ಬೆಂಗಳೂರು, ಜು.18: ವೀಕೆಂಡ್‌ನಲ್ಲಿ ಎಲ್ಲಾದರೂ ಸುಂದರ ಪ್ರಕೃತಿಯ ಮಡಿಲಿಗೆ ಸಾಗಬೇಕು, ಜೊತೆಗೆ ದೇವರ ದರ್ಶನ ಪಡೆಯಬೇಕು ಎಂದು ಯೋಜಿಸುತ್ತಿರುವ ಪ್ರವಾಸಿಗರಿಗೆ ಸುವರ್ಣಾವಕಾಶವೊಂದು ಇಲ್ಲಿದೆ ನೋಡಿ. ಭಾರತದ ಎರಡನೇ ಅತಿ ಎತ್ತರದ ಜಲಪಾತವಾದ ವಿಶ್ವಪ್ರಸಿದ್ಧ ಜೋಗ ಜಲಪಾತ (Jog Falls) ಹಾಗೂ ಶರಾವತಿಯ ಹಿನ್ನೀರಿನ ನಡುವೆ ಕಂಗೊಳಿಸುವ ಸಿಗಂದೂರು (Siganduru) ಕ್ಷೇತ್ರಕ್ಕೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ನ್ನು kstdc ಘೋಷಣೆ ಮಾಡಿದೆ.
ಭೇಟಿ ನೀಡುವ ಪ್ರಮುಖ ಪ್ರವಾಸಿ ತಾಣಗಳು:
ಜೋಗ ಜಲಪಾತ: ಶರಾವತಿ ನದಿಯು ಬರೋಬ್ಬರಿ 830 ಅಡಿ ಎತ್ತರದಿಂದ ಧುಮುಕುವ ಮೂಲಕ ಸೃಷ್ಟಿಯಾಗಿರುವ ಜೋಗ ಜಲಪಾತವು ದೇಶದ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ‘ಗೇರುಸೊಪ್ಪೆ ಜಲಪಾತ’ ಹಾಗೂ ‘ಜೋಗದ ಗುಂಡಿ’ ಎಂದೂ ಕರೆಯಲಾಗುತ್ತದೆ.
ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ಸಿಗಂದೂರು: ಶರಾವತಿ ನದಿಗೆ ನಿರ್ಮಿಸಲಾದ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಮೂರು ಕಡೆ ಆವೃತವಾಗಿರುವ ಸಿಗಂದೂರು ಗ್ರಾಮವು ಅತ್ಯಂತ ಸುಂದರ ಪ್ರಕೃತಿಯನ್ನು ಹೊಂದಿದೆ. ಇಲ್ಲಿನ ಪ್ರಸಿದ್ಧ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ನಿತ್ಯ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ಪ್ಯಾಕೇಜ್‌ನ ಪ್ರಮುಖ ಸೌಲಭ್ಯಗಳು:
ಸಾರಿಗೆ ವ್ಯವಸ್ಥೆ: ಸುಖಕರ ಪ್ರಯಾಣಕ್ಕಾಗಿ ಅತ್ಯಾಧುನಿಕ ಎಸಿ ಐಷಾರಾಮಿ ಕೋಚ್ (A/c Deluxe Coach) ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಸತಿ ಸೌಲಭ್ಯ: ಪ್ರವಾಸಿಗರು ಫ್ರೆಶ್ ಅಪ್ ಆಗಲು ಪ್ರಸಿದ್ಧ ‘ಜೀವನ್ ಲಾಡ್ಜ್’ ನಲ್ಲಿ ವಾಸ್ತವ್ಯದ ವ್ಯವಸ್ಥೆ ಇರಲಿದೆ.
ವೃತ್ತಿಪರ ಗೈಡ್: ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಹಾಗೂ ಇತಿಹಾಸವನ್ನು ತಿಳಿಸಿಕೊಡಲು ಪರಿಣಿತ ಗೈಡ್ ಸೌಲಭ್ಯ ಲಭ್ಯವಿರಲಿದೆ.
LTC ಸೌಲಭ್ಯ: ರಾಜ್ಯ, ಕೇಂದ್ರ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಗೆ ಇಲಾಖಾ ನಿಯಮಾವಳಿಗಳ ಅನ್ವಯ ಎಲ್‌ಟಿಸಿ (LTC) ಸೌಲಭ್ಯ ಒದಗಿಸಲಾಗುವುದು.
ಪ್ರವಾಸ ಪ್ಯಾಕೇಜ್ ದರ ಪಟ್ಟಿ:
ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ರೂಮ್ ಹಂಚಿಕೆಯ ಆಧಾರದ ಮೇಲೆ ದರವನ್ನು ನಿಗದಿಪಡಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಜೋಗದ ಸಿರಿ ಹಾಗೂ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ಇಚ್ಛಿಸುವ ಸಾರ್ವಜನಿಕರು ಈ ಪ್ರವಾಸ ಪ್ಯಾಕೇಜ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
