವೈಷ್ಣವ್ ಅವರು ಡೀಪ್ಫೇಕ್ ಇತ್ಯಾದಿ ಹಾವಳಿಯ ವಿಚಾರವನ್ನು ಪ್ರಸ್ತಾಪಿಸಿ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಹೆಚ್ಚು ಜವಾಬ್ದಾರಿಯುತವಾಗಿರಲಿ ಎಂದು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?
ಡೀಪ್ಫೇಕ್ನಂತಹ ನಕಲಿ ಚಿತ್ರ, ಸುಳ್ಳು ಮಾಹಿತಿ ಪ್ರಸರಣ ಇತ್ಯಾದಿ ಅಪಾಯಗಳು ಹೆಚ್ಚುತ್ತಲೇ ಇದ್ದು, ವಿಶ್ವಾದ್ಯಂತ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಬಗ್ಗೆ ಸಾರ್ವಜನಿಕ ನಂಬಿಕೆ ಕಡಿಮೆ ಆಗುವ ಅಪಾಯ ಇದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳು ತಮ್ಮಲ್ಲಿ ಸೇರ್ಪಡೆಯಾಗುವ ಕಂಟೆಂಟ್ ಬಗ್ಗೆ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅಪಾಯಕಾರಿ ಕಂಟೆಂಟ್ಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತಹ ವ್ಯವಸ್ಥೆ ರೂಪಿಸಬೇಕು ಎಂದು ವೈಷ್ಣವ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
