ಕತಾರ್ ಮಾಜಿ ದೊರೆ ಶೇಖ್ ಹಮದ್ ಬಿನ್ ಖಲೀಫ ಅಲ್ ಥಾನಿ ನಿಧನ; ಗೌರವಾರ್ಥವಾಗಿ ಭಾರತದಿಂದ ಒಂದು ದಿನ ರಾಷ್ಟ್ರೀಯ ಶೋಕಾಚರಣೆ – Kannada News | Former Qatar Emir Sheikh Hamad passes away, India declares 1 day national mourning on July 13th

ಭಾರತದಿಂದ ರಾಷ್ಟ್ರೀಯ ಶೋಕಾಚರಣೆImage Credit source: PTI

ನವದೆಹಲಿ, ಜುಲೈ 12: ಕತಾರ್‌ನ ಮಾಜಿ ದೊರೆ (Emir) ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ (Sheikh Hamad bin Khalifa Al-Thani) ಅವರ ನಿಧನಕ್ಕೆ ಗೌರವಾರ್ಥವಾಗಿ ಭಾರತ ಸರ್ಕಾರವು ದೇಶಾದ್ಯಂತ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು (National Mourning) ಘೋಷಿಸಿದೆ. ಕತಾರ್ ದೇಶದ ಆಧುನಿಕ ಶಿಲ್ಪಿ ಎಂದೇ ಹೆಸರಾಗಿದ್ದ ಶೇಖ್ ಹಮದ್ (74 ವರ್ಷ) ಅವರು ಇವತ್ತು ಭಾನುವಾರ ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಸಂತಾಪ ಸೂಚಿಸಲು ಭಾರತ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 13, ಸೋಮವಾರದಂದು ದೇಶದಾದ್ಯಂತ ಅಧಿಕೃತವಾಗಿ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಶೋಕಾಚರಣೆಯ ದಿನದಂದು ದೇಶಾದ್ಯಂತ ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸುವ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ (Half-mast) ಹಾರಿಸಲಾಗುತ್ತದೆ. ಶೋಕಾಚರಣೆಯ ದಿನದಂದು ಸರ್ಕಾರಿ ಮಟ್ಟದಲ್ಲಿ ಯಾವುದೇ ರೀತಿಯ ಅಧಿಕೃತ ಮನೋರಂಜನಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.

ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಯಾರು?

ಇವರು 1995 ರಿಂದ 2013 ರವರೆಗೆ ಕತಾರ್ ದೇಶದ ದೊರೆಯಾಗಿ (Emir) ಆಡಳಿತ ನಡೆಸಿದ್ದರು. ಇವರ ಆಡಳಿತಾವಧಿಯಲ್ಲಿ ಕತಾರ್ ದೇಶವು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮತ್ತು ರಾಜತಾಂತ್ರಿಕವಾಗಿ ಭಾರಿ ಬೆಳವಣಿಗೆಯನ್ನು ಕಂಡಿತು. ವಿಶೇಷವಾಗಿ ನೈಸರ್ಗಿಕ ಅನಿಲ (LNG) ಉದ್ಯಮದಲ್ಲಿ ಕತಾರ್ ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಲು ಇವರ ಕೊಡುಗೆ ಅಪಾರವಾಗಿತ್ತು. 2013 ರಲ್ಲಿ ಇವರು ತಮ್ಮ ಮಗ ಹಾಗೂ ಪ್ರಸ್ತುತ ದೊರೆಯಾಗಿರುವ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.

ಇದನ್ನೂ ಓದಿ: ನಿನ್ನೆ ಕೆಂಪು ಕೋಟೆ, ಇವತ್ತು ತಾಜ್ ಹೋಟೆಲ್; ಎರಡು ದಿನದಲ್ಲಿ ಎರಡು ಹುಸಿ ಬಾಂಬ್ ಬೆದರಿಕೆ

ಭಾರತ ಮತ್ತು ಕತಾರ್ ಬಾಂಧವ್ಯ

ಭಾರತ ಮತ್ತು ಕತಾರ್ ದೇಶಗಳ ನಡುವೆ ಐತಿಹಾಸಿಕ ಹಾಗೂ ಆಪ್ತ ರಾಜತಾಂತ್ರಿಕ ಬಾಂಧವ್ಯವಿದೆ. ಭಾರತಕ್ಕೆ ಅತಿ ಹೆಚ್ಚು ನೈಸರ್ಗಿಕ ಅನಿಲ ಪೂರೈಸುವ ದೇಶಗಳಲ್ಲಿ ಕತಾರ್ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ, ಲಕ್ಷಾಂತರ ಭಾರತೀಯರು ಕತಾರ್‌ನಲ್ಲಿ ನೆಲೆಸಿದ್ದು, ಅಲ್ಲಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ಈ ದ್ವಿಪಕ್ಷೀಯ ಸ್ನೇಹ ಮತ್ತು ಗೌರವದ ಸಂಕೇತವಾಗಿ ಭಾರತ ಸರ್ಕಾರವು ಈ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *