15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಕ್ರಿಕೆಟ್ ಲೋಕದಲ್ಲಿ ಎಬ್ಬಿಸಿರುವ ಸುನಾಮಿ ಭಾರತ ಕ್ರಿಕೆಟ್ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಅಂಡರ್19 ತಂಡದಲ್ಲಿ ಅಬ್ಬರಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ವೈಭವ್ ಸೂರ್ಯವಂಶಿ ಇದೀಗ 2026 ರ ಐಪಿಎಲ್‌ನಲ್ಲಿ (IPL 2026) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೃದಯಗಳನ್ನು ಗೆದ್ದಿದ್ದಾರೆ. ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಇಲ್ಲಿಯವರೆಗೆ 400 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ 37 ಸಿಕ್ಸರ್ಗಳನ್ನು ಹೊಡೆದಿರುವ ಸೂರ್ಯವಂಶಿ ಇದೀಗ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಭಟಿಸಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಐಪಿಎಲ್ 2026 ರ 43ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಸೂರ್ಯವಂಶಿ ಬಗ್ಗೆ ಮಹತ್ವದ ಸಂಗತಿಯನ್ನು ಹಂಚಿಕೊಂಡಿರುವ ದೆಹಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul), ವೈಭವ್ ಐಪಿಎಲ್‌ನಲ್ಲಿ ಎರಡು ಶತಕಗಳನ್ನು ಗಳಿಸುವ ಮೂಲಕ ಇಂತಹ ಸಾಧನೆ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದಿದ್ದಾರೆ.
ಸೂರ್ಯವಂಶಿಯನ್ನು ಹೊಗಳಿದ ರಾಹುಲ್
ವೈಭವ್ ಸೂರ್ಯವಂಶಿ ಹೊಸ ಯುಗದ ಕ್ರಿಕೆಟಿಗ ಮತ್ತು ಅವರು ಮಾಡುತ್ತಿರುವುದು ಅದ್ಭುತವಾಗಿದೆ ಎಂದಿರುವ ಕೆ.ಎಲ್. ರಾಹುಲ್, ‘ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್ ಅನ್ನು ಬಿರುಗಾಳಿಯಂತೆ ತೆಗೆದುಕೊಂಡಿದ್ದಾರೆ. 15 ನೇ ವಯಸ್ಸಿನಲ್ಲಿ ಎರಡು ಶತಕಗಳನ್ನು ಬಾರಿಸುವುದನ್ನು ನಾನು ಕನಸು ಕೂಡ ಕಂಡಿಲ್ಲ. ವೈಭವ್ ಜೊತೆ ಆಯುಷ್ ಮ್ಹಾತ್ರೆ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಚೆನ್ನೈ ತಂಡವು ವೇಗವಾಗಿ ರನ್ ಗಳಿಸಲು ಸಹಾಯ ಮಾಡಿದ್ದಾರೆ. ಭಾರತದಲ್ಲಿ ಉದಯೋನ್ಮುಖ ಪ್ರತಿಭೆಗಳ ಸಂಖ್ಯೆ ಆಶ್ಚರ್ಯಕರವಾಗಿದೆ. ನಾಲ್ಕೈದು ವರ್ಷಗಳ ಹಿಂದೆ, ನಮಗೆ ಸಿಕ್ಸ್-ಹಿಟ್ಟಿಂಗ್ ಆಟಗಾರರ ಕೊರತೆಯಿದೆ ಎಂಬ ಕಳವಳವಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಬ್ಯಾಟಿಂಗ್‌ನಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು, ಆದರೆ ಇಂದು ಭಾರತೀಯ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಇದೆಲ್ಲವೂ ಐಪಿಎಲ್‌ನಿಂದಾಗಿ. ಈ ನಿರ್ಭೀತ ಆಟಗಾರರು ಟಿ20 ಆಡುವ ವಿಧಾನವನ್ನು ಬದಲಾಯಿಸುತ್ತಿದ್ದಾರೆ ಎಂದಿದ್ದಾರೆ.
IPL 2026: ಒಂದು ಫೋಟೋಗೆ 100 ರೂ. ಕೇಳಿದ ವೈಭವ್; ವಿಡಿಯೋ ವೈರಲ್
ಧೋನಿಗೆ ಸರಿಸಾಟಿಯಾಗಬೇಕು- ರಾಹುಲ್
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕೆ.ಎಲ್. ರಾಹುಲ್, ‘ವೈಯಕ್ತಿಕ ಮೈಲಿಗಲ್ಲುಗಳಲ್ಲಿ ಅರ್ಥವಿಲ್ಲ. ಧೋನಿಯ ಐದು ಐಪಿಎಲ್ ಪ್ರಶಸ್ತಿಗಳನ್ನು ಸರಿಗಟ್ಟಲು ಬಯಸುತ್ತೇನೆ. ನಾನು ರನ್‌ಗಳ ಬದಲು, ಟ್ರೋಫಿಗಳನ್ನು ಗೆಲ್ಲುವುದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಇದರ ಜೊತೆಗೆ ವೈಯಕ್ತಿಕ ಸಾಧನೆಗಳು ಕೂಡ ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂಬ ವಿಶ್ವಾಸವನ್ನು ನೀಡುತ್ತವೆ. ಆದರೆ ನನಗೆ ಸಂತೋಷವನ್ನುಂಟುಮಾಡುವುದು ಎಂ.ಎಸ್. ಧೋನಿ ಗೆದ್ದಷ್ಟು ಟ್ರೋಫಿಗಳನ್ನು ಗೆಲ್ಲುವುದು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
